ಟ್ರಕ್ ಡಿಕ್ಕಿಯಾಗಿ ಪತ್ನಿ ಸಾವು, ಸಹಾಯಕ್ಕೆ ಬಾರದ ಜನ! ಶವವನ್ನು ಬೈಕ್‌ಗೆ ಕಟ್ಟಿ ಸಾಗಿದ ಗಂಡ
ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಹೃದಯವಿದ್ರಾವಕ ಘಟನೆ. ಟ್ರಕ್ ಡಿಕ್ಕಿಯಲ್ಲಿ ಪತ್ನಿ ಸಾವನ್ನಪ್ಪಿದ ಬಳಿಕ ಸಹಾಯ ದೊರೆಯದೇ, ಗಂಡ ಬೈಕ್‌ಗೆ ಶವ ಕಟ್ಟಿ ತಮ್ಮ ಗ್ರಾಮಕ್ಕೆ ಹೊರಟ ಘಟನೆ.
- ನಾಗಪುರ ಟ್ರಕ್ ಅಪಘಾತದಲ್ಲಿ ಮಹಿಳೆ ಸಾವು
- ಸಹಾಯ ಸಿಗದೇ ಪತಿ ಬೈಕ್‌ಗೆ ಶವ ಕಟ್ಟಿ ಸಾಗಿಸಿದ ಘಟನೆ
ಮಹಾರಾಷ್ಟ್ರದ ನಾಗಪುರದಲ್ಲಿ ರಕ್ಷಾ ಬಂಧನ್ ದಿನ ನಡೆದ ಘಟನೆಯೊಂದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ರಸ್ತೆ ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ ಬಳಿಕ, ಸಹಾಯಕ್ಕಾಗಿ ಕಣ್ಣೀರು ಹಾಕಿದ ಗಂಡನ ಮನವಿ ಯಾರಿಗೂ ತಟ್ಟಲಿಲ್ಲ.
ಪೊಲೀಸರ ಪ್ರಕಾರ, ಆಗಸ್ಟ್ 9ರಂದು ನಾಗಪುರ–ಜಬಲ್‌ಪುರ ಹೆದ್ದಾರಿಯಲ್ಲಿ ಅಮಿತ್ ಯಾದವ್ ಮತ್ತು ಪತ್ನಿ ಗ್ಯಾರ್ಸಿ, ನಾಗಪುರದ ಲೋನಾದಿಂದ ಮಧ್ಯಪ್ರದೇಶದ ಕರಣ್‌ಪುರ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು.
ಈ ವೇಳೆ ಮೋರಫತಾ ಬಳಿ ವೇಗವಾಗಿ ಬಂದ ಟ್ರಕ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿತು. ಗ್ಯಾರ್ಸಿ ಸ್ಥಳದಲ್ಲೇ ಮೃತಪಟ್ಟರೆ, ಟ್ರಕ್ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾದನು.
ಇದನ್ನೂ ಓದಿ: ದೆಹಲಿ-ವಾಷಿಂಗ್ಟನ್ ವಿಮಾನಗಳ ಸಂಚಾರ ಸ್ಥಗಿತಗೊಳಿಸಿದ ಏರ್ ಇಂಡಿಯಾ
ಅಪಘಾತದ ನಂತರ, ಅಮಿತ್ ತಮ್ಮ ಪತ್ನಿಯ ಶವವನ್ನು ಸ್ಥಳಾಂತರಿಸಲು ಆ ಮಾರ್ಗದಲ್ಲಿ ಬರುವ ವಾಹನದ ಚಾಲಕರು ಹಾಗೂ ಪಾದಚಾರಿಗಳಲ್ಲಿ ಸಹಾಯ ಕೋರಿ ಬೇಡಿಕೊಂಡರು. ಆದರೆ ಯಾರೂ ಸಹಾಯಕ್ಕೆ ಮುಂದೆ ಬರಲಿಲ್ಲ.
ಬೇರೆ ಮಾರ್ಗವಿಲ್ಲದೆ, ಅವರು ಪತ್ನಿಯ ಶವವನ್ನು ಬೈಕ್‌ಗೆ ಕಟ್ಟಿ ತಮ್ಮ ಮಧ್ಯಪ್ರದೇಶದ ಸ್ವಗ್ರಾಮದತ್ತ ಹೊರಟರು. ಕೆಲವೇ ಸಮಯದಲ್ಲಿ ಅವರನ್ನು ಹಿಂಬಾಲಿಸಿದ ಪೊಲೀಸರು ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು.
Husband Carries Wife’s Body on Bike After Nagpur Accident







