ಅರಿವಳಿಕೆ ಮದ್ದು ನೀಡಿ ಮಹಿಳೆಯ ಮೇಲೆ ವೈದ್ಯನಿಂದಲೇ ಅತ್ಯಾಚಾರ
ಮಹಿಳಾ ರೋಗಿಗೆ ಅರಿವಳಿಕೆ ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಆರೋಪಿ ವೈದ್ಯನನ್ನು ಬಂಧಿಸಲಾಗಿದೆ
ಕೋಲ್ಕತ್ತಾ: ಮಹಿಳೆಗೆ ವೈದ್ಯನೊಬ್ಬ ಅರಿವಳಿಕೆ ಮದ್ದು ನೀಡಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೆ ಆ ಕೃತ್ಯದ ವೀಡಿಯೊವನ್ನು ಚಿತ್ರಿಸಿ, ಆಕೆಗೆ ಬೆದರಿಸಿ ಹಣ ವಸೂಲಿ ಮಾಡುವ ಮೂಲಕ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಕೊನೆಗೆ ಸಂತ್ರಸ್ತೆ ತನ್ನ ಪತಿಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪರಿಣಾಮವಾಗಿ, ಆರೋಪಿ ವೈದ್ಯನನ್ನು ಬಂಧಿಸಲಾಯಿತು. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಹಸ್ನಾಬಾದ್‌ನಲ್ಲಿ ಹೋಮ್ ಕ್ಲಿನಿಕ್ ನಡೆಸುತ್ತಿರುವ ವೈದ್ಯ 26 ವರ್ಷದ ಮಹಿಳಾ ರೋಗಿಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಿದ್ದಾನೆ. ಆ ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ನಾಲ್ಕು ಲಕ್ಷದವರೆಗೆ ವಸೂಲಿ ಮಾಡಿದ್ದಾನೆ. ಮಹಿಳೆ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದೇ ವೇಳೆ ಬೆದರಿಕೆಯಿಂದ ಬೇಸತ್ತ ಮಹಿಳೆ ಕೊನೆಗೆ ಪತಿಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ ವೈದ್ಯನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಮಹಿಳೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.
Kolkata Police Arrested Doctor who Rapes Patient After Giving Sedatives