ಆಗ್ರಾದಲ್ಲಿ ಐಎಎಫ್ ಫೈಟರ್ ಜೆಟ್ ಮಿಗ್ 29 ವಿಮಾನ ಪತನ! ಪೈಲಟ್‌ಗಳು ಸುರಕ್ಷಿತ
MiG-29 : ಉತ್ತರ ಪ್ರದೇಶದ ಆಗ್ರಾದಲ್ಲಿ ವಾಯುಪಡೆಯ ಮಿಗ್-29 ವಿಮಾನ ಪತನಗೊಂಡಿದೆ. ವಿಮಾನ ಪತನಗೊಂಡ ತಕ್ಷಣ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್ ಮತ್ತು ಸಹ ಪೈಲಟ್ ಪಾರಾಗಿದ್ದಾರೆ.
MiG-29 : ಉತ್ತರ ಪ್ರದೇಶದ ಆಗ್ರಾದಲ್ಲಿ ವಾಯುಪಡೆಯ ಮಿಗ್-29 ವಿಮಾನ ಪತನ ಗೊಂಡಿದೆ (IAF Fighter Jet Crashes In Agra). ವಿಮಾನ ಪತನಗೊಂಡ ತಕ್ಷಣ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಪಾರಾಗಿದ್ದಾರೆ. ಅಪಘಾತದ ಸಮಯದಲ್ಲಿ, ಅವರು ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
ಪಂಜಾಬ್‌ನ ಆದಂಪುರದಿಂದ ಆಗ್ರಾಕ್ಕೆ (Agra) ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಿಗ್-29 ಪತನಕ್ಕೆ (MiG-29 Fighter Jet) ಕಾರಣಗಳು ತಿಳಿದುಬಂದಿಲ್ಲ. ಲ್ಯಾಂಡಿಂಗ್‌ಗೆ ಎರಡು ಕಿಲೋಮೀಟರ್ ದೂರದಲ್ಲಿ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೆ ವಾಯುಪಡೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್‌ನ ವಿಮಾನವು ಕಾಗರೋಲ್‌ನ ಸೋನಿಗಾ ಗ್ರಾಮದ ಬಳಿಯ ಖಾಲಿ ಜಾಗದಲ್ಲಿ ಪತನಗೊಂಡಿದೆ, ಅದು ಜನನಿಬಿಡ ಪ್ರದೇಶದಲ್ಲಿ ಪತನಗೊಂಡಿದ್ದರೆ, ಅದು ಭಾರಿ ಹಾನಿಯನ್ನುಂಟುಮಾಡುತ್ತಿತ್ತು ಎಂದು ಹೇಳಲಾಗಿದೆ.
Update :
ವಿಮಾನ ಪತನ – 2 ಕಿಲೋಮೀಟರ್ ದೂರದಲ್ಲಿ ಪೈಲಟ್ ಪತ್ತೆ
ಅಪಘಾತದ ನಂತರ, ಪೈಲಟ್ ಮತ್ತು ಅವರ ಸಹಚರರು ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೈಲಟ್ ಬುದ್ದಿವಂತಿಕೆ ತೋರಿ ಕಾಗರೌಲ್ ನ ಸೋನಿಗಾ ಗ್ರಾಮದ ಬಳಿಯ ಖಾಲಿ ಜಾಗದಲ್ಲಿ ವಿಮಾನ ಇಳಿಸಿದ್ದು ಅದೃಷ್ಟ. ಒಂದು ವೇಳೆ ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡಿದ್ದರೆ ಭಾರೀ ಹಾನಿಯಾಗಬಹುದಿತ್ತು.
ವಿಮಾನವು ಪಂಜಾಬ್‌ನಿಂದ ಟೇಕ್ ಆಫ್ ಆಗಿತ್ತು
ಮಿಗ್ -29 ವಿಮಾನ ಇದು ಪಂಜಾಬ್‌ನ ಆದಂಪುರದಿಂದ ಟೇಕ್ ಆಫ್ ಆಗಿತ್ತು. ಸದ್ಯ ಸ್ಥಳದಲ್ಲಿ ಗ್ರಾಮಸ್ಥರ ದಂಡೇ ನೆರೆದಿದೆ. ಪೊಲೀಸ್ ಪಡೆ ಕೂಡ ಸ್ಥಳಕ್ಕೆ ತಲುಪಿದೆ. ಈ ವಿಮಾನವು ಕಾಗ್ರೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಘಾ ಮತ್ತು ಬಹಾ ನಡುವಿನ ರೈತ ಬಾಬಿ ಎಂಬುವವರ ಹೊಲದಲ್ಲಿ ವಿಮಾನ ಪತನಗೊಂಡಿದೆ. ಏರ್ ಫೋರ್ಸ್ ತಂಡ ಸ್ಥಳಕ್ಕೆ ತಲುಪಿದೆ. ಹತ್ತಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ.
ತರಬೇತಿ ಹಾರಾಟದ ಸಮಯದಲ್ಲಿ ಸಿಸ್ಟಮ್ ಅಸಮರ್ಪಕ ಕಾರ್ಯದ ನಂತರ ಮಿಗ್ -29 ವಿಮಾನವು ಇಂದು ಆಗ್ರಾ ಬಳಿ ಪತನಗೊಂಡಿದೆ ಎಂದು ಹೇಳಿಕೆಯಲ್ಲಿ ಭಾರತೀಯ ವಾಯುಪಡೆ ತಿಳಿಸಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ವಾಯುಪಡೆಯು ತನಿಖೆಗೆ ಆದೇಶಿಸಿದೆ.
IAF Fighter Jet MiG 29 Crashes In Agra