ಅತಿಯಾಗಿ ಮೊಬೈಲ್ ಫೋನ್ ಬಳಸುತ್ತಿದ್ದ ಪತ್ನಿ, ಎರಡನೇ ಮಹಡಿಯಿಂದ ತಳ್ಳಿದ ಪತಿ
ಅತಿಯಾಗಿ ಫೋನ್ ಬಳಸುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿ ಆಕೆಯನ್ನು ಎರಡನೇ ಮಹಡಿಯಿಂದ ತಳ್ಳಿದ್ದಾನೆ, ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ
Chhattisgarh : ಅತಿಯಾಗಿ ಮೊಬೈಲ್ (Mobile) ಬಳಸುತ್ತಿದ್ದಳು ಎಂಬ ಕಾರಣಕ್ಕೆ ಪತಿ ಪತ್ನಿಯನ್ನು ಎರಡನೇ ಮಹಡಿಯಿಂದ ಕೆಳಗೆ ತಳ್ಳಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಡಿಕೆಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು, ಕೋಪಗೊಂಡ ಪತಿ ಆಕೆಯನ್ನು ಎರಡನೇ ಮಹಡಿಯಿಂದ ತಳ್ಳಿದ್ದಾನೆ, ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.
ರಾಜಧಾನಿ ರಾಯಪುರದ ವಿಕಾಸ್ ನಗರದ ನಿವಾಸಿ ಸುನಿಲ್ ಎಂಬ ವ್ಯಕ್ತಿ ಕೆಲಸದಿಂದ ಸುಸ್ತಾಗಿ ಮನೆಗೆ ಬಂದಿದ್ದ. ಹೆಂಡತಿಗೆ ಊಟ ಬಡಿಸಲು ಹೇಳಿದ. ಗಮನ ಕೊಡದೆ ಆಕೆ ಮೊಬೈಲ್ ನೋಡುವುದರಲ್ಲಿ ನಿರತಳಾಗಿದ್ದಳು.
ಆಗಲೇ ಸುಸ್ತಾಗಿದ್ದ ಸುನಿಲ್‌ಗೆ ಕೋಪ ಹೆಚ್ಚಾಯಿತು. ಕೋಪಗೊಂಡ ಆತ ತನ್ನ ಹೆಂಡತಿಯನ್ನು ಮನೆಯ ಎರಡನೇ ಮಹಡಿಯ ಬಾಲ್ಕನಿಗೆ ಕರೆದೊಯ್ದನು. ನಂತರ ಏಕಾಏಕಿ ಅಲ್ಲಿಂದ ಕೆಳಗೆ ತಳ್ಳಿದ್ದಾನೆ.
ಕೆಳಗೆ ಬಿದ್ದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು. ಘಟನೆ ನಡೆದ ತಕ್ಷಣ ನೆರೆಹೊರೆಯವರು ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಡಿಕೆಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪತಿ ವಿರುದ್ಧ ಕೊಲೆ ಯತ್ನದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Husband Pushed His Wife From The Second Floor In Chhattisgarh