ಬಿಪಿಎಲ್ ಕಾರ್ಡ್ ಇರೋ ಕುಟುಂಬಕ್ಕೆ ಸಿಹಿ ಸುದ್ದಿ! ಇನ್ನೂ 5 ವರ್ಷಗಳ ಕಾಲ ಉಚಿತ ಯೋಜನೆ ವಿಸ್ತರಣೆ
ನಮ್ಮ ದೇಶದಲ್ಲಿ ಯಾವೊಬ್ಬ ಬಡ ವ್ಯಕ್ತಿಯು ಕೂಡ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಪಿಎಮ್ ಮೋದಿ ಅವರ ಸರ್ಕಾರವು ಬಿಪಿಎಲ್ ಕಾರ್ಡ್ (BPL Ration Card) ಮೂಲಕ ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಭಾರಿ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ.
ಅವುಗಳ ಪೈಕಿ ಪಿಎಮ್ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಪ್ರತಿ ತಿಂಗಳು 5 ಕೆಜಿ ಅಕ್ಕಿ ವಿತರಿಸುವುದು ಒಂದು ಯೋಜನೆ ಆಗಿದೆ. ಈ ಮೂಲಕ ಬಡವರು ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶ ಸರ್ಕಾರದ್ದು.
ಹೌದು, ಕೇಂದ್ರ ಸರ್ಕಾರವು ನಮ್ಮ ದೇಶದ ಬಡ ಜನರಿಗೆ, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಿರುವುದು ಇದೇ ಕಾರಣಕ್ಕಾಗಿ. ಬಡವರಿಗೆ ಆಹಾರದ ವಿಷಯದಲ್ಲಿ, ಆರೋಗ್ಯದ ವಿಷಯದಲ್ಲಿ, ಮೂಲಭೂತ ಹಕ್ಕುಗಳ ವಿಷಯದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಕೇಂದ್ರ ಸರ್ಕಾರ ಹಲವು ಸವಲತ್ತುಗಳನ್ನು ಜಾರಿಗೆ ತಂದಿದೆ.
ಅವುಗಳಲ್ಲಿ ಅಕ್ಕಿ ಕೊಡುವ ಯೋಜನೆ ಪ್ರಮುಖವಾದದ್ದು. ಬಿಪಿಎಲ್ ಕಾರ್ಡ್ ನಲ್ಲಿ (BPL Card) ಹೆಸರು ಇರುವ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ನೀಡಲಾಗುತ್ತಿದೆ..
ಈ ವರ್ಷ ಲೋಕಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲು ಪಿಎಮ್ ಮೋದಿ ಅವರು ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಪ್ರತಿ ತಿಂಗಳು ಸಿಗುತ್ತಿರುವ 5 ಕೆಜಿ ಅಕ್ಕಿಯ ಸೌಲಭ್ಯ ಇನ್ನು 5 ವರ್ಷಗಳ ಕಾಲ ಇದೇ ರೀತಿ ಮುಂದುವರೆಯುತ್ತದೆ ಎನ್ನುವ ಭರವಸೆ ನೀಡಿದ್ದರು.
ಈ ಯೋಜನೆಯ ಮೂಲಕ ಈಗಾಗಲೇ ದೇಶದ 80 ಕೋಟಿ ಜನರು ಉಚಿತವಾಗಿ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಸರ್ಕಾರದ ಈ ಜವಾಬ್ದಾರಿ ಭರಿಸುತ್ತಿದ್ದು, ಅರ್ಹತೆ ಇರುವ ಇನ್ನಷ್ಟು ಜನರಿಗೆ ಈ ಸೌಲಭ್ಯ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ..
ಇನ್ನು 5 ವರ್ಷಗಳ ಕಾಲ ಈ ಯೋಜನೆ ಮುಂದುವರೆಯುತ್ತದೆ ಎಂದು ಸರ್ಕಾರ ತಿಳಿಸಿತ್ತು, ಅದರ ಬಗ್ಗೆ ಈಗ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಪ್ರಹ್ಲಾದ್ ಜೋಷಿ ಅವರ ಮಾತಿನ ಅನುಸಾರ ಇನ್ನು 5 ವರ್ಷಗಳ ಕಾಲ ಅಂದರೆ 2029ರವರೆಗೂ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಜನರಿಗೆ ಪ್ರತಿ ತಿಂಗಳು 5ಕೆಜಿ ಉಚಿತ ಅಕ್ಕಿ ಸಿಗುತ್ತದೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ..
ಈ ಮೂಲಕ ಜನರ ಆತಂಕ ಕಡಿಮೆ ಆಗಿದೆ. ಇನ್ನು 5 ವರ್ಷಗಳ ಕಾಲ ಅನ್ನಕ್ಕೆ, ಹಸಿವಿಗೆ ಯಾವುದೇ ಕೊರತೆ ಇರುವುದಿಲ್ಲ. ಸರ್ಕಾರದಿಂದ ಸಿಗುವ ಈ ಒಂದು ಸೌಲಭ್ಯವನ್ನು ಜನರು ಸಹ ಉಪಯೋಗಿಸಿಕೊಳ್ಳಬಹುದು.
ಸರ್ಕಾರಕ್ಕೆ ಬಡಜನರ ಬಗ್ಗೆ ಇರುವ ಕಾಳಜಿ ಇದರಿಂದ ಗೊತ್ತಾಗುತ್ತದೆ. ಜನರು ಕೂಡ ಇದೇ ಕಾರಣಕ್ಕೆ ಮೋದಿ ಅವರ ಸರ್ಕಾರವನ್ನೇ ಆರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇನ್ನು 5 ವರ್ಷಗಳ ಕಾಲ ಜನರಿಗೆ ಹಸಿವಿನ ಸಮಸ್ಯೆ ಅಂತೂ ಎದುರಾಗುವುದಿಲ್ಲ ಎನ್ನುವುದು ಸಂತೋಷದ ವಿಚಾರ ಆಗಿದೆ..
Good news for BPL card Holders, Free Scheme extension for another 5 years