Video: ಇದ್ದಕ್ಕಿದ್ದಂತೆ ತಬ್ಬಿ ಯುವತಿಗೆ ಮುತ್ತು ಕೊಟ್ಟ ಕಾಮುಕ ಅಂಕಲ್! ಆಮೇಲೆ ಏನಾಯ್ತು
Viral Video: ಉತ್ತರ ಪ್ರದೇಶದ ಅಲಿಗಢದಲ್ಲಿ ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಬಲವಂತವಾಗಿ ಮುತ್ತು ನೀಡಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Viral Video: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಯುವತಿಯೊಬ್ಬಳಿಗೆ ವ್ಯಕ್ತಿಯೊಬ್ಬ ಬಲವಂತವಾಗಿ ಮುತ್ತು ನೀಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು (CCTV Footage) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಅಕ್ಟೋಬರ್ 10ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಬರೆಲಿ ಮಾರುಕಟ್ಟೆ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಯುವತಿ ತನ್ನ ಬೈಕ್ನಲ್ಲಿ ತೆರಳಲು ಸಿದ್ಧವಾಗಿದ್ದಾಗ, ರಸ್ತೆ ತಿರುವಿನ ಬಳಿ ಬೈಕ್ ನಿಂತಿದೆ. ಅದನ್ನು ಮತ್ತೆ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಆಕೆಯನ್ನು ತಬ್ಬಿ ಹಿಡಿದು ಬಲವಂತವಾಗಿ ಮುತ್ತು ನೀಡಿದ್ದಾನೆ ಎಂದು ವರದಿಯಾಗಿದೆ.
ಈ ಅನಿರೀಕ್ಷಿತ ಕೃತ್ಯದಿಂದ ಬೆಚ್ಚಿಬಿದ್ದ ಯುವತಿ ತೀವ್ರವಾಗಿ ಪ್ರತಿರೋಧಿಸಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾಳೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಬರ್ತ್ಡೇ ದಿನವೇ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಐಟಿ ಉದ್ಯೋಗಿ
ಯುವತಿಯ ಕುಟುಂಬಸ್ಥರು ತಕ್ಷಣ ತುರ್ತು ಪೊಲೀಸ್ ಸಹಾಯವಾಣಿಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ, ಆರೋಪಿಯನ್ನು ಗಣೇಶ್ ಶರ್ಮಾ ಅಲಿಯಾಸ್ ಗುಡ್ಡು ಎಂದು ಗುರುತಿಸಿ ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ.
ಆದರೆ, ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಬಳಿಕ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಆತನ ವಿರುದ್ಧ ಗಂಭೀರ ಪ್ರಕರಣ ದಾಖಲಿಸದೆ ಕೇವಲ ವಾರ್ನಿಂಗ್ ನೀಡಿ ಕಳುಹಿಸಲಾಗಿದೆ ಎಂಬುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿವಾದದ ಬೆನ್ನಲ್ಲೇ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಈ ಕ್ರಮಗಳ ಕುರಿತು ಅಧಿಕೃತ ದೃಢೀಕರಣ ಲಭ್ಯವಿಲ್ಲ. ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
दुस्साहस देखिए..अधेड़ सरेराह बच्ची को जबरन KI$S करके भाग गया – 😡
इस नालायक की भेंट यमराज से क्यों नहीं हुई..?यूपी में कानून के इकबाल और महिला सुरक्सा के दावे की पोल खोल CCTV वायरल है
अलीगढ़ में बाजार से लौट रही बाइक सवार नाबालिक लड़की के साथ Aश्लीलता,Cheड़छाड़ व जबरन Ki$s करने का आरोप लगा है।
10 अक्टूबर की घटना का CCTV वायरल है जिसमें गणेश शर्मा उर्फ गुड्डू नाम का अधेड़ बच्ची को पकड़ कर जबरन किस करता है और फरार हो जाता है।
शिकायत लेकर थाने गाये पीड़िता ने भाई ने पुलिस पर CCTV फुटेज डिलीट करने का दवाब बनानें अथवा आरोपी का शांतिभंग चालान कर खानापूर्ति करने का आरोप लगाया है।
मामले में SP सिटी आदित्य बंसल के अनुसार आरोपी के खिलाफ गंभीर धाराओं में FIR दर्ज कर न्यायालय में पेश किया गया है वहीं लापरवाह SO धीरज कुमार को सस्पेंड किया गया है।
— Rahul Saini (@JtrahulSaini) October 16, 2026
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



