India News

ಸರ್ಕಾರಿ ಕಾಲೇಜುಗಳಿಗೆ ಕೇಸರಿ ಬಣ್ಣ ಬಳಿಯಲು ರಾಜಸ್ಥಾನ ಸರ್ಕಾರ ಆದೇಶ

ರಾಜಸ್ಥಾನದಲ್ಲಿ (Rajasthan) ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಸೈಕಲ್‌ಗಳ ಬಣ್ಣ ಬದಲಿಸಿರುವ ಭಜನ್‌ಲಾಲ್ ಸರ್ಕಾರ, ಕಾಲೇಜುಗಳನ್ನು ಕೇಸರಿಮಯವಾಗಿಸಲು (Saffron Color) ಸಜ್ಜಾಗಿದೆ.

ಕಾಲೇಜುಗಳ (Government Colleges) ಮುಖ್ಯ ದ್ವಾರ ಮತ್ತು ಗ್ಯಾಲರಿಗೆ ಕೇಸರಿ ಬಣ್ಣ ಬಳಿಯಲು ಆದೇಶ ಹೊರಡಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ವಿಜೇಂದ್ರ ಕುಮಾರ್ ಶರ್ಮಾ ಮಾತನಾಡಿ, ರಾಜ್ಯದ ಕಾಲೇಜುಗಳು ಶಿಕ್ಷಣದ ಪ್ರಮುಖ ಕೇಂದ್ರಗಳಾಗಿದ್ದು, ವಿದ್ಯಾರ್ಥಿಗಳು ಕಾಲೇಜುಗಳನ್ನು ತಲುಪಿದಾಗ ಸಕಾರಾತ್ಮಕ ಭಾವನೆ ಮತ್ತು ಉನ್ನತ ಶಿಕ್ಷಣಕ್ಕೆ ಉತ್ತಮ ಪ್ರತಿಕ್ರಿಯೆ ನೀಡುವ ಶೈಕ್ಷಣಿಕ ವಾತಾವರಣ ಇರಬೇಕು.

Government Of Rajasthan Has Issued An Order To Paint Saffron Color for Government Colleges

ಕಾಲೇಜುಗಳಲ್ಲಿ ಧನಾತ್ಮಕ, ಉತ್ತಮ ನೈರ್ಮಲ್ಯ ಮತ್ತು ಶೈಕ್ಷಣಿಕ ವಾತಾವರಣವನ್ನು ಉತ್ತೇಜಿಸಲು ನಾವು ಈ ಬದಲಾವಣೆಗಳನ್ನು ಮಾಡಿದ್ದೇವೆ. ಇದಕ್ಕಾಗಿ ಮೊದಲ ಹಂತದಲ್ಲಿ 10 ವಿಭಾಗಗಳಿಂದ 20 ಕಾಲೇಜುಗಳನ್ನು ಆಯ್ಕೆ ಮಾಡಿದ್ದೇವೆ. ಈ ಕಾಲೇಜುಗಳಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಉಳಿದ ಕಾಲೇಜುಗಳಲ್ಲಿ ಬಣ್ಣ ಬಳಿಯಲು ಆದೇಶ ಹೊರಡಿಸಲಾಗುವುದು ಎನ್ನಲಾಗಿದೆ.

ಇದೇ ವೇಳೆ ಈ ಹಿಂದೆ ಸರಕಾರ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಸೈಕಲ್‌ಗಳ ಬಣ್ಣವನ್ನೂ ಬದಲಾಯಿಸಿತ್ತು. ಈ ಹಿಂದೆ ರಾಜಸ್ಥಾನದಲ್ಲೂ ಕೇಸರಿ ಸೈಕಲ್ ವಿತರಿಸಲಾಗಿತ್ತು, ಆದರೆ ಕಾಂಗ್ರೆಸ್ ಅದನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿದೆ ಎಂದು ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ.

ಕೇಸರಿ ಬಣ್ಣವು ನಮ್ಮ ಶೌರ್ಯವನ್ನು ಸಂಕೇತಿಸುತ್ತದೆ ಮತ್ತು ಕೇಸರಿ ಬಣ್ಣವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

Government Of Rajasthan Has Issued An Order To Paint Saffron Color for Government Colleges

Our Whatsapp Channel is Live Now 👇

Whatsapp Channel

Related Stories