ಭಾರೀ ಹಿಮ, ಹಿಮಾಚಲ ಪ್ರದೇಶಕ್ಕೆ ಆರೆಂಜ್ ಅಲರ್ಟ್! 226 ರಸ್ತೆಗಳು ಬಂದ್

ವಿಪರೀತ ಚಳಿಯಿಂದಾಗಿ ಉತ್ತರ ಭಾರತ ನಡುಗುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ತಾಪಮಾನ ತೀವ್ರವಾಗಿ ಕುಸಿದಿದೆ. ಅದರಲ್ಲೂ ಹಿಮಾಚಲ ಪ್ರದೇಶ ಹಿಮದ ಹೊದಿಕೆಯಿಂದ ಆವೃತವಾಗಿತ್ತು. ನಿರಂತರವಾಗಿ ಹಿಮ ಬೀಳುತ್ತಿದೆ.

ಇದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳ ಮೇಲೆ ಅಡಿಗಳಷ್ಟು ಹಿಮದ ರಾಶಿ ಇದೆ. ಎಚ್ಚೆತ್ತ ಅಧಿಕಾರಿಗಳು ರಾಜ್ಯಾದ್ಯಂತ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 226 ರಸ್ತೆಗಳನ್ನು ಮುಚ್ಚಲಾಗಿದೆ. ಇದರಲ್ಲಿ ಶಿಮ್ಲಾದಲ್ಲಿ 123, ಲಾಹೌಲ್, ಸ್ಪಿತಿಯಲ್ಲಿ 36 ಮತ್ತು ಕುಲುವಿನಲ್ಲಿ 25 ರಸ್ತೆಗಳು ಸೇರಿವೆ. 173 ಟ್ರಾನ್ಸ್‌ಫಾರ್ಮರ್‌ಗಳು ಸ್ಥಗಿತಗೊಂಡಿವೆ.

ಭಾರೀ ಹಿಮ, ಹಿಮಾಚಲ ಪ್ರದೇಶಕ್ಕೆ ಆರೆಂಜ್ ಅಲರ್ಟ್! 226 ರಸ್ತೆಗಳು ಬಂದ್

ಇದರಿಂದ ರಾಜ್ಯಾದ್ಯಂತ ವಿದ್ಯುತ್ ಪೂರೈಕೆಗೆ ತೀವ್ರ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ತೀವ್ರ ಚಳಿಯಿಂದಾಗಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರಾಜ್ಯಾದ್ಯಂತ ದಟ್ಟ ಮಂಜು ಮುಂದುವರಿಯುವ ಸಾಧ್ಯತೆ ಇದೆ.

Himachal Pradesh And Jammu Kashmir Covered In Heavy Snow

Related Stories