India News

ನಿಮಗೆ ಸ್ವಂತ ಮನೆ ಇಲ್ವಾ? ಸರ್ಕಾರದಿಂದ ಸಿಗುತ್ತೆ 2.50 ಲಕ್ಷ ರೂಪಾಯಿ: ಹೀಗೆ ಅಪ್ಲೈ ಮಾಡಿ

  • ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಅವಕಾಶ
  • ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರ ಕೊಡುತ್ತೆ 2.50 ಲಕ್ಷ ರೂಪಾಯಿ
  • ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು

Govt Scheme: ದುಡ್ಡಿದ್ದವರು ಮಾತ್ರವಲ್ಲದೆ ಬಡವರು ಕೂಡ ಸ್ವಂತ ಸೂರನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡುತ್ತಿದೆ. ಹೀಗಾಗಿ ಹಣ ಇಲ್ಲ ಅಂತ ಚಿಂತೆ ಬೇಡ ಸರ್ಕಾರದಿಂದ 2.50 ಲಕ್ಷಗಳವರೆಗೆ ಸಹಾಯಧನ ಪಡೆದುಕೊಂಡು ಬಡವರು ಕೂಡ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಬಹುದು.

ಇದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವುದು ಪ್ರಧಾನಮಂತ್ರಿ ಅವಾಸ್ ಯೋಜನೆ 2.0.

ನಿಮಗೆ ಸ್ವಂತ ಮನೆ ಇಲ್ವಾ? ಸರ್ಕಾರದಿಂದ ಸಿಗುತ್ತೆ 2.50 ಲಕ್ಷ ರೂಪಾಯಿ: ಹೀಗೆ ಅಪ್ಲೈ ಮಾಡಿ

ಪ್ರಧಾನಮಂತ್ರಿ ಆವಾಸ್ ಯೋಜನೆ 2.0

ನಗರ ಭಾಗದಲ್ಲಿ ಇರುವ ಬಡವರಿಗಾಗಿ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಪ್ರಧಾನಮಂತ್ರಿ ಆವಾಸ್ – ನಗರ 2.0 ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಚಾಲನೆ ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿಗೂ ಹೆಚ್ಚಿನ ಮನೆ ನಿರ್ಮಾಣದ ಕನಸು ಹೊತ್ತಿರುವ ಈ ಯೋಜನೆಯ ಅಡಿಯಲ್ಲಿ 2.50 ಲಕ್ಷ ರೂಪಾಯಿಗಳನ್ನು ಸರ್ಕಾರದಿಂದ ಸಹಾಯಧನವಾಗಿ ಪಡೆದು ಬಡವರು ಅಥವಾ ಮಧ್ಯಮ ವರ್ಗದ ಕುಟುಂಬದವರು ಹಾಗೂ ಕೆಳಮಧ್ಯಮ ವರ್ಗದ ಕುಟುಂಬದವರು ಸ್ವಂತ ಸೂರನ್ನು ನಿರ್ಮಿಸಿಕೊಳ್ಳಲು ಸಾಧ್ಯವಿದೆ.

PM Awas yojana

ಯಾರಿಗೆ ಸಿಗುತ್ತೆ ಸಹಾಯಧನ!

ಬಡವರು ಕೆಳ ಮಧ್ಯಮ ವರ್ಗದವರು ಹಾಗೂ ಮಾಧ್ಯಮ ವರ್ಗದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ ಹಿಂದೆ ಹತ್ತು ಸಾವಿರ ರೂಪಾಯಿಗಳ ತಿಂಗಳ ಆದಾಯ ಇರುವವರು ಪ್ರಧಾನಮಂತ್ರಿಯ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದಿತ್ತು.

ಈಗ ಈ ಮಿತಿ 15000 ಕ್ಕೆ ಏರಿಕೆಯಾಗಿದೆ. ಇನ್ನು ಈ ಮೊದಲೇ ನಿಮ್ಮ ಹೆಸರಿನಲ್ಲಿ ಮನೆ ಇಲ್ಲದೆ ಇದ್ದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರ ಈ ಯೋಜನೆಗಾಗಿ 2.30 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ, ಮೊದಲನೇ ಹಂತದಲ್ಲಿ 1.18 ಕೋಟಿ ಮನೆ ನಿರ್ಮಾಣದ ಕನಸು ಸರ್ಕಾರದಾಗಿತ್ತು ಆದರೆ 85.5 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ಸಫಲವಾಗಿದೆ.

ಇನ್ನು ಎರಡನೇ ಹಂತದಲ್ಲಿ ಒಂದು ಲಕ್ಷ ಮನೆಗಳನ್ನು ನಗರ ಭಾಗದಲ್ಲಿ ನಿರ್ಮಾಣ ಮಾಡಿಕೊಳ್ಳಲು 2.50 ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ಕೊಡಲಾಗುವುದು.

Pradhan mantri awas yojana

ಅರ್ಜಿ ಸಲ್ಲಿಸುವುದು ಹೇಗೆ?

* ಮೊದಲಿಗೆ ಕೇಂದ್ರ ಸರ್ಕಾರದ pmay-urban.gov.in ಈ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ
* ಇಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅನ್ವಯಿಸು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
* ಈಗ ಪರದೆಯ ಮೇಲೆ ಕಾಣಿಸುವ ಎಲ್ಲಾ ಮಾಹಿತಿ ಹಾಗು ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ
* ನಿಮ್ಮ ಆದಾಯದ ವಿವರಗಳನ್ನು ತಿಳಿಸಬೇಕು
* ನಂತರ ನಿಮ್ಮ ವಿಳಾಸ, ಆಧಾರ್ ಕಾರ್ಡ್, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ ಮೊದಲಾದವುಗಳನ್ನು ಅಪ್ಲೋಡ್ ಮಾಡಬೇಕು.
* ಈ ಎಲ್ಲ ಮಾಹಿತಿಯನ್ನು ಅರ್ಜಿ ಫಾರ್ಮ್ ನಲ್ಲಿ ಭರ್ತಿ ಮಾಡಬೇಕು ಅರ್ಜಿ ಫಾರಂ ಅನ್ನು ಸಲ್ಲಿಸುವುದಕ್ಕೂ ಮೊದಲು ನೀವು ಸಲ್ಲಿಸಿರುವ ಎಲ್ಲ ಮಾಹಿತಿಗಳು ಕರೆಕ್ಟ್ ಆಗಿವೆಯಾ ಎಂಬುದನ್ನು ಮತ್ತೆ ಪರಿಶೀಲಿಸಿಕೊಳ್ಳಿ.
* ಇನ್ನು ಅರ್ಜಿ ಫಾರ್ಮ್ ನಲ್ಲಿ ಹೇಳಲಾಗಿರುವ ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

* ಆಧಾರ್ ಕಾರ್ಡ್
* ವಿಳಾಸ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಭೂಮಿ ಹೊಂದಿದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳು
* ಬ್ಯಾಂಕ್ ಖಾತೆಯ ವಿವರಗಳು (ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು)

Government Scheme Offers ₹2.5 Lakh to Build Your Own House – Apply Now

Related Stories