82 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ, ಬೆಚ್ಚಿಬೀಳಿಸುವ ಅಮಾನುಷ ಕೃತ್ಯ

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 82 ವರ್ಷದ ಗಿರಿಜನ ವೃದ್ಧೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಮಾನವೀಯತೆಯನ್ನೇ ಪ್ರಶ್ನಿಸುವಂತಿದ್ದು, ಪೊಲೀಸರ ವಿಳಂಬ ಕ್ರಮವೂ ಗಂಭೀರ ಚರ್ಚೆಗೆ ಕಾರಣವಾಗಿದೆ.

  • 82 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ
  • ಪಕ್ಕದ ಮನೆಯ ಯುವಕನ ಮೇಲೆ ಆರೋಪ
  • ಪೊಲೀಸ್ ತನಿಖೆ, FIR ಬಳಿಕ ವಿಚಾರಣೆ ಆರಂಭ

Madhya Pradesh: ಮಾನವೀಯತೆಯನ್ನು ನಾಚಿಕೆಪಡಿಸುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ (Rewa district) ಬೆಳಕಿಗೆ ಬಂದಿದೆ. ಸಿರ್ಮೌರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾತ್ರಿ ವೇಳೆ ಒಂಟಿಯಾಗಿದ್ದ 82 ವರ್ಷದ ಗಿರಿಜನ ವೃದ್ಧೆಯ ಮನೆಗೆ ಪಕ್ಕದ ಮನೆಯ ಯುವಕ ನುಗ್ಗಿ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.

ವೃದ್ಧೆಯ ಹೇಳಿಕೆಯಂತೆ, ಆರೋಪಿ ಕತ್ತು ಹಿಸುಕಿದ್ದು, ಆಕೆಗೆ ಸೃಹ ತಪ್ಪಿದ ಸಮಯದಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ಘಟನೆ ಬಳಿಕ ವೃದ್ಧೆ ಕುಟುಂಬದವರಿಗೆ ವಿಷಯ ತಿಳಿಸಿದ್ದು, ಅವರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ. ಆದರೆ ಆರಂಭದಲ್ಲಿ FIR ದಾಖಲಾಗದೇ, ವೈದ್ಯಕೀಯ ಪರೀಕ್ಷೆಯೂ ನಡೆಯಲಿಲ್ಲ ಎಂಬ ಆರೋಪ ಕುಟುಂಬದಿಂದ ಕೇಳಿಬಂದಿದೆ. ನ್ಯಾಯ ಸಿಗದೆ ಹೋದ ಭಾವನೆಯಿಂದ ಕುಟುಂಬದವರು ನಂತರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರು.

ಉನ್ನತಾಧಿಕಾರಿಗಳ ಹಸ್ತಕ್ಷೇಪ

ವಿಷಯ ಉನ್ನತಾಧಿಕಾರಿಗಳ ಗಮನಕ್ಕೆ ಬಂದ ಬಳಿಕ, ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಆಧರಿಸಿ FIR ದಾಖಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. Madhya Pradesh Police ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು, ದೂರುದಾರರ ಹೇಳಿಕೆ ಹಾಗೂ ವೈದ್ಯಕೀಯ ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories