ಈ ರೈಲಿನಲ್ಲಿ ಎಲ್ಲಾ ಫ್ರೀ ಫ್ರೀ ಫ್ರೀ.. ಟಿಕೆಟ್ ತಗೊಳ್ಳೋದೇ ಬೇಡ! ಉಚಿತ ಪ್ರಯಾಣ
ದೇಶದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಬಹುದಾದ ಏಕೈಕ ರೈಲು ಮಾರ್ಗ ಅಂದ್ರೆ ಭಾಕ್ರ ನಂಗಲ್ ರೈಲು ಮಾರ್ಗ. ಕಳೆದ 75 ವರ್ಷಗಳಿಂದ ಈ ಮಾರ್ಗವಾಗಿ ಟ್ರೈನಿನಲ್ಲಿ ಪ್ರಯಾಣಿಸುವುದಕ್ಕೆ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡಬೇಕಾಗಿಲ್ಲ.
- ಈ ರೈಲಿನಲ್ಲಿ ಪ್ರಯಾಣಿಸುವುದಕ್ಕೆ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ
- 13 ಕಿಲೋ ಮೀಟರ್ ಚಲಿಸುವ ರೈಲು ಮೂರು ಸುರಂಗ ಮಾರ್ಗಗಳನ್ನು ಹೊಂದಿದೆ
- 75 ವರ್ಷಗಳ ನಂತರವೂ ಭಾಕ್ರ ನಂಗಲ್ ರೈಲು ಸಂಪೂರ್ಣ ಉಚಿತ
ದೇಶದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಸಬಹುದಾದ ಏಕೈಕ ಸಾರಿಗೆ ಅಂದ್ರೆ ಅದು ರೈಲ್ವೆ ಸಾರಿಗೆ. ದೇಶದಲ್ಲಿ ಅತಿ ದೊಡ್ಡ ಸಾರಿಗೆ ಜಾಲವನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರತಿದಿನ ಲಕ್ಷಾಂತರ ಜನ ರೈಲ್ವೆ ಸಾರಿಗೆಯನ್ನು ಅವಲಂಬಿಸಿ ಪ್ರಯಾಣ ಮಾಡುತ್ತಾರೆ.
ಇನ್ನು ರೈಲಿನಲ್ಲಿ ಪ್ರಯಾಣಿಸುವಾಗ ಅದಕ್ಕೆ ಅದರದೇ ಆದ ನಿಯಮಗಳು ಇವೆ. ಮೊಟ್ಟಮೊದಲನೆಯದಾಗಿ, ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣಕ್ಕೆ ಅವಕಾಶವಿಲ್ಲ. ಒಂದು ವೇಳೆ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಮಾಡಿದರೆ ದಂಡಪಾವತಿಸಬೇಕಾಗುತ್ತದೆ.
ಟ್ರೈನ್ ನಲ್ಲಿ ಪ್ರಯಾಣಿಸುವಾಗ, ಟಿಕೆಟ್ ಖರೀದಿ ಮಾಡ್ದೆ ಪ್ರಯಾಣ ಮಾಡಿದ್ರೆ ಅಪರಾಧ ಅನ್ನುವುದು ನಮಗೂ ಗೊತ್ತು ಇದರಲ್ಲಿ ವಿಶೇಷತೆ ಏನಿದೆ ಅಂತ ನೀವು ಕೇಳುತ್ತೀರಾ?
ಹೌದು, ಇದರಲ್ಲಿ ವಿಶೇಷತೆ ಇಲ್ಲ, ಆದರೆ ವಿಶೇಷತೆಯನ್ನು ಹೊಂದಿರುವ ಒಂದು ಟ್ರೈನ್ ಬಗ್ಗೆ ನಿಮಗೆ ಹೇಳಲೇಬೇಕು ಈ ಟ್ರೈನ್ ನಲ್ಲಿ ನೀವು ಪ್ರಯಾಣಿಸುವುದಕ್ಕೆ ಒಂದೇ ಒಂದು ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಸಂಪೂರ್ಣವಾಗಿ ಉಚಿತವಾಗಿ ಪ್ರಯಾಣ ಮಾಡಬಹುದು.
ಭಾಕ್ರಾ-ನಂಗಲ್ ಟ್ರೈನ್ !
ದೇಶದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಬಹುದಾದ ಏಕೈಕ ರೈಲು ಮಾರ್ಗ ಅಂದ್ರೆ ಭಾಕ್ರ ನಂಗಲ್ ರೈಲು ಮಾರ್ಗ. ಕಳೆದ 75 ವರ್ಷಗಳಿಂದ ಈ ಮಾರ್ಗವಾಗಿ ಟ್ರೈನಿನಲ್ಲಿ ಪ್ರಯಾಣಿಸುವುದಕ್ಕೆ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡಬೇಕಾಗಿಲ್ಲ.
ಭಾಕ್ರ ನಂಗಲ್ ಟ್ರೈನ್ 1948ರಲ್ಲಿ ಆರಂಭವಾಯಿತು. ಮೊದಲು ಕಾರ್ಮಿಕರನ್ನು ಮತ್ತು ಸರಕುಗಳನ್ನು ಸಾಗಿಸಲು ಇರುವಂತಹ ಉಗಿಬಂಡಿ ಇದಾಗಿತ್ತು. ನಂತರದ ದಿನಗಳಲ್ಲಿ ಇಂಧನ ಟ್ರೈನ್ ಆಗಿ ಮಾರ್ಪಟ್ಟು, ಗಂಟೆಗೆ 18 ರಿಂದ 20 ಲೀಟರ್ ಇಂಧನ ಬಳಕೆ ಮಾಡಲಾಗುತ್ತದೆ.
ಭಾಕ್ರಾ ನಂಗಲ್ ರೈಲು ಮಾರ್ಗದ ವೈಶಿಷ್ಟ್ಯತೆ!
ಸಟ್ಲೆಜ್ ನದಿ ಮತ್ತು ಶಿವಾಲಿಕ್ ಬೆಟ್ಟಗಳ ನಡುವೆ 13 ಕಿಲೋಮೀಟರ್ ವರೆಗೆ ಚಲಿಸುವ ಈ ರೈಲು ಪ್ರವಾಸಿಗರಿಗೆ ಅತ್ಯದ್ಭುತ ಅನುಭವವನ್ನು ನೀಡುತ್ತದೆ, ಇಲ್ಲಿನ ರೈಲು ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.
ದಿನಕ್ಕೆ ಸುಮಾರು 800ಕ್ಕೂ ಅಧಿಕ ಪ್ರಯಾಣಿಕರು ಈ ಮಾರ್ಗವಾಗಿ ಚಲಿಸುತ್ತಾರೆ. ಪಂಜಾಬ್ ನ ನಂಗಲ್ ಮತ್ತು ಹಿಮಾಚಲ ಪ್ರದೇಶದ ಭಾಕ್ರ ನಡುವೆ ಈ ರೈಲು ಚಲಿಸುತ್ತದೆ. ವಿಶೇಷ ಅಂದ್ರೆ ಮೂರು ಸುರಂಗ ಮಾರ್ಗಗಳನ್ನು ಹಾದು ಹೋಗುತ್ತದೆ. ಇಲ್ಲಿ ಆರು ಸ್ಟೇಷನ್ ಗಳನ್ನು ನಿರ್ಮಿಸಲಾಗಿದೆ. ನೀವು 13 ಕಿಲೋ ಮೀಟರ್ ಪ್ರಯಾಣಿಸಿದರೆ ಒಂದು ಕ್ಷಣಕ್ಕೂ ಕಣ್ಣು ಮುಚ್ಚದೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತೀರಿ.
ಉಚಿತ ಪ್ರಯಾಣ ಯಾಕೆ?
ಭಾಕ್ರಾ ಬಿಯಾಸ್ ಮ್ಯಾನೇಜ್ಮೆಂಟ್ ಬೋರ್ಡ್ (BBMB) ಸಾಮಾನ್ಯ ರೈಲ್ವೆ ಮಂಡಳಿಗಿಂತಲೂ ವಿಭಿನ್ನವಾದ ಕಾರ್ಯವನ್ನು ನಿರ್ವಹಿಸುತ್ತದೆ. 75 ವರ್ಷಗಳ ಹಿಂದಿನ ಕಾರ್ಯವನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಸಲುವಾಗಿ ಈಗಲೂ ಉಚಿತವಾಗಿ ಈ ರೈಲನ್ನು ಓಡಿಸಲಾಗುತ್ತಿದೆ.
ಸ್ವಾತಂತ್ರ್ಯದ ನಂತರ ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು ಸ್ಥಾಪಿಸುವಲ್ಲಿ ಈ ಮಾರ್ಗದ ರೈಲಿನ ಕೊಡುಗೆ ದೊಡ್ಡದು. ಹೀಗಾಗಿ ಈ ದುಬಾರಿ ಸಮಯದಲ್ಲಿಯೂ ಕೂಡ ಉಚಿತವಾಗಿ ರೈಲು ಒದಗಿಸಲಾಗಿದೆ.
1953ರಲ್ಲಿ ಡೀಸೆಲ್ ಇಂಜಿನ್ ರೈಲನ್ನು ಓಡಿಸಲು ಆರಂಭಿಸಲಾಯಿತು. ದೇಶದ ಪರಂಪರೆಯನ್ನು ಸಾರುವಂತ ಕೈಗಾರಿಕೆಯಲ್ಲಿ ಆಗಿರುವ ಅಭಿವೃದ್ಧಿಯನ್ನು ಮೆಲಕು ಹಾಕುವಂತಹ ಭಾಕ್ರ ನಂಗಲ್ ರೈಲು ಮಾರ್ಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
Everything is free on this train, No ticket needed Free travel