ಬಹುಮಹಡಿ ಕಟ್ಟಡದ ಮೇಲಿಂದ ಜಿಗಿದ ಯುವತಿ, ವಿಡಿಯೋ ತುಣುಕು ವೈರಲ್
ಯುವತಿಯೊಬ್ಬಳು ಕಟ್ಟಡದ ಮೇಲಿನಿಂದ ಜಿಗಿದಿದ್ದಾಳೆ. ಸ್ಥಳೀಯರು ಗಮನಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಭೋಪಾಲ್: ಯುವತಿಯೊಬ್ಬಳು ಕಟ್ಟಡದ ಮೇಲಿನಿಂದ ಜಿಗಿದಿದ್ದಾಳೆ. ಮೇಲಿನಿಂದ ಜಿಗಿದ ಯುವತಿ ಕೆಳಗಿನ ಟೆರೇಸ್ ಮೇಲೆ ಬಿದ್ದಿದ್ದಾಳೆ. (Girl Jumps Off Building) ಯುವತಿ ಅಲ್ಲಿಂದ ಕೆಳಗೆ ಜಿಗಿದುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.
ಇಂದೋರ್‌ನ ವಿಜಯ ನಗರ ಪ್ರದೇಶದ ಗೋಲ್ಡನ್ ಗೇಟ್ ಬಳಿ ಯುವತಿಯೊಬ್ಬಳು ಬಹುಮಹಡಿ ಕಟ್ಟಡದ ಮೇಲಿಂದ ಜಿಗಿದ ಘಟನೆ ಗುರುವಾರ ನಡೆದಿದೆ. ಆಕೆ ಕಟ್ಟಡದ ಕೆಳಗಿರುವ ಟೆರೇಸ್ ಮೇಲೆ ಬಿದ್ದಿದ್ದಾಳೆ. ಭಾರೀ ಸದ್ದು ಕೇಳಿದ ಸ್ಥಳೀಯರು ಯುವತಿ ಟೆರೇಸ್ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ.
ಮುಂಗಡ ರೈಲು ಟಿಕೆಟ್ ಬುಕ್ಕಿಂಗ್ ಬಗ್ಗೆ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ! ಬಿಗ್ ಅಪ್ಡೇಟ್
ಕೆಲವರು ಆ ಟೆರೇಸ್ ಮೇಲೆ ಹೋಗಿ ಅಲ್ಲಿಂದ ಯುವತಿಯನ್ನು ಕಷ್ಟಪಟ್ಟು ಕೆಳಗೆ ಇಳಿಸಲಾಯಿತು. ಆಕೆ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಯುವತಿ ಯಾರು ಎಂಬ ವಿವರ ತಿಳಿದುಬಂದಿಲ್ಲ.
ಮತ್ತೊಂದೆಡೆ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಟ್ಟಡದ ಮೇಲಿನಿಂದ ಜಿಗಿದಿದ್ದಾಳೆಯೇ ಅಥವಾ ಆಕಸ್ಮಿಕವಾಗಿ ಅಲ್ಲಿಂದ ಬಿದ್ದಿದ್ದಾಳೆಯೇ ಎಂಬುದು ದೃಢಪಟ್ಟಿಲ್ಲ. ಈ ವಿಷಯ ತಿಳಿದ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸ್ಥಳೀಯರು ಯುವತಿಯನ್ನು ರಕ್ಷಿಸಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಬಂಧನಕ್ಕೆ ವಾರಂಟ್
Girl Jumps Off Multi Storey Building Falls On Lower Roof In Madhya Pradesh Indore
इन्दौर विजयनगर क्षेत्र में बहुमंजिला बिल्डिंग से कूदी युवती….. भारी भीड़ जमा
इंदौर विजयनगर क्षेत्र के गोल्डन गेट के समीप जनसेवा आटा चक्की पर एक युवती बहुमंजिला इमारत से कूद गई । युवती जब बिल्डिंग से कूदी तो निचली मंजिल की छत पर गिरी जिसे लोगों ने कड़ी मशक्कत बाद उतारा और… pic.twitter.com/XNM74tTUCK
— Global Bharat News (@Global__Bharat) October 17, 2024