Israel-Iran War: ಇಸ್ರೇಲ್–ಇರಾನ್ ಯುದ್ಧ ಸಂಘರ್ಷ, ಭಾರತೀಯರಿಗೆ ಕೇಂದ್ರದ ಎಚ್ಚರಿಕೆ
Israel-Iran War: ಇಸ್ರೇಲ್–ಇರಾನ್ ನಡುವೆ ತೀವ್ರಗೊಂಡ ದಾಳಿಗಳ ಹಿನ್ನೆಲೆ ಎರಡೂ ದೇಶಗಳಲ್ಲಿ ಇರುವ ಭಾರತೀಯರಿಗೆ ರಾಯಬಾರ ಕಚೇರಿಗಳು ಮಹತ್ವದ ಸೂಚನೆಗಳನ್ನು ನೀಡಿವೆ. ಅತೀ ಅಗತ್ಯವಿಲ್ಲದೆ ಸಂಚಾರ ತಪ್ಪಿಸಿ, ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.

- ಇಸ್ರೇಲ್–ಇರಾನ್ ಯುದ್ಧ ಸಂಘರ್ಷ
- ಭಾರತೀಯರಿಗೆ ರಾಯಬಾರ ಕಚೇರಿ ಎಚ್ಚರಿಕೆ
- ಸುರಕ್ಷತಾ ಮಾರ್ಗಸೂಚಿ ಪಾಲನೆ ಸೂಚನೆ
Israel-Iran War: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಇಸ್ರೇಲ್ ಮತ್ತು ಇರಾನ್ ಪರಸ್ಪರ ಕ್ಷಿಪಣಿ ದಾಳಿಗೆ ಮುಂದಾಗಿವೆ. ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಎರಡೂ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ವ್ಯಕ್ತಪಡಿಸಿದೆ. ಅಲ್ಲಿನ ಭಾರತೀಯ ರಾಯಬಾರ ಕಚೇರಿಗಳು ತುರ್ತು ಸೂಚನೆಗಳನ್ನು ಜಾರಿ ಮಾಡಿವೆ.
ಇಸ್ರೇಲ್‌ನಲ್ಲಿ ವಿಶೇಷ ಎಚ್ಚರಿಕೆ
ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಅತೀವ ಎಚ್ಚರಿಕೆಯಿಂದ ಇರಬೇಕೆಂದು ರಾಯಬಾರ ಕಚೇರಿ ತಿಳಿಸಿದೆ. ಇಸ್ರೇಲ್ ಹೋಮ್ ಫ್ರಂಟ್ ಕಮಾಂಡ್ ಜಾರಿ ಮಾಡುವ ಸುರಕ್ಷತಾ ಮಾರ್ಗಸೂಚಿಗಳನ್ನು ನಿಯಮಿತವಾಗಿ ಪರಿಶೀಲಿಸಿ ಅನುಸರಿಸುವಂತೆ ಸೂಚಿಸಲಾಗಿದೆ. ತಮ್ಮ ವಾಸಸ್ಥಳ ಅಥವಾ ಕಾರ್ಯಸ್ಥಳದ ಸಮೀಪದ ರಕ್ಷಣೆ ಕೇಂದ್ರಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಸೈರನ್ ಮೊಳಗಿದ ಸಂದರ್ಭಗಳಲ್ಲಿ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ತುರ್ತು ಅಗತ್ಯವಿಲ್ಲದೆ ಹೊರಗೆ ಸಂಚಾರ ತಪ್ಪಿಸಬೇಕು. ಸ್ಥಳೀಯ ಆಡಳಿತ ನೀಡುವ ಸೂಚನೆಗಳು, ಸುದ್ದಿ ಅಪ್ಡೇಟ್‌ಗಳು ಮತ್ತು ಎಮರ್ಜೆನ್ಸಿ ಅಲರ್ಟ್‌ಗಳನ್ನು ನಿರಂತರವಾಗಿ ಗಮನಿಸಬೇಕೆಂದು ಸಲಹೆ ನೀಡಲಾಗಿದೆ.
ಇರಾನ್‌ನಲ್ಲೂ ಇದೇ ಸೂಚನೆ
ಇರಾನ್‌ನಲ್ಲಿ ಇರುವ ಭಾರತೀಯರಿಗೂ ಇದೇ ರೀತಿಯ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನಗತ್ಯ ಪ್ರಯಾಣಗಳನ್ನು ಕೈಗೊಳ್ಳಬಾರದು. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ತಕ್ಷಣ ಭಾರತೀಯ ರಾಯಬಾರ ಕಚೇರಿಯನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಕ್ಷಿಪಣಿ ದಾಳಿಗಳು ಗಲ್ಫ್ ಪ್ರದೇಶದಲ್ಲಿ ಆತಂಕ ಹೆಚ್ಚಿಸಿವೆ. ಜನಸಾಮಾನ್ಯರು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳು ಒತ್ತಿಹೇಳಿದ್ದಾರೆ.



