₹5,000 ರೂಪಾಯಿ ನೋಟು ಬರ್ತಾ ಇದೆ ಅಂತೆ? ಕೇಂದ್ರದ ಸ್ಪಷ್ಟನೆ ಹೊರಬಿದ್ದಿದೆ!
ಹೊಸ ₹5,000 ರೂಪಾಯಿ ನೋಟು ಬರುತ್ತದೆ ಎಂಬ ವದಂತಿ ದೇಶದಾದ್ಯಂತ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ಪೋಷ್ಟ್ಗಳು ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜನರು ನಕಲಿ ಮಾಹಿತಿಯಿಂದ ದೂರ ಇರಬೇಕು ಎಂದು ಮುನ್ನೆಚ್ಚರಿಕೆ ನೀಡಿದೆ.

ಸೋಶಿಯಲ್ ಮೀಡಿಯಾದಲ್ಲಿ “ಹೊಸ ₹5,000 ನೋಟು ಬರುತ್ತಿದೆ” ಎಂಬ ಪೋಸ್ಟ್ಗಳು ಕಳೆದ ಕೆಲ ದಿನಗಳಿಂದ ಭಾರಿ ವೈರಲ್ ಆಗುತ್ತಿದ್ದವು. ವಾಟ್ಸಾಪ್, ಫೇಸ್ಬುಕ್, ಯೂಟ್ಯೂಬ್, ಎಕ್ಸ್ ಸೇರಿ ಎಲ್ಲಾ ವೇದಿಕೆಗಳಲ್ಲೂ ಈ ಸುದ್ದಿ ಹಬ್ಬಿ ಗೊಂದಲ ಉಂಟುಮಾಡಿತು. ಕೆಲವರು RBI ಈಗಾಗಲೇ ವಿನ್ಯಾಸವನ್ನು ಅಂತಿಮಗೊಳಿಸಿದೆ ಎಂದು ಊಹಾಪೋಹಗಳನ್ನೂ ಹರಡಿದರು.
ಆದರೆ ಈ ಗೊಂದಲಗಳ ಮಧ್ಯೆ ಕೇಂದ್ರ ಸರ್ಕಾರ ಕೊನೆಗೂ ಸ್ಪಷ್ಟನೆ ನೀಡಿ, ಎಲ್ಲಾ ವದಂತಿಗಳಿಗೆ ಬ್ರೇಕ್ ಬಿದ್ದಿದೆ.
PIB ಫ್ಯಾಕ್ಟ್ ಚೆಕ್: “ಹೊಸ ₹5,000 ನೋಟಿನ ನಿರ್ಧಾರವೇ ಇಲ್ಲ!”
ಸೋಮವಾರ ಸಂಜೆ PIB ಫ್ಯಾಕ್ಟ್ ಚೆಕ್ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿ, ಅದರಲ್ಲಿ “RBI ಇನ್ನೂ ಯಾವುದೇ ಹೊಸ ₹5,000 ನೋಟು ಮುದ್ರಣಕ್ಕೆ ಅನುಮೋದನೆ ನೀಡಿಲ್ಲ” ಎಂದು ತಿಳಿಸಿದೆ.
ಜನರು ನಕಲಿ ಪೋಸ್ಟ್ಗಳನ್ನು ನಂಬಿ ತಪ್ಪು ಮಾಹಿತಿಯನ್ನು ಹಂಚಬಾರದು ಎಂದು ಎಚ್ಚರಿಕೆ ನೀಡಿದೆ. ಹಣಕಾಸು ವಿಷಯಗಳ ಬಗ್ಗೆ ಅಧಿಕೃತ ಮಾಹಿತಿಗಾಗಿ RBI ವೆಬ್ಸೈಟ್ ಅನ್ನು ಮಾತ್ರ ಅವಲಂಬಿಸಬೇಕು ಎಂದು ಸಲಹೆ ನೀಡಲಾಗಿದೆ. ಈ ಹೇಳಿಕೆಯ ನಂತರ ಎಲ್ಲಾ ಸೋಶಿಯಲ್ ಮೀಡಿಯಾ ವದಂತಿಗಳಿಗೂ ಸಂಪೂರ್ಣ ಬ್ರೇಕ್ ಬಿದ್ದಂತಾಯಿತು.
ವೈರಲ್ ಪೋಸ್ಟ್ನ ಹಿಂದೆ ನಕಲಿ ಫೋಟೋ – ಜನರಲ್ಲಿ ಗೊಂದಲ
ಇತ್ತೀಚೆಗೆ ಹಬ್ಬಿದ್ದ ನಕಲಿ ಪೋಸ್ಟ್ನಲ್ಲಿ ₹5,000 ನೋಟಿನ ‘ಸ್ಯಾಂಪಲ್ ಡಿಸೈನ್’ ಕೂಡ ಕಾಣಿಸಿಕೊಂಡಿತ್ತು. ಅದರಲ್ಲಿ ಹೊಸ ಬಣ್ಣ, ಹೊಸ ಚಿತ್ರಗಳು ಇದ್ದಂತೆಯೂ ತೋರಿಸಲಾಯಿತು. ಇದನ್ನು ನಂಬಿ ಕೆಲವರು ಕಾಮೆಂಟ್ಗಳಲ್ಲಿ “ಇದೀಗಲೇ ಮಾರುಕಟ್ಟೆಗೆ ಬರುತ್ತದೆ” ಎಂದು ಬರೆದಿದ್ದರು.
ಆದರೆ PIB ಅದನ್ನು ತಕ್ಷಣವೇ ತಳ್ಳಿ ಹಾಕಿ, “ಇದು ನಕಲಿ, RBI ಯಾವುದೂ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ” ಎಂದು ಸ್ಪಷ್ಟಪಡಿಸಿತು.
ಭದ್ರತಾ ಸಲಹೆ: ನಕಲಿ ಮೆಸೇಜುಗಳು ಬ್ಯಾಂಕ್ ಮೋಸಗಳಿಗೆ ದಾರಿ
ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಎಚ್ಚರಿಕೆ ನೀಡಿದ್ದು, ಇಂತಹ ವದಂತಿಗಳೊಂದಿಗೆ ಕಳುಹಿಸುವ ಅನುಮಾನಾಸ್ಪದ ಲಿಂಕ್ಗಳ ಬಗ್ಗೆ. ಒಂದು ಕ್ಲಿಕ್ ತಪ್ಪಾಗಿ ಮಾಡಿದರೂ ಬ್ಯಾಂಕ್ ಖಾತೆ ಅಪಾಯಕ್ಕೆ ಗುರಿಯಾಗಬಹುದು. ಅದರ ಕಾರಣ, ಪರ್ಸನಲ್ ಡೀಟೈಲ್ಸ್ ಯಾರಿಗೂ ಕಳುಹಿಸಬೇಡಿ, ನಕಲಿ ಲಿಂಕ್ಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಸಲಹೆ ನೀಡಿದೆ.
ಯಾವುದೇ ಅನುಮಾನಾಸ್ಪದ ಪೋಸ್ಟ್ ಕಂಡರೆ:
PIB ಫ್ಯಾಕ್ಟ್ ಚೆಕ್ WhatsApp: +91 8799711259
PIB ಫ್ಯಾಕ್ಟ್ ಚೆಕ್ X: @PIBFactCheck
⚠️ सतर्क रहें ⚠️
सोशल मीडिया पर दावा किया जा रहा है कि भारतीय रिजर्व बैंक द्वारा ₹5000 के नए नोट जारी किए जाएंगे#PIBFactCheck
✅ यह दावा #फर्जी है
✅@RBI द्वारा ऐसा कोई निर्णय नहीं लिया गया है
✅ आधिकारिक वित्तीय जानकारी हेतु वेबसाइट https://t.co/e6gEcOvLu3 पर विजिट करें pic.twitter.com/EF82vaxMvE
— PIB Fact Check (@PIBFactCheck) November 24, 2025
ಈಗಿನ ಯುವಜನತೆಗೆ ಹೊಸದಾಗಿ ಕಾಣಿಸಿದರೂ, ₹5,000 ನೋಟು ಭಾರತದ ಇತಿಹಾಸದಲ್ಲಿ ಮೊದಲೇ ಇದ್ದದ್ದು…
1938: ಬ್ರಿಟಿಷ್ ಆಡಳಿತ ಮೊದಲ ಬಾರಿಗೆ ₹5,000 ಸೇರಿದಂತೆ ಹೆಚ್ಚಿನ ಮೌಲ್ಯದ ನೋಟುಗಳನ್ನು ಮುದ್ರಿಸಿತು.
1946: ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟು ರದ್ದುಗೊಳಿಸಲಾಯಿತು.
1954: ಮತ್ತೆ ಹೊಸ ₹5,000 ನೋಟು ಬಿಡುಗಡೆ.
1978: ₹1,000, ₹5,000, ₹10,000 ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಯಿತು.
ಆ ನಂತರದಿಂದ ಇಂದಿನವರೆಗೂ ₹5,000 ನೋಟು ಭಾರತದಲ್ಲಿ ಮರುಬಂದಿಲ್ಲ.
RBI ಈಗ ಚಲಾವಣೆ ಮಾಡುತ್ತಿರುವ ನೋಟುಗಳು
ಪ್ರಸ್ತುತ RBI ಮಾರುಕಟ್ಟೆಯಲ್ಲಿ ಹೊಂದಿರುವ ನೋಟು ಮೌಲ್ಯಗಳು:
₹10, ₹20, ₹50, ₹100, ₹500 ಮತ್ತು ಹಳೆಯ ₹2,000 ನೋಟು (2023ರಿಂದ ಹೊಸ ಮುದ್ರಣ ನಿಲ್ಲಿಸಲಾಗಿದೆ) ಹೀಗಾಗಿ ₹5,000 ನೋಟು ಬರುತ್ತಿದೆ ಎಂಬ ಮಾತು ಸಂಪೂರ್ಣ ಬುನಾದಿಯೇ ಇಲ್ಲದ ವದಂತಿ.
Govt Clarifies, No New 5,000 Currency Note



