Watch: ಲಿಫ್ಟ್‌ನಲ್ಲಿ ಸಿಲುಕುವ ಮುನ್ನ ಮಕ್ಕಳ ರಕ್ಷಣೆ, ಬಾಲಕಿಯ ಚುರುಕುತನಕ್ಕೆ ಶ್ಲಾಘನೆ
ಲಿಫ್ಟ್ ಡೋರ್ ಅಕಸ್ಮಾತ್ ಮುಚ್ಚಲು ಆರಂಭವಾಗುತ್ತಿದ್ದಾಗ ಒಳಗಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲು ಬಾಲಕಿ ತನ್ನ ಕೈ-ಕಾಲುಗಳನ್ನು ಅಡ್ಡವಾಗಿ ಇಟ್ಟು ಸಾಹಸ ತೋರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Watch Video: ಒಂದು ಕಟ್ಟಡದ ಲಿಫ್ಟ್‌ನಲ್ಲಿ ಇಬ್ಬರು ಚಿಕ್ಕ ಮಕ್ಕಳು ಇದ್ದರು. ಬಾಗಿಲು ಮುಚ್ಚಲು ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಿ ಮಾರ್ಪಟ್ಟಿತು. ಅಷ್ಟರಲ್ಲಿ ಅಲ್ಲಿ ನಿಂತಿದ್ದ ಬಾಲಕಿ ಕ್ಷಣಾರ್ಧದಲ್ಲಿ ಲಿಫ್ಟ್ ಡೋರ್ ಸಂಪೂರ್ಣ ಮುಚ್ಚದಂತೆ ತನ್ನ ಕೈ ಹಾಗೂ ಕಾಲುಗಳನ್ನು ಅಡ್ಡವಾಗಿ ಇಟ್ಟು ತಡೆಯಲು ಮುಂದಾದಳು.
ಆ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಡೋರ್ ಸೆನ್ಸಾರ್ ಸರಿಯಾಗಿ ಕೆಲಸ ಮಾಡದೇ ಬಾಗಿಲು ವೇಗವಾಗಿ ಮುಚ್ಚಲು ಮುಂದಾದಂತಿದೆ. ಆದರೆ ಬಾಲಕಿಯ ಎಚ್ಚರಿಕೆ ಮತ್ತು ಧೈರ್ಯದಿಂದ ಒಳಗಿದ್ದ ಮಕ್ಕಳಿಗೆ ಅಪಾಯವಾಗುವುದನ್ನು ತಪ್ಪಿಸಿದ್ದಾಳೆ.
ಘಟನೆ ಗಮನಿಸಿದ ಕೆಲ ಮಹಿಳೆಯರು ಕೂಡಲೇ ಸಹಾಯಕ್ಕೆ ಧಾವಿಸಿದರು. ಅವರು ಬಾಗಿಲನ್ನು ಬಲವಾಗಿ ಹಿಡಿದು ತೆರೆಯಲು ಪ್ರಯತ್ನಿಸಿದರು. ಈ ನಡುವೆ ಬಾಲಕಿ ಒಳಗಿದ್ದ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಳು. ತಾನೂ ಹೊರಬಂದ ತಕ್ಷಣ ಲಿಫ್ಟ್ ಡೋರ್ ಸಂಪೂರ್ಣವಾಗಿ ಮುಚ್ಚಿತು.
ಒಂದು ಕ್ಷಣ ತಡವಾದರೂ ಪರಿಣಾಮ ಗಂಭೀರವಾಗಬಹುದಾಗಿತ್ತು. ಆದರೆ ಬಾಲಕಿಯ ಚುರುಕುತನವೇ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದೆ.
ಕೆಲವರು ಬಾಲಕಿಯ ಧೈರ್ಯವನ್ನು ಮೆಚ್ಚಿ ಪ್ರಶಂಸಿಸಿದ್ದಾರೆ. ಮತ್ತೊಂದೆಡೆ ಲಿಫ್ಟ್ ಭದ್ರತಾ ವ್ಯವಸ್ಥೆ, ನಿರ್ವಹಣೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಮಕ್ಕಳು ಒಬ್ಬರೇ ಲಿಫ್ಟ್ ಬಳಸಿದ ಬಗ್ಗೆ ಕೆಲವರು ಪೋಷಕರ ಜವಾಬ್ದಾರಿಯನ್ನೂ ಪ್ರಶ್ನಿಸಿದ್ದಾರೆ.
A small girl is seen at the entrance of a residential lift.
As the elevator doors began to close, she noticed
another child running toward the lift from the corridor.Without hesitation, the girl used her own body to partially block the doorway, preventing the heavy doors from… pic.twitter.com/llUbPdk5eN
— SUNIL KUMAR (@ijustsunil) February 21, 2026



