ಬಾಲಕಿಯ ಖಾಸಗಿ ಫೋಟೋ ಪಡೆದು ಬ್ಲಾಕ್‌ಮೇಲ್! ಬರೋಬ್ಬರಿ 80 ಲಕ್ಷ ವಸೂಲಿ

ಬಾಲಕಿ ಅವರು ಹಣ ಕೇಳಿದಾಗಲೆಲ್ಲ ನೀಡುತ್ತಿದ್ದಳು. ಈ ಮೂಲಕ ಒಟ್ಟಾರೆ ಬರೋಬ್ಬರಿ 80 ಲಕ್ಷ ರೂ. ಕೊಟ್ಟಿದ್ದಾಳೆ, ಸದ್ಯ ಈ  ಘಟನೆ ಬೆಳಕಿಗೆ ಬಂದಿದೆ. ಗುರುಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.

- - - - - - - - - - - - - Story - - - - - - - - - - - - -
  • ಬಾಲಕಿಯ ಖಾಸಗಿ ಫೋಟೋಗಳನ್ನು ಬಳಸಿ ಬ್ಲಾಕ್‌ಮೇಲ್.
  • ಐವರು ದುಷ್ಕರ್ಮಿಗಳು ಸೇರಿ, ಗುರುಗ್ರಾಮ್ ಶಾಲೆ ಬಾಲಕಿಗೆ ಬೆದರಿಕೆ.
  • ಖಾಸಗಿ ಫೋಟೋ ಇಟ್ಟುಕೊಂಡು ಬಾಲಕಿಯಿಂದ 80 ಲಕ್ಷ ವಸೂಲಿ.

Gurugram School Girl Blackmailed : ಬಾಲಕಿಯ ಖಾಸಗಿ ಫೋಟೋಗಳು ಕೆಲವು ದುರುಳರ ಕೈ ಸೇರಿದ್ದವು. ಅದುವೇ ಅವರಿಗೆ ಅಸ್ತ್ರವಾಯಿತು. ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಬೆದರಿಕೆ ಹಾಕಿದ್ದಾರೆ.

ಇದರಿಂದ ಭಯಭೀತಳಾದ ಬಾಲಕಿ ಅವರು ಹಣ ಕೇಳಿದಾಗಲೆಲ್ಲ ನೀಡುತ್ತಿದ್ದಳು. ಈ ಮೂಲಕ ಒಟ್ಟಾರೆ ಬರೋಬ್ಬರಿ 80 ಲಕ್ಷ ರೂ. ಕೊಟ್ಟಿದ್ದಾಳೆ, ಸದ್ಯ ಈ  ಘಟನೆ ಬೆಳಕಿಗೆ ಬಂದಿದೆ. ಗುರುಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.

ಗುರುಗ್ರಾಮ್ ಶಾಲೆಯೊಂದರಲ್ಲಿ ಓದುತ್ತಿದ್ದ ಬಾಲಕಿಯನ್ನು ಟ್ಯೂಷನ್ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಮಾರ್ಫ್ ಮಾಡಿ ಬೆದರಿಕೆ ಹಾಕಿದ್ದಾನೆ. ಈತನ ಜೊತೆಗೆ ಇನ್ನಿಬ್ಬರು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ. ಇದರಿಂದ ಬಾಲಕಿ ತನ್ನ ಅಜ್ಜಿಯ ಖಾತೆಯಿಂದ 80 ಲಕ್ಷ ರೂ. ಅವರಿಗೆ ನೀಡಿದ್ದಾಳೆ. ಫೆಬ್ರವರಿ, 2024 ರಿಂದ, ಇಲ್ಲಿಯ ತನಕ ಒಟ್ಟಾರೆ ಕಂತುಗಳಲ್ಲಿ 80 ಲಕ್ಷ ರೂ. ಕಳುಹಿಸಿದ್ದಾಳೆ.

ಬಾಲಕಿಯ ಖಾಸಗಿ ಫೋಟೋ ಪಡೆದು ಬ್ಲಾಕ್‌ಮೇಲ್! ಬರೋಬ್ಬರಿ 80 ಲಕ್ಷ ವಸೂಲಿ

ಆದರೆ ಇತ್ತೀಚೆಗೆ ಖಾತೆಯಿಂದ ರೂ.80 ಲಕ್ಷ ನಾಪತ್ತೆಯಾಗಿ ಕುಟುಂಬಸ್ಥರು ಕಂಗಾಲಾಗಿದ್ದರು. ಆ ಹಣ ಜಮೀನು ಮಾರಾಟವಾಗಿ ಬಂದಿತ್ತು. ಆದರೆ ಅಜ್ಜಿ ಅನಕ್ಷರಸ್ಥರಾಗಿದ್ದರು. ಇದರೊಂದಿಗೆ ಮೊಮ್ಮಗಳು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಕಳುಹಿಸಿದ್ದಾಳೆ.

ಹಣ ನಾಪತ್ತೆಯಾಗುತ್ತಿದ್ದಂತೆ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಅಸಲಿ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬಾಲಕಿ ದೆಹಲಿಯಲ್ಲಿ ತನ್ನ ತಂದೆ ಕೆಲಸ ಮಾಡುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಳೆ. ಆರೋಪಿಗಳು ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಆಕೆಯ ಖಾಸಗಿ ಫೋಟೋಗಳನ್ನು ಆನ್ ಲೈನ್ ನಲ್ಲಿ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Gurugram School Girl Blackmailed With Obscene Photos Forced To Transfer 80 Lakh

English Summary
Related Stories