ಬೈಕ್‌ನಲ್ಲಿ ಹೋಗುತ್ತಿದ್ದ ಪತ್ರಕರ್ತನ ಗುಂಡಿಕ್ಕಿ ಹತ್ಯೆ! ಭೀಕರ ಘಟನೆ
ಉತ್ತರಪ್ರದೇಶದ ಸೀತಾಪುರದಲ್ಲಿ ಭೀಕರ ಘಟನೆ ನಡೆದಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಪತ್ರಕರ್ತನನ್ನು ದುಷ್ಕರ್ಮಿಗಳು ಡಿಕ್ಕಿ ಹೊಡೆದು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಭೀತಿಯನ್ನು ಮೂಡಿಸಿದೆ.

- ದುಷ್ಕರ್ಮಿಗಳ ದಾಳಿಗೆ ಸೀತಾಪುರದಲ್ಲಿ ಸ್ಥಳೀಯ ಪತ್ರಕರ್ತ ಬಲಿ
- ಮೊದಲು ವಾಹನ ಡಿಕ್ಕಿ, ನಂತರ ಗುಂಡಿನ ದಾಳಿ
- ನಾಲ್ಕು ತಂಡಗಳ ರಚನೆ, ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು
ಉತ್ತರಪ್ರದೇಶದ ಸೀತಾಪುರದಲ್ಲಿ ಶನಿವಾರ ಮಧ್ಯಾಹ್ನ (Afternoon) ಸಂಭವಿಸಿದ ಒಂದು ಭಯಾನಕ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಾಘವೇಂದ್ರ ಬಾಜ್‌ಪಾಯ್ ಎಂಬ ಪತ್ರಕರ್ತ (Journalist) ಮತ್ತು ಆರ್‌ಟಿಐ (RTI) ಕಾರ್ಯಕರ್ತನ ಬೈಕ್ ಗೆ ದುಷ್ಕರ್ಮಿಗಳು ಡಿಕ್ಕಿ ಹೊಡೆದು ನಂತರ ಗುಂಡಿನ ದಾಳಿ ನಡೆಸಿದ್ದಾರೆ.
ಹತ್ಯೆಯ ದಿನ, ಮಧ್ಯಾಹ್ನ 3.15ರ ವೇಳೆಗೆ, ರಾಘವೇಂದ್ರ ತನ್ನ ಮನೆಯಲ್ಲಿದ್ದಾಗಲೇ ಒಂದು ಕಾಲ್ ಬಂದು, ತಕ್ಷಣವೇ ಬೈಕ್ ಮೇಲೆ ತೆರಳಿದ. ಆದರೆ, ಲಕ್ನೋ-ಡೆಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲುಪುತ್ತಿದ್ದಂತೆ, ಒಂದು ದುಷ್ಕರ್ಮಿಗಳ ತಂಡ (Gang) ಕಾರನಿಂದ ಜೋರಾಗಿ ಡಿಕ್ಕಿ ಹೊಡೆಸಿ, ಗುಂಡು ಹಾರಿಸಿ ನಂತರ ಪಲಾಯನ ಮಾಡಿದ್ದಾರೆ
ಮೊದಲು ಇದು ಸಾಮಾನ್ಯ ಅಪಘಾತವೆಂದು ಭಾಸವಾಗಿತ್ತು. ಆದರೆ, ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರು, ಅವರ ದೇಹದಲ್ಲಿ ಮೂರು ಗುಂಡಿನ ಗಾಯಗಳು ಕಂಡುಬಂದಿವೆ ಎಂದಾಗ ಪೂರ್ಣ ಚಿತ್ರಣವೇ ಬದಲಾಗಿದೆ.
ಈ ಪ್ರಕರಣ ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ತಂತ್ರ ರೂಪಿಸಿದ್ದಾರೆ, ಈ ಸಂಬಂಧ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸ್ಥಳೀಯರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ
Journalist Shot Dead in Uttar Pradesh







