ಚಿರತೆ ದಾಳಿಗೆ ನಾಲ್ಕು ವರ್ಷದ ಬಾಲಕಿ ಸಾವು, ಕಬ್ಬಿನ ತೋಟದಲ್ಲಿ ಶವ ಪತ್ತೆ

ಚಿರತೆಯ ದಾಳಿಗೆ ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಮಗುವಿನ ಸಾವನ್ನು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿದ್ದಾರೆ

- - - - - - - - - - - - - Story - - - - - - - - - - - - -

ಮುಂಬೈ (Mumbai): ಪುಣೆ ಜಿಲ್ಲೆಯಲ್ಲಿ ದುರಂತ ಘಟನೆ ನಡೆದಿದೆ. ಚಿರತೆ ದಾಳಿಗೆ (Leopard Attack) ನಾಲ್ಕು ವರ್ಷದ ಮಗು ಸಾವನ್ನಪ್ಪಿದೆ. ಮಗುವಿನ ಸಾವನ್ನು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿದ್ದಾರೆ

ಚಿರತೆಯೊಂದು ಏಕಾಏಕಿ ಬಂದು ಮಗುವನ್ನು ಬಾಯಲ್ಲಿ ಕಚ್ಚಿ ಸ್ಥಳೀಯ ಕಬ್ಬಿನ ತೋಟಕ್ಕೆ ಕೊಂಡೊಯ್ದಿದೆ. ಚಿರತೆಯನ್ನು ಕಂಡ ಮಗುವಿನ ತಾಯಿ ರಕ್ಷಿಸುವಂತೆ ಕಿರುಚಿಕೊಂಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಎರಡು ಗಂಟೆಗಳ ಕಾಲ ಹುಡುಕಾಟ ನಡೆಸಿದ ಬಳಿಕ ಕಬ್ಬಿನ ತೋಟದಲ್ಲಿ ಮಗುವಿನ ಕುರುಹು ಪತ್ತೆಯಾಗಿದೆ. ಚಿರತೆ ಮಗುವಿನ ಮೇಲೆ ತೀವ್ರವಾಗಿ ದಾಳಿ ಮಾಡಿದೆ. ಈ ದಾಳಿಯಿಂದ ಬಾಲಕಿಯ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಚಿರತೆ ದಾಳಿಗೆ ನಾಲ್ಕು ವರ್ಷದ ಬಾಲಕಿ ಸಾವು, ಕಬ್ಬಿನ ತೋಟದಲ್ಲಿ ಶವ ಪತ್ತೆ

ಬಾಲಕಿಯ ಮೇಲೆ ದಾಳಿ ಮಾಡಿದ ಚಿರತೆಯನ್ನು ಹಿಡಿಯಲು ತೀವ್ರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Four-Year-Old Child Killed in Leopard Attack in Pune District

English Summary
Related Stories