Video: ಜನರ ಕಣ್ಣೆದುರೇ ನಾಯಿಯನ್ನು ಹೊತ್ತೊಯ್ದ ಚಿರತೆ! ಇಲ್ಲಿದೆ ಬೆಚ್ಚಿಬೀಳಿಸುವ ದೃಶ್ಯ
Leopard Attack Dog: ಗುಜರಾತ್‌ನ ಜುನಾಗಢ್ ಜಿಲ್ಲೆಯ ಗಿರ್ನಾರ್ ಅರಣ್ಯದ ಸಮೀಪದ ಆಶ್ರಮದ ಹೊರಗೆ ಕುಳಿತಿದ್ದ ಜನರ ಪಕ್ಕದಲ್ಲಿದ್ದ ನಾಯಿಮರಿಯನ್ನು ಚಿರತೆ ಕ್ಷಣಾರ್ಧದಲ್ಲಿ ಬಾಯಿಯಲ್ಲಿ ಕಚ್ಚಿಕೊಂಡು ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leopard Attack Dog: ಗುಜರಾತ್‌ನ (Gujarat) ಆಶ್ರಮವೊಂದರ ಹೊರಗೆ ಜನರು ಕುಳಿತಿದ್ದಾಗಲೇ ಚಿರತೆಯೊಂದು ನಾಯಿಮರಿಯನ್ನು ಹೊತ್ತೊಯ್ದ ಘಟನೆ ಆತಂಕ ಮೂಡಿಸಿದೆ. ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ತಲ್ಲೀನರಾಗಿದ್ದ ಸಮಯದಲ್ಲಿ ಅಲ್ಲಿಗೆ ಬಂದ ಚಿರತೆ, ಯಾರಿಗೂ ಎಚ್ಚರವಾಗುವ ಮೊದಲೇ ನಾಯಿಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿಹೋಗಿದೆ.
ಈ ಘಟನೆ ಅಕ್ಟೋಬರ್ 16ರಂದು ಸಂಜೆ ಸುಮಾರು 7.30ಕ್ಕೆ ಜುನಾಗಢ್ ಜಿಲ್ಲೆಯ ಗಿರ್ನಾರ್ ಅರಣ್ಯದ ಸಮೀಪದಲ್ಲಿರುವ ಪ್ರೇರಣಾಧಾಮ್ ಆಶ್ರಮದ ಬಳಿ ನಡೆದಿದೆ. ಆಶ್ರಮದ ಪ್ರವೇಶದ್ವಾರದ ಸಮೀಪದ ಕಚೇರಿ ಬಳಿ ನಾಯಿಮರಿಯೊಂದು ಓಡಾಡುತ್ತಿತ್ತು. ಅದೇ ಸ್ಥಳದಲ್ಲಿದ್ದ ಬೆಂಚ್ ಮೇಲೆ ಕೆಲವರು ಕುಳಿತು ಮೊಬೈಲ್ ನೋಡುತ್ತಿದ್ದರು. ಇನ್ನೂ ಕೆಲವರು ನಿಂತುಕೊಂಡು ಮಾತನಾಡುತ್ತಿದ್ದರು.
ಇದನ್ನೂ ಓದಿ: ತನ್ನ ಅವಳಿ ಮಕ್ಕಳನ್ನು ಕೊಂದು ಹೊಲದಲ್ಲಿ ಬಿಸಾಡಿದ ತಾಯಿ! ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳುವ ಸಂಗತಿ
ಇದೇ ವೇಳೆ ಏಕಾಏಕಿ ಅಲ್ಲಿಗೆ ಬಂದ ಚಿರತೆ ನಾಯಿಮರಿಯ ಮೇಲೆ ದಾಳಿ ನಡೆಸಿದೆ. ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕ್ಷಣಾರ್ಧದಲ್ಲಿ ಅಲ್ಲಿಂದ ಓಡಿಹೋಗಿ ಅರಣ್ಯದ ಕಡೆಗೆ ತೆರಳಿದೆ. ಘಟನೆ ಅಷ್ಟು ವೇಗವಾಗಿ ನಡೆದಿದ್ದರಿಂದ ಸಮೀಪದಲ್ಲಿದ್ದವರಿಗೂ ತಕ್ಷಣ ಏನಾಯಿತು ಎಂಬುದು ತಿಳಿಯಲಿಲ್ಲ.
ನಂತರ ಸಿಸಿಟಿವಿ (CCTV) ದೃಶ್ಯಗಳನ್ನು ಪರಿಶೀಲಿಸಿದಾಗ ಚಿರತೆ ನಾಯಿಮರಿಯನ್ನು ಹೊತ್ತೊಯ್ದಿರುವುದು ಗೊತ್ತಾಗಿದೆ. ತಮ್ಮ ಸಮೀಪದಲ್ಲೇ ಇಂತಹ ಘಟನೆ ನಡೆದಿರುವುದನ್ನು ಕಂಡು ಆಶ್ರಮದವರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿವೆ. ಜನರು ಹತ್ತಿರದಲ್ಲೇ ಇದ್ದರೂ ಚಿರತೆ ಕ್ಷಿಪ್ರವಾಗಿ ದಾಳಿ ನಡೆಸಿ ನಾಯಿಮರಿಯನ್ನು ಹೊತ್ತೊಯ್ದಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ: ರಸ್ತೆಬದಿ ಪಾನಿಪೂರಿ ತಿಂದು ಒಂದೇ ಕುಟುಂಬದ 7 ಮಂದಿ ಆಸ್ಪತ್ರೆಗೆ; ಮೂವರು ಮಕ್ಕಳ ಸ್ಥಿತಿ ಗಂಭೀರ!
🚨 LEOPARD SNATCHES DOG NEAR THREE MEN SITTING ON A BENCH IN GUJARAT
A leopard suddenly grabbed a dog near the entrance of Prernadham Ashram in Junagadh, Gujarat and carried it away towards the forest.
Three men were sitting on a nearby bench when the incident occurred on Friday evening. The moment was captured on CCTV.
🎥 CCTV Footage
#Gujarat #Leopard
— contentkikamii (@contentkikamii) October 17, 2026
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



