ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ ಪತಿ! ಮಿಸ್ಸಿಂಗ್ ಕೇಸ್ ತನಿಖೆಯಿಂದ ಹತ್ಯೆ ಬಯಲು
ಉತ್ತರ ಪ್ರದೇಶದ ಶ್ರಾವಸ್ತಿಯಲ್ಲಿ ಪತಿಯೊಬ್ಬನು ಪತ್ನಿಯನ್ನು ಕೊಂದ ಬಳಿಕ ದೇಹವನ್ನು ತುಂಡು ತುಂಡು ಮಾಡಿದ್ದು, ಭಾಗಗಳನ್ನು ವಿವಿಧ ಕಡೆ ಎಸೆದು ತಲೆಮರೆಸಿಕೊಳ್ಳಲು ಪ್ರಯತ್ನಿಸಿದ್ದ, ಆತ ಇದೀಗ ಪೊಲೀಸರ ವಶದಲ್ಲಿದ್ದಾನೆ.

- ಮಿಸ್ಸಿಂಗ್ ಕೇಸ್ ತನಿಖೆಯಿಂದ ಹತ್ಯೆ ಬಯಲು
- ಪತ್ನಿಯ ತುಂಡು ತುಂಡಾಗಿ ಕತ್ತರಿಸಿದ ಪತಿ
- ಪೊಲೀಸ್ ವಿಚಾರಣೆಯಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ
ಲಕ್ನೋ (Lucknow shocking crime) ನಗರದಲ್ಲಿ ನಡೆದ ಈ ಅಮಾನುಷ ಘಟನೆ ಇಡೀ ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದೆ. ಪತ್ನಿಯನ್ನು ನಿರ್ದಯವಾಗಿ ಹತ್ಯೆಗೈದು, ಅವಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿವಿಧ ಕಡೆಗಳಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ ಪತಿಯ ಕ್ರೂರತೆ ಬೆರಗುಗೊಳಿಸುತ್ತದೆ.
ಮೇ 14ರಂದು ಸಬೀನಾ ಎಂಬ ಮಹಿಳೆಗೆ ಫೋನ್ ಮಾಡಿದ ಅವಳ ಅಣ್ಣ ಸಲಾಹುದ್ದೀನ್, ಫೋನ್ ಸ್ವಿಚ್ ಆಫ್ ಆಗಿರುವುದನ್ನು ಗಮನಿಸಿ ತಕ್ಷಣವೇ ಅವರ ಮನೆಗೆ ಬಂದಿದ್ದ. ಈ ವೇಳೆ ಗಂಡ ಹೆಂಡತಿ ಇಬ್ಬರೂ ಲಕ್ನೋಗೆ ಹೋಗಿದ್ದ ವಿಷಯ ತಿಳಿದುಬಂದಿದೆ. ಆದರೆ ತನ್ನ ಸಹೋದರಿಯ ಪತಿ ಸೈಫುದ್ದೀನ್ ನಗರದಲ್ಲಿ ಒಬ್ಬನೇ ಸುತ್ತಾಡುತ್ತಿರುವುದನ್ನು ನೋಡಿ ಅವನಿಗೆ ಆಘಾತವಾಯಿತು. ಆತನನ್ನು ನೋಡಿ ಶಂಕೆಪಟ್ಟು ಪೊಲೀಸರಿಗೆ ದೂರು ನೀಡಿದನು.
ಪ್ರಾಥಮಿಕ ತನಿಖೆಯಲ್ಲಿ ಸಂಶಯಾಸ್ಪದ ವರ್ತನೆಯಿಂದ ಪತಿ ಸೈಫುದ್ದೀನ್ (Saifuddin arrested) ಪೊಲೀಸರು ವಿಚಾರಣೆ ನಡೆಸಿದಾಗ ಮೊದಲು ತಪ್ಪು ಮಾಹಿತಿ ನೀಡುತ್ತಿದ್ದನು. ಎರಡು ದಿನಗಳ ವಿಚಾರಣೆ ನಂತರ ಸತ್ಯವನ್ನು ಒಪ್ಪಿಕೊಂಡನು.
ಪತ್ನಿ ಸಬೀನಾಳನ್ನು ಹತ್ಯೆ ಮಾಡಿ, ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ಹತ್ತಾರು ಕಿಲೋಮೀಟರ್ ದೂರದವರೆಗೆ ಎಸೆದಿದ್ದನು. ದೇಹದ ಕೆಲವು ಭಾಗಗಳನ್ನು ಕಾಲುವೆಗೆ ಹಾಕಿದ್ದನು. ಒಂದು ಕೈ ಭಾಗವನ್ನು ತಗೊಂಡು, ಪಕ್ಕದ ಗಾರ್ಡನ್ನಲ್ಲಿ ಹೂತಿರುವುದಾಗಿ ಹೇಳಿದ್ದಾನೆ.
31 ವರ್ಷದ ಸೈಫುದ್ದೀನ್ ಮತ್ತು 25 ವರ್ಷದ ಸಬೀನಾ ಲಕ್ನೋಗೆ ಪ್ರಯಾಣ ಮಾಡಿದ ಬಳಿಕ ಮಾರ್ಗಮಧ್ಯದಲ್ಲಿಯೇ ಈ ಕ್ರೂರ ಹತ್ಯೆ ನಡೆಯಿತು. ಶ್ರಾವಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಈಗಾಗಲೇ ಆತನಿಂದ 10 ಕಿಲೋಮೀಟರ್ ವಿಸ್ತಾರದಲ್ಲಿ ಹರಡಿದ್ದ ದೇಹದ ಭಾಗಗಳನ್ನು ಸಂಗ್ರಹಿಸಿ, ಪ್ರಮುಖ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿ ಸೈಫುದ್ದೀನ್ ಅನ್ನು ಜೈಲಿಗಟ್ಟಿದ್ದಾರೆ.
Husband Kills Wife, Scatters Body Parts







