ಅಮರನಾಥ ಯಾತ್ರೆ ಮಾರ್ಗದಲ್ಲಿ ಭೂಕುಸಿತ, ಘಟನೆಯಲ್ಲಿ ಓರ್ವ ಸಾವು
ಜಮ್ಮು ಕಾಶ್ಮೀರದಲ್ಲಿ ಮಳೆ ಕಾರಣದಿಂದ ಅಮರ್‌ನಾಥ್ ಯಾತ್ರೆಗೆ ಅಡ್ಡಿಯಾಗಿದೆ. ಪಹಲ್ಗಾಂ ಹಾಗೂ ಬಲ್ತಾಲ್ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ಯಾತ್ರಿಕರ ಮೇಲೆ ಭೂಕುಸಿತಗೊಂಡಿದೆ.

- ಅಮರ್‌ನಾಥ್ ಯಾತ್ರೆ ಮಾರ್ಗದಲ್ಲಿ ಭೂಕುಸಿತ
- ಯಾತ್ರಿಕರ ಮೇಲೆ ಭೂಕುಸಿದ, ಓರ್ವ ಸಾವು
- ಜಮ್ಮು ಕಾಶ್ಮೀರದಲ್ಲಿ ಇಡೀ ಯಾತ್ರೆ ತಾತ್ಕಾಲಿಕ ಸ್ಥಗಿತ
ನವದೆಹಲಿ: ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಗೆ ತೀವ್ರ ಅಡಚಣೆ ಉಂಟಾಗಿದೆ.
ಅಮರ್‌ನಾಥ್ ಯಾತ್ರೆ ಈ ಬಾರಿ ಭೀಕರ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದೆ. ಜಮ್ಮು ಕಾಶ್ಮೀರ (Jammu and Kashmir) ನ ಪಹಲ್ಗಾಂ (Pahalgam) ಹಾಗೂ ಬಲ್ತಾಲ್ (Baltal) ಮಾರ್ಗಗಳಲ್ಲಿ ಈ ಯಾತ್ರೆ ನಡೆಯುತ್ತಿದ್ದು, ಇತ್ತೀಚೆಗೆ ಆ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿತ್ತು.
ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಅವರು ಪಹಲ್ಗಾಮ್ ಮತ್ತು ಬಾಲ್ಟಾಲ್ ನಿಂದ ಗುರುವಾರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು. ಬುಧವಾರ, ಸೇನಾ ಅಧಿಕಾರಿಗಳು ಯಾತ್ರಿಕರನ್ನು ಕರೆದೊಯ್ಯುತ್ತಿದ್ದಾಗ ಭೂಕುಸಿತ ಸಂಭವಿಸಿದೆ.
ಇದನ್ನೂ ಓದಿ: ಮನೆ ಮನೆಗೂ ಉಚಿತ ಸೋಲಾರ್ ವಿದ್ಯುತ್! ಅರ್ಜಿ ಹಾಕಲು ವೆಬ್ಸೈಟ್ ಲಿಂಕ್
ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಭೂಕುಸಿತದಿಂದ ನಾಲ್ವರು ಜನರು ಕೊಚ್ಚಿ ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ದುರಂತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಮೂವರಿಗೆ ಗಂಭೀರ ಗಾಯವಾಗಿದೆ. ಮೃತರು ಯಾತ್ರಿಕರಾಗಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ (hospital) ದಾಖಲಿಸಲಾಯಿತು. ಗಾಯಗೊಂಡವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಯಾತ್ರೆ ಆರಂಭವಾದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಿರುವುದು ಇದೇ ಮೊದಲು. ಈ ವರ್ಷ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ತಲುಪಿದೆ. ಭದ್ರತಾ ಪಡೆಗಳು, ಸ್ಥಳೀಯ ಆಡಳಿತ, ಮತ್ತು ರಕ್ಷಣಾ ಸಿಬ್ಬಂದಿ ಸತತ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.
ಅಮರ್‌ನಾಥ್ ಯಾತ್ರೆ ಭಾರತದ ಪ್ರಮುಖ ಧಾರ್ಮಿಕ ಯಾತ್ರೆಗಳಲ್ಲೊಂದು. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ
Landslide Disrupts Amarnath Yatra in Jammu and Kashmir







