ನೂಡಲ್ಸ್‌ ತಿಂದು ಟೀ ಕುಡಿದು ಮಲಗಿದ್ದ ಒಂದೇ ಕುಟುಂಬದ ಐವರು ಸಾವು

ಗ್ರೇಟರ್‌ ನೋಯ್ಡಾದಲ್ಲಿ (Greater Noida) ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮಹೇಶ್‌, ಲಲಿತಾ ಹಾಗೂ ಅವರ ಮೂವರು ಮಕ್ಕಳು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಸ್ಥಳೀಯವಾಗಿ ತೀವ್ರ ಆತಂಕ ಮೂಡಿಸಿದೆ.

ರಬೂಪುರ ಪ್ರದೇಶದ ನಗ್ಲಾ ಶ್ರೀ ಪದಮ್‌ ಗ್ರಾಮದ ನಿವಾಸಿಗಳಾದ ಮಹೇಶ್‌ (37), ಅವರ ಪತ್ನಿ ಲಲಿತಾ (35) ಹಾಗೂ ಮಕ್ಕಳಾದ ಲಡ್ಡು (11), ಮಿಷ್ಟಿ (7) ಮತ್ತು ಸಾಕ್ಷತ್‌ (3) ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕುಟುಂಬದ ಐವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಕುಟುಂಬದ ಎಲ್ಲ ಸದಸ್ಯರು ಮೃತಪಟ್ಟಿರುವುದರಿಂದ ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ಕೋಲ್ಕತ್ತಾ ದುರ್ಗಾ ಪೂಜಾ ಕಾಲ್ತುಳಿತ ಘಟನೆ; 17 ಮಂದಿ ಭಕ್ತರು ಸಾವು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ

ಮಹೇಶ್‌ ಅವರ ತಾಯಿ ನೀಡಿರುವ ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರು ಹಿಂದಿನ ರಾತ್ರಿ ಊಟಕ್ಕೆ ನೂಡಲ್ಸ್‌ (Noodles) ಸೇವಿಸಿ, ಬಳಿಕ ಟೀ (Tea) ಕುಡಿದಿದ್ದರು.

ಇದಾದ ನಂತರ ಈ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಆಹಾರದಿಂದ ಫುಡ್ ಪಾಯಿಸನ್ (Food Poisoning) ಉಂಟಾಗಿರಬಹುದೇ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಆದರೆ, ನೂಡಲ್ಸ್‌ ಮತ್ತು ಟೀ ಸೇವನೆಯೇ ಸಾವಿಗೆ ಕಾರಣ ಎಂದು ಈವರೆಗೆ ಖಚಿತಪಟ್ಟಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ (Postmortem) ಕಳುಹಿಸಲಾಗಿದ್ದು, ವೈದ್ಯಕೀಯ ವರದಿಗಳು ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories