Free Scooter: ಆಧಾರ್ ಕಾರ್ಡ್ ಇರುವ ಮಹಿಳೆಯರಿಗೆ ಉಚಿತ ಸ್ಕೂಟರ್! ಏನಿದು ಸ್ಕೀಮ್ ಗೊತ್ತ

Free Scooter: ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬ ಮಹಿಳೆಗೆ ಉಚಿತ ಸ್ಕೂಟಿ ನೀಡಲಾಗುತ್ತಿದೆ ಎನ್ನುವ ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋ ಸಂಪೂರ್ಣ ನಕಲಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿ ಸಾರ್ವಜನಿಕರು ತಪ್ಪು ಮಾಹಿತಿಗೆ ನಂಬಿಕೆ ಕೊಡಬೇಡಿ ಎಂದು ಎಚ್ಚರಿಸಿದೆ.

  • ಉಚಿತ ಸ್ಕೂಟಿ ಯೋಜನೆ ಎಂಬ ವೈರಲ್ ಸುದ್ದಿ
  • ಈ ರೀತಿಯ ಯೋಜನೆ ಸಂಪೂರ್ಣ ಸುಳ್ಳು
  • ಯಾವುದೇ ಸ್ಕೀಮ್ ಇಲ್ಲ ಎಂದು ಪಿಐಬಿ ಸ್ಪಷ್ಟನೆ

Free Scooter: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಒಂದು ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಪ್ರಧಾನಮಂತ್ರಿ ಮಹಿಳೆಯರಿಗೆ ಆಧಾರ್ ಕಾರ್ಡ್ ಆಧಾರದಲ್ಲಿ ಉಚಿತ ಸ್ಕೂಟಿ ನೀಡುತ್ತಿದ್ದಾರೆ ಎಂಬ ಸಂದೇಶ ಅದರಲ್ಲಿ ಕಾಣಿಸುತ್ತದೆ. ಇದನ್ನು ನಂಬಿ ಹಲವರು ಸ್ಕೀಮ್ ವಿವರ ಹುಡುಕಲು ಆರಂಭಿಸಿದ್ದರು.

ಆದರೆ, ಸರ್ಕಾರ ಈ ಮಾಹಿತಿಯನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿದೆ. ವಾಸ್ತವದಲ್ಲಿ ಇಂತಹ ಯೋಜನೆ ಈಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದ್ದೇನು?

Press Information Bureau (PIB) Fact Check ಘಟಕ ವಿಡಿಯೋ ಪರಿಶೀಲನೆ ನಡೆಸಿ, ಅದು AI ತಂತ್ರಜ್ಞಾನ ಬಳಸಿ ತಯಾರಿಸಿದ ನಕಲಿ ವಿಡಿಯೋ ಎಂದು ತಿಳಿಸಿದೆ. ಕೆಲವರು ರಾಜಕೀಯ ನಾಯಕರ ಧ್ವನಿ ಮತ್ತು ಮುಖಗಳನ್ನು ಕೃತಕವಾಗಿ ಬಳಸಿಕೊಂಡು ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ.

ಇಂತಹ ವಿಡಿಯೋಗಳು ಜನರಲ್ಲಿ ಗೊಂದಲ ಮತ್ತು ತಪ್ಪು ನಿರೀಕ್ಷೆ ಮೂಡಿಸುತ್ತವೆ ಎಂದು ಎಚ್ಚರಿಕೆ ನೀಡಲಾಗಿದೆ.

ಅಧಿಕೃತ ಮಾಹಿತಿ ಎಲ್ಲಿಂದ?

ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿಯಲು ಕೇವಲ ಅಧಿಕೃತ ಪೋರ್ಟಲ್‌ಗಳನ್ನು ಮಾತ್ರ ನಂಬಬೇಕು.
myscheme.gov.in ಪೋರ್ಟಲ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಮಾನ್ಯ ಯೋಜನೆಗಳ ಮಾಹಿತಿ ಲಭ್ಯವಿದೆ.

ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು, ವಾಟ್ಸಪ್ ಮೆಸೇಜ್‌ಗಳು ಅಥವಾ ವೈರಲ್ ವಿಡಿಯೋಗಳನ್ನು ನಂಬುವುದು ಅಪಾಯಕರ.

ಅನುಮಾನಾಸ್ಪದ ಮಾಹಿತಿ ಕಂಡರೆ ಏನು ಮಾಡಬೇಕು?

ಯಾವುದೇ ಸಂಶಯಾಸ್ಪದ ವಿಡಿಯೋ, ಫೋಟೋ ಅಥವಾ ಸುದ್ದಿ ಕಂಡರೆ ತಕ್ಷಣ @PIBFactCheck ಗೆ ಕಳುಹಿಸಬಹುದು. ಅವರು ಸತ್ಯಾಸತ್ಯತೆ ಪರಿಶೀಲಿಸಿ ಸರಿಯಾದ ಮಾಹಿತಿ ನೀಡುತ್ತಾರೆ.

ಡಿಜಿಟಲ್ ಯುಗದಲ್ಲಿ ನಕಲಿ ಸುದ್ದಿಗಳು ಕ್ಷಣಾರ್ಧದಲ್ಲಿ ಹರಡುತ್ತವೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.

“ಉಚಿತ”, “ಫ್ರೀ”, “ಸರ್ಕಾರ ಕೊಡುತ್ತಿದೆ” ಎಂಬ ಶೀರ್ಷಿಕೆಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಆದರೆ ನಂಬುವ ಮೊದಲು ಎರಡು ಬಾರಿ ಪರಿಶೀಲನೆ ಮಾಡುವುದು ಅತ್ಯಗತ್ಯ. ಇಲ್ಲವಾದರೆ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ.

TRENDING ARTICLES1 / 3
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories