ಆಯುಷ್ಮಾನ್ ಭಾರತ್ ಯೋಜನೆ ಅಡಿ ಉಚಿತ ಸೇವೆ ಪಡೆಯುವ ವಿಧಾನ ಇಲ್ಲಿದೆ
ಈ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳ ವರೆಗೆ ಉಚಿತ ಚಿಕಿತ್ಸೆ ಯನ್ನು ಪಡೆದುಕೊಳ್ಳಲು ಅವಕಾಶವಿದೆ. ನಿರ್ದಿಷ್ಟ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಸೇವೆಯನ್ನು ಈ ಯೋಜನೆಯಡಿ ಪಡೆದುಕೊಳ್ಳಬಹುದು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳ ವರೆಗೆ ಉಚಿತ ಚಿಕಿತ್ಸೆ ಯನ್ನು ಪಡೆದುಕೊಳ್ಳಲು ಅವಕಾಶವಿದೆ. ನಿರ್ದಿಷ್ಟ ಆಸ್ಪತ್ರೆಗಳಲ್ಲಿ ನಿರ್ದಿಷ್ಟ ಸೇವೆಯನ್ನು ಈ ಯೋಜನೆಯಡಿ ಪಡೆದುಕೊಳ್ಳಬಹುದು.
ಆಯುಷ್ಮಾನ್ ಭಾರತ್ ಯೋಜನೆ!
ದೇಶದ ವೈದ್ಯಕೀಯ ವಿಮಾ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಎಂದು ಹೆಚ್ಚು ಯಶಸ್ಸನ್ನು ಕಂಡಿದೆ. ಯೋಜನೆಯಡಿಯಲ್ಲಿ ಕೋಟ್ಯಾಂತರ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಆಯುಷ್ಮಾನ್ ಕಾರ್ಡ್ ಹೊಂದಿದ್ರೆ ದೇಶದ 30 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು. ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಚಾರ್ಜ್ ಕೂಡ ಇದರಲ್ಲಿ ಸೇರುತ್ತದೆ.
ಯಾರು ಈ ಯೋಜನೆಗೆ ಅರ್ಹರು?
ಗ್ರಾಮೀಣ ಭಾಗದಲ್ಲಿ ಒಂದು ರೂಮಿನ, ಮಣ್ಣಿನ ಗೋಡೆ ಮತ್ತು ಛಾವಣಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ನಗರ ಪ್ರದೇಶದಲ್ಲಿ ವಾಸಿಸುವ ಬೀದಿ ಬೀದಿ ವ್ಯಾಪಾರಿಗಳು, ಭಿಕ್ಷುಕರು, ಕಾರ್ಮಿಕರು, ಮೆಕಾನಿಕ್ ಗಳು ಪೌರಕಾರ್ಮಿಕರು ಮೊದಲಾದವರು ಅಪ್ಲೈ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಪಾಸ್ಪೋರ್ಟ್ ಅಳತೆಯ ಫೋಟೋಗಳು
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ PMJAY ಅಧಿಕೃತ ವೆಬ್ಸೈಟ್ ಗೆ ಹೋಗಿ ನಾನು ಅರ್ಹನೆ ಎಂಬುದನ್ನು ತಿಳಿದುಕೊಳ್ಳಬೇಕು.
- ಅರ್ಹರಾಗಿದ್ದರೆ ಅದು ನೇರವಾಗಿ NHA ವೆಬ್ಸೈಟ್ಗೆ ಮರು ನಿರ್ದೇಶಸುತ್ತದೆ.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಕ್ಯಾಪ್ಚ ಕೋಡ್ ನಮೂದಿಸಬೇಕು
- ಮೊಬೈಲ್ಗೆ ಓಟಿಪಿ ಕಳುಹಿಸಲಾಗುತ್ತದೆ ಅದನ್ನು ನಮೂದಿಸಿ
- ನಂತರ ಲಾಗಿನ್ ಮಾಡಿ
ಇನ್ನು ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ಆಯುಷ್ಮಾನ್ ಕಾರ್ಡ್ ಪ್ರಯೋಜನ ನೀಡಲಾಗುವ ಖಾಸಗಿ ಆಸ್ಪತ್ರೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
Here’s how to avail free services under the Ayushman Bharat scheme