India News

AI Newspaper: ವಿಶ್ವದ ಮೊದಲ ಎಐ ಚಾಲಿತ ನ್ಯೂಸ್ ಪೇಪರ್ ಬಿಡುಗಡೆ!

ಇಟಾಲಿಯನ್ ಸುದ್ದಿಸಂಸ್ಥೆ ಫಾಗಿಯೊ ಜರ್ನಲ್ ಮಂಗಳವಾರ ಪ್ರಪಂಚದ ಮೊದಲ ಸಂಪೂರ್ಣ ಕೃತಕ ಬುದ್ಧಿಮತ್ತೆ (AI) ಮೂಲಕ ರಚಿಸಲಾದ ದಿನಪತ್ರಿಕೆಯನ್ನು ಪ್ರಕಟಿಸಿದೆ. ಇದು ಭವಿಷ್ಯದ ಮಾಧ್ಯಮ ನೋಟ ಹೇಗಿರಬಹುದು ಎಂಬುದರ ಬಗ್ಗೆ ಹೊಸ ಚರ್ಚೆ ಆರಂಭಿಸಿದೆ.

  • ಇಟಾಲಿಯನ್ ಪತ್ರಿಕೆ AI ಬಳಸಿ ದಿನಪತ್ರಿಕೆ ಬಿಡುಗಡೆ
  • ಭವಿಷ್ಯದಲ್ಲಿ ಪತ್ರಿಕೋದ್ಯಮ ಹೇಗಾಗಲಿದೆ? ಚರ್ಚೆ ಆರಂಭ
  • AI ಸ್ಪಷ್ಟತೆ, ವೇಗ, ಆದರೆ ಮಾನವೀಯ ಸ್ಪರ್ಶವೇನು?

ಎಐ (AI) ಯುಗ ಪ್ರಾರಂಭ!

ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ (Artificial Intelligence) ಪ್ರಭಾವ ಕುರಿತು ಅನೇಕ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ, ಇಟಾಲಿಯನ್ ಸುದ್ದಿಸಂಸ್ಥೆ ಫಾಗಿಯೊ (Fagion) ಜರ್ನಲ್ ಸಂಪೂರ್ಣ ಎಐ ತಂತ್ರಜ್ಞಾನ ಬಳಸಿ ನಾಲ್ಕು ಪುಟಗಳ ದಿನಪತ್ರಿಕೆಯನ್ನು ಮಾರುಕಟ್ಟೆಗೆ ತರಲು ಯಶಸ್ವಿಯಾಗಿದೆ. ಇದನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಆನ್‌ಲೈನ್ ಮೂಲಕವೂ ಲಭ್ಯವಿದೆ.

ಪತ್ರಿಕೋದ್ಯಮದ ಭವಿಷ್ಯವನ್ನು ಪರೀಕ್ಷಿಸಲು ನಡೆಸಿದ ಈ ಪ್ರಯೋಗ ಮಾಧ್ಯಮ ವೃತ್ತದಲ್ಲಿ ಹವಾ ಸೃಷ್ಟಿಸಿದೆ. ಫಾಗಿಯೊ ಪತ್ರಿಕೆಯ ಡೈರೆಕ್ಟರ್ ಕ್ಲಾಡಿಯೊ ಸೆರಾಸಾ ಅವರ ಮಾತಿನಲ್ಲಿ, “ಈ ಪ್ರಾಯೋಗಿಕ ಪಠ್ಯಕ್ಕೆ ಒಂದು ತಿಂಗಳ ತಯಾರಿಯಿತ್ತು. ಇದು ಪತ್ರಿಕೋದ್ಯಮದ (Journalism) ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.

AI Newspaper: ವಿಶ್ವದ ಮೊದಲ ಎಐ ಚಾಲಿತ ನ್ಯೂಸ್ ಪೇಪರ್ ಬಿಡುಗಡೆ!

ಈ ಹೊಸ ಪ್ರಯೋಗ ಎಐನ ಪ್ರಭಾವದ ಬಗ್ಗೆ ಜಾಗತಿಕ ಚರ್ಚೆ ಕೆರಳಿಸಿದೆ. ಯಾಂತ್ರಿಕ ಸ್ಪಷ್ಟತೆ ಮತ್ತು ವೇಗದಿಂದ ಪ್ರತಿದಿನದ ಸುದ್ದಿ ಬರೆಯಬಹುದಾದರೂ, ಮಾನವೀಯ ಸ್ಪರ್ಶವಿಲ್ಲದೆ ಜನರ ಭಾವನೆಗಳಿಗೆ ತಲುಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಭವಿಷ್ಯದ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನವೆ? ಕಾದು ನೋಡಬೇಕಿದೆ.

First AI Newspaper in the World

English Summary

Our Whatsapp Channel is Live Now 👇

Whatsapp Channel

Related Stories