5 ವರ್ಷಗಳ ನಂತರ ಭಾರತ ಮತ್ತು ಚೀನಾ ನಡುವೆ ನೇರ ವಿಮಾನ ಸೇವೆಗಳು - India-China flights
ಭಾರತ–ಚೀನಾ ನಡುವೆ ಐದು ವರ್ಷಗಳಿಂದ ನಿಂತಿದ್ದ ನೇರ ವಿಮಾನ ಸೇವೆಗಳು ಸೆಪ್ಟೆಂಬರ್‌ನಲ್ಲಿ ಮತ್ತೆ ಆರಂಭವಾಗುವ ಸಾಧ್ಯತೆ. ಏರ್ ಇಂಡಿಯಾ, ಇಂಡಿಗೋ ಸಂಸ್ಥೆಗಳು ಚೀನಾಕ್ಕೆ ಹಾರಾಟಕ್ಕೆ ಸಜ್ಜಾಗಲು ಸೂಚನೆ.

- ಐದು ವರ್ಷಗಳ ಬಳಿಕ ಭಾರತ–ಚೀನಾ ನೇರ ವಿಮಾನ ಸೇವೆಗಳು
- ಗಲ್ವಾನ್ ಘಟನೆ ಬಳಿಕ ನಿಂತಿದ್ದ ಹಾರಾಟ ಪುನರಾರಂಭ ಸಾಧ್ಯತೆ
- ಏರ್ ಇಂಡಿಯಾ, ಇಂಡಿಗೋ ಸಂಸ್ಥೆಗಳಿಗೆ ಕೇಂದ್ರದಿಂದ ಸೂಚನೆ
India-China flights : ಭಾರತ–ಚೀನಾ ನಡುವಿನ ನೇರ ವಿಮಾನ ಸೇವೆಗಳು ಶೀಘ್ರದಲ್ಲೇ ಪುನರಾರಂಭವಾಗುವ ನಿರೀಕ್ಷೆ ಮೂಡಿದೆ. ಬ್ಲೂಂಬರ್ಗ್ ವರದಿ ಪ್ರಕಾರ, ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಹಾರಾಟವನ್ನು ಸೆಪ್ಟೆಂಬರ್‌ನಲ್ಲೇ ಮರು ಪ್ರಾರಂಭಿಸುವ ಸಾಧ್ಯತೆ ಇದೆ.
ಮಾಹಿತಿಯಂತೆ, ಏರ್ ಇಂಡಿಯಾ (Air India), ಇಂಡಿಗೋ (Indigo) ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ನೇರ ವಿಮಾನ ಹಾರಾಟಕ್ಕೆ ಸಜ್ಜಾಗಲು ಕೇಂದ್ರ ಸರ್ಕಾರದಿಂದ ಸೂಚನೆ ಪಡೆದಿವೆ. ಇದರೊಂದಿಗೆ, ಎರಡು ದೇಶಗಳ ಪ್ರಯಾಣಿಕರಿಗೆ ದೀರ್ಘಕಾಲದ ನಿರೀಕ್ಷೆ ಕೊನೆಗಾಣಬಹುದು.
ಇದನ್ನೂ ಓದಿ: ಮನೆ ಇಲ್ಲದ ಬಡಕುಟುಂಬಕ್ಕೆ 2.5 ಲಕ್ಷ ನೆರವು! ಸರ್ಕಾರದಿಂದ ಭರ್ಜರಿ ಯೋಜನೆ
2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಸೈನಿಕ ಘರ್ಷಣೆ ಬಳಿಕ ಭಾರತ–ಚೀನಾ ಸಂಬಂಧ ಗಂಭೀರವಾಗಿ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ನೇರ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇದೇ ವೇಳೆ, ಚೀನಾದ ಅನೇಕ ಆಪ್‌ಗಳನ್ನು ಭಾರತ ನಿಷೇಧಿಸಿ, ಚೀನಾ ಹೂಡಿಕೆಗಳಿಗೆ ನಿರಾಕರಿಸಿತು. ಅಲ್ಲದೆ, ಚೀನಾ ಉತ್ಪನ್ನಗಳ ಆಮದು ಮೇಲೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.
ಆದರೆ ಇತ್ತೀಚಿನ ತಿಂಗಳಲ್ಲಿ ಎರಡೂ ರಾಷ್ಟ್ರಗಳು ಉದ್ವಿಗ್ನತೆಯನ್ನು ತಗ್ಗಿಸಲು ಕ್ರಮ ಕೈಗೊಂಡಿದ್ದು, ಸಕಾರಾತ್ಮಕ ಸಂದೇಶಗಳು ಕಾಣಿಸುತ್ತಿವೆ. ವಿಮಾನ ಸೇವೆ ಪುನರಾರಂಭವು ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲ, ಆರ್ಥಿಕ ಹಾಗೂ ವಾಣಿಜ್ಯ ವಲಯಕ್ಕೂ ಲಾಭಕಾರಿ ಎನ್ನಲಾಗಿದೆ.
ವಿಶ್ಲೇಷಕರ ಪ್ರಕಾರ, ಸಂಬಂಧ ಸುಧಾರಣೆಯಿಂದ ಭಾರತ ಮತ್ತು ಚೀನಾ ಜಾಗತಿಕ ವಾಣಿಜ್ಯ ವೇದಿಕೆಯಲ್ಲಿ ಅಮೆರಿಕ ಎದುರು ಸ್ಪರ್ಧಾತ್ಮಕವಾಗಿ ನಿಲ್ಲುವ ಸಾಧ್ಯತೆ ಇದೆ.
India-China direct flights set to resume after five years







