ಎಟಿಎಂ ಯಂತ್ರಗಳಿಂದಲೇ ನಕಲಿ ₹500 ರೂಪಾಯಿ ನೋಟುಗಳ ಹಾವಳಿ! ಗ್ರಾಹಕರಲ್ಲಿ ಆತಂಕ

ಎಟಿಎಂ ಯಂತ್ರಗಳಿಂದಲೇ ನಕಲಿ ಹಾಗೂ ಹರಿದ ₹500 ರೂಪಾಯಿ ನೋಟುಗಳು ಹೊರಬರುತ್ತಿರುವ ಘಟನೆ ಪಂಜಾಬ್‌ನಲ್ಲಿ ಬೆಳಕಿಗೆ ಬಂದಿದೆ. ಗ್ರಾಹಕರಲ್ಲಿ ಆತಂಕ ಹೆಚ್ಚಿಸಿರುವ ಈ ಪ್ರಕರಣಕ್ಕೆ ಈಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Punjab ATM: ಬ್ಯಾಂಕ್ ಎಟಿಎಂಗಳು ಸಾಮಾನ್ಯವಾಗಿ ಸುರಕ್ಷಿತವೆಂಬ ನಂಬಿಕೆ ಜನರಲ್ಲಿ ಗಟ್ಟಿಯಾಗಿ ನೆಲಸಿದೆ. ಆದರೆ ಜಲಂಧರ್‌ನಲ್ಲಿ ನಡೆದ ಘಟನೆ ಈ ನಂಬಿಕೆಗೆ ಗುದ್ದು ನೀಡುವಂತಾಗಿದೆ. ಇಂಡಸ್‌ಇಂಡ್ ಬ್ಯಾಂಕ್ ಎಟಿಎಂನಿಂದ ಹರಿದ ಹಾಗೂ ನಕಲಿ ₹500 ರೂಪಾಯಿ ನೋಟುಗಳು ಹೊರಬಂದಿದ್ದು, ಗ್ರಾಹಕರು ಗಾಬರಿಗೊಂಡಿದ್ದಾರೆ.

ನಕಲಿ ನೋಟನ್ನು ಕಂಡ ಗ್ರಾಹಕರ ಆಕ್ರೋಶ

ಇಂಡಸ್‌ಇಂಡ್ ಬ್ಯಾಂಕ್ ಎಟಿಎಂನಲ್ಲಿ ಮೊದಲು ಒಬ್ಬ ವ್ಯಕ್ತಿ ₹10,000 ವಿತ್‌ಡ್ರಾ ಮಾಡಿದಾಗಲೇ ಹರಿದ ಹಾಗೂ ನಕಲಿ ₹500 ನೋಟುಗಳು ಹೊರಬಂದವು. ಅದರ ಕೆಲವೇ ಹೊತ್ತಿನಲ್ಲಿ ಮತ್ತೊಬ್ಬ ಗ್ರಾಹಕ ₹4,000 ತೆಗೆದುಕೊಳ್ಳಲು ಯತ್ನಿಸಿದರೂ ಇದೇ ರೀತಿಯ ನಕಲಿ ನೋಟುಗಳು ಹೊರಬಂದವು. ಈ ನೋಟುಗಳಲ್ಲಿ RBI ಮುದ್ರೆ ಹಾಗೂ ಹಸಿರು ಗೀರು ಕಾಣಿಸದೇ ಇರುವುದು ಕೂಡ ಶಂಕೆಗೆ ಕಾರಣವಾಯಿತು.

ಬ್ಯಾಂಕ್ ಕ್ರಮ ಮತ್ತು ಸ್ಥಳೀಯರ ಫಿರ್ಯಾದು

ಗ್ರಾಹಕರು ತಕ್ಷಣವೇ ಎಟಿಎಂ ಸುರಕ್ಷತಾ ಸಿಬ್ಬಂದಿಗೆ ದೂರು ನೀಡಿದ್ದು, ಅವರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು. ಘಟನೆ ಗಂಭೀರವೆಂಬುದನ್ನು ಅರಿತು ಸಿಬ್ಬಂದಿ ಎಟಿಎಂ ಯಂತ್ರವನ್ನು ತಕ್ಷಣ ಮುಚ್ಚಿದರು. ನಷ್ಟವಾದ ಹಣವನ್ನು ಗ್ರಾಹಕರಿಗೆ ಮರಳಿ ನೀಡುವುದಾಗಿ ಭರವಸೆ ನೀಡಲಾಯಿತು.

ಪೊಲೀಸರ ತನಿಖೆ ಆರಂಭ

ಬ್ಯಾಂಕ್ ಈ ಘಟನೆ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆಗೆ ಕೈಹಾಕಿದ್ದಾರೆ. ಎಟಿಎಂಯಲ್ಲಿ ನಕಲಿ ನೋಟುಗಳು ಹೇಗೆ ಸೇರಿವೆ, ಯಾರು ಇದಕ್ಕೆ ಜವಾಬ್ದಾರರು ಎಂಬುದನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಗಟ್ಟಿಯಾದ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories