ಹಾಸಿಗೆ ಹಿಡಿದ ತಾಯಿಯನ್ನು ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೋದ ಮಗ, ಹಸಿವಿನಿಂದ ಸಾವು

ಹಾಸಿಗೆ ಹಿಡಿದ ತಾಯಿಯನ್ನು ಮಗ ಮನೆಯಲ್ಲಿಯೇ ಬಿಟ್ಟು ಬೀಗ ಹಾಕಿದ್ದಾನೆ. ಆಕೆ ಹಾಸಿಗೆಯಿಂದ ಮೇಲೇಳಲಾಗದೆ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾಳೆ.

ಭೋಪಾಲ್ (Bhopal): ಹಾಸಿಗೆ ಹಿಡಿದಿದ್ದ ವೃದ್ಧ ತಾಯಿಯನ್ನು ಮಗ ಮನೆಯಲ್ಲಿ ಬಿಟ್ಟು ಬೀಗ ಹಾಕಿ ಹೋಗಿದ್ದಾನೆ. ಕಟುಕ ಮಗ ತಾಯಿಯನ್ನು ಬಿಟ್ಟು ತನ್ನ ಕುಟುಂಬದೊಂದಿಗೆ ಬೇರೆ ಊರಿಗೆ ಹೋಗಿದ್ದಾನೆ. ಆದರೆ ಹಾಸಿಗೆಯಿಂದ ಮೇಲೇಳಲಾಗದೆ ಆಕೆ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಪೊಲೀಸರು ಆಕೆಯ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಈ ಘಟನೆ ನಡೆದಿದೆ. 80 ವರ್ಷದ ಲಲಿತಾ ದುಬೆ ಅವರು ತಮ್ಮ ಮಗ ಅರುಣ್ ಜೊತೆ ಭೋಪಾಲ್‌ನ ನಿಶಾತ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದರು.

ಆದರೆ ಆಕೆಯ ಮಗ ಇದ್ದಕ್ಕಿದ್ದಹಾಗೆ ಮನೆಯಲ್ಲೇ ಬಿಟ್ಟು ಮನೆಗೆ ಬೀಗ ಹಾಕಿ ಅವನ ಹೆಂಡತಿ ಮತ್ತು ಮಗನೊಂದಿಗೆ ಉಜ್ಜಯಿನಿಗೆ ಹೊರತು ಹೋಗಿದ್ದಾನೆ, ನಂತರ ಇಂದೋರ್‌ನಲ್ಲಿ ನೆಲೆಸಿರುವ ತನ್ನ ಸಹೋದರ ಅಜಯ್‌ಗೆ ಈ ವಿಷಯ ತಿಳಿಸಿದ್ದಾನೆ.

ಹಾಸಿಗೆ ಹಿಡಿದ ತಾಯಿಯನ್ನು ಮನೆಯಲ್ಲೇ ಬಿಟ್ಟು ಬೀಗ ಹಾಕಿ ಹೋದ ಮಗ, ಹಸಿವಿನಿಂದ ಸಾವು

ಈ ಬಗ್ಗೆ ತಿಳಿದ ಮತ್ತೊಬ್ಬ ಮಗ ಅಜಯ್ ತಾಯಿಯ ಸ್ಥಿತಿ ಬಗ್ಗೆ ನೆನೆದು ಕಂಗಾಲಾಗಿದ್ದಾನೆ, ತಕ್ಷಣ ಭೋಪಾಲ್ ನಲ್ಲಿ ತಂಗಿದ್ದ ತನ್ನ ಗೆಳೆಯನಿಗೆ ಕರೆ ಮಾಡಿ ತನ್ನ ತಾಯಿಯನ್ನು ನೋಡಲು ತಿಳಿಸಿದ್ದಾನೆ. ಸ್ನೇಹಿತ ಮನೆಗೆ ಬಂದು ನೋಡಿದಾಗ ವೃದ್ಧ ತಾಯಿ ಶವವಾಗಿ ಪತ್ತೆಯಾಗಿದ್ದಾಳೆ.

ಮತ್ತೊಂದೆಡೆ, ಈ ಮಾಹಿತಿ ತಿಳಿದ ಪೊಲೀಸರು ವೃದ್ಧೆ ಲಲಿತಾ ದುಬೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. 24 ಗಂಟೆಗಳ ಕಾಲ ಏನನ್ನೂ ತಿನ್ನದೆ, ನೀರು ಸಹ ಕುಡಿಯದೆ ಹಾಸಿಗೆಯಿಂದ ಏಳಲು ಸಾಧ್ಯವಾಗದೆ ಹಸಿವು ಮತ್ತು ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಜಯ್ ದೂರಿನ ಮೇರೆಗೆ ಪೊಲೀಸರು ವೃದ್ಧೆಯ ಪುತ್ರ ಅರುಣ್ ವಿರುದ್ಧ ಹಿರಿಯ ನಾಗರಿಕರ ಕಾಯ್ದೆಯ ಹಲವು ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Elderly Woman Dies of Hunger After Son Locks Her Inside Home in Bhopal

English Summary
Related Stories