3ನೇ ತರಗತಿ ಬಾಲಕನಿಂದ ಶಾಲೆಯಲ್ಲೇ ಪುಟ್ಟ ಬಾಲಕಿ ಮೇಲೆ ಕ್ರೂರ ಹಲ್ಲೆ! ಆಘಾತಕಾರಿ ವಿಡಿಯೋ
Haryana School Incident: ಹರಿಯಾಣದ ಶಾಲೆಯೊಂದರಲ್ಲಿ ನಡೆದ ಘಟನೆ ಪೋಷಕರನ್ನು ಬೆಚ್ಚಿಬೀಳಿಸಿದೆ. ಮೂರನೇ ತರಗತಿ ಬಾಲಕನಿಂದ ಯುಕೆಜಿ ವಿದ್ಯಾರ್ಥಿನಿಗೆ ಹಲ್ಲೆ ನಡೆದಿದ್ದು, ತಲೆಗೆ ಗಂಭೀರ ಗಾಯಗೊಂಡಿರುವ ಆರು ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.

Haryana School Incident: ಶಾಲೆಯಲ್ಲಿ ಮಕ್ಕಳ ಸುರಕ್ಷತೆಗೆ ಎಷ್ಟೇ ಕ್ರಮಗಳನ್ನು ಕೈಗೊಂಡಿದ್ದರೂ ಇಂತಹ ಘಟನೆಗಳು ಆತಂಕ ಮೂಡಿಸುತ್ತವೆ. ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ ಅಕ್ಟೋಬರ್ 28ರಂದು ನಡೆದ ಘಟನೆಯೊಂದು ಪೋಷಕರನ್ನು ಬೆಚ್ಚಿಬೀಳಿಸಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕ, ಯುಕೆಜಿ (UKG) ತರಗತಿಯ ಆರು ವರ್ಷದ ಬಾಲಕಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಮಾಹಿತಿಯ ಪ್ರಕಾರ, ಶಾಲೆಯ ಮೊದಲ ಮಹಡಿಯಲ್ಲಿದ್ದ ಖಾಲಿ ತರಗತಿಗೆ ಬಾಲಕಿಯನ್ನು ಎಳೆದುಕೊಂಡು ಹೋದ ಬಾಲಕ, ಮೊದಲು ಆಕೆಯ ತಲೆಯನ್ನು ಮೇಜಿಗೆ ಎರಡು ಬಾರಿ ಅಪ್ಪಳಿಸಿದ್ದಾನೆ. ಬಳಿಕ ಕೆಳಗೆ ಬಿದ್ದ ಬಾಲಕಿಯನ್ನು ಕಾಲಿನಿಂದ ಒದ್ದಿದ್ದಾನೆ. ಅಷ್ಟಕ್ಕೇ ನಿಲ್ಲದೆ ಇಟ್ಟಿಗೆ ಹಾಗೂ ಹೂವಿನ ಕುಂಡವನ್ನು (Flower Pot) ಬಳಸಿ ತಲೆಯ ಮೇಲೆ ಹಲವು ಬಾರಿ ಹೊಡೆದಿದ್ದಾನೆ.
ತೀವ್ರ ಹಲ್ಲೆಯಿಂದ ಬಾಲಕಿ ಪ್ರಜ್ಞೆ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಾಲಕ ದಾಳಿ ಮುಂದುವರಿಸಿದ್ದಾನೆ. ಘಟನೆಯ ಬಳಿಕ ತರಗತಿಯಿಂದ ಹೊರಬಂದ ಬಾಲಕ, ಬಾಲಕಿಯನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದಿದ್ದ ಆಕೆಯ ಪೋಷಕರಿಗೆ ಮೊದಲ ಮಹಡಿಯ ತರಗತಿಯಲ್ಲಿ ಮಗಳು ಬಿದ್ದಿರುವುದಾಗಿ ತೋರಿಸಿದ್ದಾನೆ ಎನ್ನಲಾಗಿದೆ.
⚠️ TRIGGER WARNING: DISTURBING INCIDENT INVOLVING MINOR CHILDREN
Panchkula, Haryana: 8-Year-Old Student Allegedly Assaults 6-Year-Old Girl With Special Needs Inside School, Victim Critically Injured.
A disturbing incident has been reported at Sanskriti Model School in Sector 20, Panchkula, where an 8-year-old Class 3 student allegedly attacked a 6-year-old KG girl with special needs.
According to reports, the accused student allegedly grabbed the girl’s hair, slammed her head against a desk and repeatedly attacked her with bricks and a flowerpot. Even after the child reportedly lost consciousness, he allegedly continued dragging and kicking her.
The injured girl was rushed for medical attention and later referred to PGI Chandigarh due to her critical condition.
Police have initiated an investigation to establish the exact sequence of events and circumstances surrounding the incident.
The incident has raised serious concerns over child safety, staff supervision and security arrangements inside schools, particularly when it comes to protecting younger and vulnerable students.
— Deadly Kalesh (@Deadlykalesh) October 31, 2026
ಬಾಲಕಿಯ ಸ್ಥಿತಿ ಗಂಭೀರ
ಮಗಳನ್ನು ಗಾಯಗೊಂಡ ಸ್ಥಿತಿಯಲ್ಲಿ ಕಂಡ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೊದಲಿಗೆ ಪಂಚಕುಲದ ಸೆಕ್ಟರ್ 6ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪಿಜಿಐ (PGI Chandigarh) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.
ಶಾಲೆಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬಾಲಕನ ಪೋಷಕರನ್ನು ವಿಚಾರಣೆ ನಡೆಸುವುದರ ಜೊತೆಗೆ ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿ ಮತ್ತು ಸುರಕ್ಷತಾ ವ್ಯವಸ್ಥೆಗಳ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ತರಗತಿಯಲ್ಲಿದ್ದ ಸಿಸಿಟಿವಿ (CCTV Footage) ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹರಿಯಾಣದ ಶಿಕ್ಷಣ ಸಚಿವ ಮಹಿಪಾಲ್ ಧಂಡಾ (Mahipal Dhanda) ತನಿಖೆಗಾಗಿ ವಿಶೇಷ ಸಮಿತಿಯನ್ನು ರಚಿಸಿದ್ದಾರೆ. ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ತಪ್ಪಿತಸ್ಥರ ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






