ಇಂದು ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಮಾತುಕತೆ
ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಅಮೆರಿಕ ಸರ್ಕಾರದ ಮುಖ್ಯ ಸಮಾಲೋಚಕ ಬ್ರೆಂಡನ್ ಲಿಂಚ್ ಸೋಮವಾರ ಮಧ್ಯರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ

ನವದೆಹಲಿ: ಭಾರತೀಯ ಸರಕುಗಳ ಮೇಲೆ ಅಮೆರಿಕ ಶೇ. 50 ರಷ್ಟು ಆಮದು ಸುಂಕ ವಿಧಿಸಿದ ನಂತರ ಸ್ಥಗಿತಗೊಂಡಿರುವ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸಲು ಅಮೆರಿಕ ಸರ್ಕಾರದ ಮುಖ್ಯ ಸಮಾಲೋಚಕ ಬ್ರೆಂಡನ್ ಲಿಂಚ್ ಸೋಮವಾರ ಮಧ್ಯರಾತ್ರಿ ನವದೆಹಲಿಗೆ ಆಗಮಿಸಿದರು.
ಭಾರತ-ಯುಎಸ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಕುರಿತು ಇದುವರೆಗೆ ಐದು ಸುತ್ತಿನ ಮಾತುಕತೆಗಳು ನಡೆದಿದ್ದರೆ, ಅಮೆರಿಕ ಸರ್ಕಾರ ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದ ನಂತರ ಆಗಸ್ಟ್ 25-29 ರ ನಡುವೆ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆಯನ್ನು ಮುಂದೂಡಲಾಗಿತ್ತು.
India-US trade talks today
TRENDING ARTICLES1 / 4







