ಮಲಗಿದ್ದ 8 ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಅಂಟಿಸಿದ ಸಹಪಾಠಿಗಳು! ಮುಂದೇನಾಯ್ತು
ಒಡಿಶಾ ಜಿಲ್ಲೆಯ ಶಾಲಾ ಹಾಸ್ಟಲ್‌ನಲ್ಲಿ 8 ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಫೆವಿಕ್ವಿಕ್ ಹಾಕಿದ ಸಹಪಾಠಿಗಳು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತನಿಖೆ ಪ್ರಾರಂಭ. ಶಾಲೆಯ ಪ್ರಾಂಶುಪಾಲ ಅಮಾನತು.

ಒಡಿಶಾದ ಕಂಧಮಾಲ್ ಜಿಲ್ಲೆಯ ಸಲಗುಡದಲ್ಲಿರುವ ಸೆಬಾಶ್ರಮ್ ಶಾಲೆಯಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮಲಗಿದ್ದ 8 ವಿದ್ಯಾರ್ಥಿಗಳ ಕಣ್ಣಿಗೆ ಸಹ ವಿದ್ಯಾರ್ಥಿಗಳು ಫೆವಿಕ್ವಿಕ್ ಸುರಿದಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳ ಕಣ್ಣುಗಳು ತೆರೆಯಲಾರದೆ ಸಂಕಟ ಅನುಭವಿಸಿದ್ದಾರೆ.
ಅವರನ್ನು ಗಮನಿಸಿದ ಶಿಕ್ಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಈ ಘಟನೆ ಸೆಬಾಶ್ರಮ್ ಶಾಲೆಯ ಹಾಸ್ಟೆಲ್‌ನಲ್ಲಿ ನಡೆದಿದೆ. ಈಗ ಜಿಲ್ಲಾಧಿಕಾರಿ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ.
ಸ್ಥಳೀಯರ ಪ್ರಕಾರ, ಕಂಧಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನಲ್ಲಿರುವ ಸಲಗುಡದಲ್ಲಿ ಸೇವಾಶ್ರಮ ಶಾಲೆ ಇದೆ. ಶುಕ್ರವಾರ ರಾತ್ರಿ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಮಲಗಿದ್ದರು. ಈ ವೇಳೆ ಕೆಲವು ಸಹಪಾಠಿಗಳು 8 ವಿದ್ಯಾರ್ಥಿಗಳ ಕಣ್ಣುಗಳಿಗೆ ಫೆವಿಕ್ವಿಕ್ ಹಚ್ಚಿದ್ದಾರೆ.
ಚಿಕಿತ್ಸೆಗಾಗಿ ಅವರನ್ನು ಫುಲ್ಬಾನಿ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶನಿವಾರದ ವೇಳೆಗೆ, ಒಬ್ಬ ವಿದ್ಯಾರ್ಥಿ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾನೆ. ಇನ್ನೂ ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಕಾಲಿಕ ಚಿಕಿತ್ಸೆಯಿಂದಾಗಿ ಅವಘಡದ ತೀವ್ರತೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ, ಜಿಲ್ಲಾಡಳಿತವು ಶಾಲೆಯ ಪ್ರಾಂಶುಪಾಲ ಮನೋರಂಜನ್ ಸಾಹು ಅವರನ್ನು ತಕ್ಷಣವೇ ಅಮಾನತುಗೊಳಿಸಿತು.
Fevikwik Attack in Odisha School Hostel



