Watch: ಹೋಳಿ ಆಡಲು ಬಂದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಅಜ್ಜಿ
ಹೋಳಿ ದಿನ ಬಣ್ಣಗಳೊಂದಿಗೆ ಆಟವಾಡುತ್ತಿದ್ದ ಬಾಲಕ ಅಜ್ಜಿಯ ಮೇಲೆ ಬಣ್ಣದ ನೀರು ಸಿಂಪಡಿಸಿದ ಘಟನೆಗೆ ಆಕ್ರೋಶಗೊಂಡ ಅಜ್ಜಿ ಬಿಸಿ ನೀರು ಸುರಿದ ಪರಿಣಾಮ ಬಾಲಕನಿಗೆ ಗಂಭೀರ ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹಬ್ಬದ ಸಂಭ್ರಮದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಅಜ್ಜಿ ಬಿಸಿ ನೀರು ಸುರಿಸಿದ ವಿಡಿಯೋ ವೈರಲ್ ಆಗಿದೆ.
ಮಾರ್ಚ್ 3ರಂದು ನಾಲ್ಕು ವರ್ಷದ ಓಂ ಹರೀಶ್ ವಾಂಗೆ ಮನೆ ಹೊರಗೆ ಸ್ನೇಹಿತರೊಂದಿಗೆ ಹೋಳಿ ಬಣ್ಣಗಳ ಆಟವಾಡುತ್ತಿದ್ದ. ಸ್ಪ್ರೇ ಬಾಟಲಿಯಲ್ಲಿ ಇದ್ದ ಬಣ್ಣದ ನೀರನ್ನು ತನ್ನ ಅಜ್ಜಿಯ ಮೇಲೂ ಸಿಂಪಡಿಸಿದ್ದಾನೆ. ಹಬ್ಬದ ಸಂಭ್ರಮದಲ್ಲಿ ನಡೆದ ಈ ಕೃತ್ಯಕ್ಕೆ ಆ ಮಹಿಳೆ ತೀವ್ರವಾಗಿ ಕೋಪಗೊಂಡಿದ್ದಾಳೆ.
ಕೋಪದ ಆವೇಶದಲ್ಲಿ ಬಕೆಟ್‌ನಲ್ಲಿದ್ದ ನೀರನ್ನು ತನ್ನ ಮೊಮ್ಮಗನ ಮೇಲೆ ಸುರಿಸಿದ್ದಾಳೆ ಎನ್ನಲಾಗಿದೆ. ಬಿಸಿ ನೀರು ತಗುಲುತ್ತಿದ್ದಂತೆ ಬಾಲಕ ನೋವಿನಿಂದ ಕಿರುಚುತ್ತಾ ಅಳಲಾರಂಭಿಸಿದ್ದಾನೆ. ಪಕ್ಕದಲ್ಲಿದ್ದ ಮತ್ತೊಬ್ಬ ಬಾಲಕಿ ತಕ್ಷಣವೇ ಅವನ ಮೇಲೆ ತಣ್ಣೀರನ್ನು ಸುರಿಸಿ ಸಹಾಯ ಮಾಡಲು ಪ್ರಯತ್ನಿಸಿದ್ದಾಳೆ.
ಈ ಘಟನೆಯಲ್ಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಬಳಿಕ ಕುಟುಂಬದವರು ತಕ್ಷಣವೇ ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರು ಬಾಲಕನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ಮುಂದುವರೆಸುತ್ತಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಾಲಕನ ಅಜ್ಜಿ ಸಿಂಧು ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
What a MONSTER B!TCH 😡
Goes Full Psycho; Pours boiling Hot Water on 5yr Old kid because he wanted to play Holi with her 🤬 pic.twitter.com/1LuFLcrwcW— Mihir Jha (@MihirkJha) March 4, 2026



