ಪಾಕಿಸ್ತಾನದ ಪರಮಾಣು ಬ್ಲಾಕ್ಮೇಲ್ಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಪಾಕಿಸ್ತಾನದ ಪರಮಾಣು ಬೆದರಿಕೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಮಾಣು ಶಕ್ತಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಆಧರಿಸಿದ ಭಯೋತ್ಪಾದನೆಯನ್ನು ಭಾರತ ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ.

- ಆಪರೇಷನ್ ಸಿಂಧೂರ್ ಮೂಲಕ ಭಾರತ ಶಕ್ತಿ ಪ್ರದರ್ಶಿಸಿದೆ
- ಪಾಕ್ ಡ್ರೋನ್, ಮಿಸ್ಸೈಲ್‌ಗಳನ್ನು ಗಡಿಯಲ್ಲಿ ತಡೆದ ಭಾರತೀಯ ಸೇನೆ
- ಉಗ್ರವಾದದ ವಿರುದ್ಧ ಭಾರತ ಸ್ಪಷ್ಟ ನಿಲುವು
ನವದೆಹಲಿ: ಪಾಕಿಸ್ತಾನದ ಪರಮಾಣು (nuclear threat) ಬ್ಲಾಕ್‌ಮೇಲ್ ಅನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರಮಾಣು ಶಕ್ತಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಆಧರಿಸಿದ ಭಯೋತ್ಪಾದನೆಯನ್ನು ಭಾರತ ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ. ಎಂದು ಆಪರೇಷನ್ ಸಿಂಧೂರ್ ಬಗ್ಗೆ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದಿಂದ ಹಾರಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಗಡಿ ದಾಟುವ ಮೊದಲೇ ಹೊಡೆದುರುಳಿಸಿತು. ಭಾರತದ ಕ್ಷಿಪಣಿಗಳು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೊಳಿಸಿವೆ. ಪಾಕಿಸ್ತಾನ ಹೆಮ್ಮೆಪಡುವ ಕ್ಷಿಪಣಿಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಭಾರತ ತಟಸ್ಥಗೊಳಿಸಿದೆ.
ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಗಳು ಮತ್ತು ರಾಡಾರ್ ಕೇಂದ್ರಗಳ ಮೇಲೆ ಹಾನಿಯನ್ನುಂಟುಮಾಡಿವೆ. ಪಾಕಿಸ್ತಾನದ ಯುದ್ಧ ವಿಮಾನಗಳು ಗಾಳಿಯಲ್ಲಿ ಹಾರಲು ಸಾಧ್ಯವಾಗದ ಪರಿಸ್ಥಿತಿಯನ್ನು ಭಾರತ ಸೃಷ್ಟಿಸಿದೆ ಎಂದು ಮೋದಿ ಹೇಳಿದರು.
ಇನ್ನು ಮುಂದೆ ಯಾವುದೇ ದುಸ್ಸಾಹಸ ಮಾಡಬೇಡಿ ಎಂದು ಭಾರತ ಪಾಕಿಸ್ತಾನಕ್ಕೆ ಸಲಹೆ ನೀಡಿದೆ. ಭಾರತದ ಪ್ರತಿಕ್ರಿಯೆಯಿಂದ ಗಾಬರಿಗೊಂಡಿರುವ ಪಾಕಿಸ್ತಾನ, ಕದನ ವಿರಾಮಕ್ಕಾಗಿ ಇಡೀ ಜಗತ್ತಿಗೆ ಮನವಿ ಮಾಡಿದೆ.
ಭಾರತದ ಮೂರು ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಜ್ಜಾಗಿವೆ. ಸರ್ಜಿಕಲ್ ಸ್ಟ್ರೈಕ್, ಬಾಲಕೋಟ್ ದಾಳಿ, ಆಪರೇಷನ್ ಸಿಂಧೂರ್… (surgical strike, Balakot airstrike, Operation sindoor) ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟವಾಗಿ ಹೇಳಿವೆ. ಭಯೋತ್ಪಾದನೆಯ ಕುರಿತಾದ ಚರ್ಚೆಗಳು ಭಾರತದ ಷರತ್ತುಗಳ ಮೇಲೆ ಮಾತ್ರ ನಡೆಯುತ್ತವೆ. ಚರ್ಚೆಗಳು ಭಾರತದ ನಿರ್ಧಾರಗಳಿಗೆ ಅನುಗುಣವಾಗಿರುತ್ತವೆ ಎಂದು ಮೋದಿ ಹೇಳಿದರು.
India warns Pakistan, No more nuclear blackmail







