ಆಧಾರ್ ಕಾರ್ಡ್ ಕಳೆದುಹೋಯಿತಾ? ಡೋಂಟ್ ವರಿ, ಕ್ಷಣಗಳಲ್ಲಿ ಮತ್ತೆ ಪಡೆಯಬಹುದು
ಆಧಾರ್ ಕಾರ್ಡ್ ಕಳೆದುಹೋಗಿದ್ದರೂ ಅಥವಾ ನಂಬರ್ ನೆನಪಿಲ್ಲದಿದ್ದರೂ ಚಿಂತಿಸಬೇಕಾಗಿಲ್ಲ. UIDAI ವೆಬ್‌ಸೈಟ್ ಮೂಲಕ ಮೊಬೈಲ್ OTP ಬಳಸಿ ಕೆಲವೇ ನಿಮಿಷಗಳಲ್ಲಿ ನಿಮ್ಮ Aadhaar Number ಮರಳಿ ಪಡೆಯಬಹುದು.

ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರತಿಯೊಂದು ಪ್ರಮುಖ ಸೇವೆಗೆ ಅಗತ್ಯವಾದ ಗುರುತಿನ ದಾಖಲೆ. ಸರ್ಕಾರದ ಯೋಜನೆಗಳಿಂದ ಲಾಭ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಅಥವಾ ವಿವಿಧ ಪರಿಶೀಲನೆಗಳಿಗೆ ಇದನ್ನು ಬಳಸಲಾಗುತ್ತದೆ. ಆದ್ದರಿಂದ ಇದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ.
ಆದರೆ ಕೆಲವೊಮ್ಮೆ ಅನಾಯಾಸವಾಗಿ ಆಧಾರ್ ಕಾರ್ಡ್ ಕಳೆದುಹೋಗಬಹುದು. ಕೆಲವರಿಗೆ ತಮ್ಮ ಆಧಾರ್ ನಂಬರ್ (Aadhaar Number) ಕೂಡ ನೆನಪಿರದ ಪರಿಸ್ಥಿತಿ ಎದುರಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ಆತಂಕಪಡುವ ಅಗತ್ಯವಿಲ್ಲ. UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಇರುವ ವಿಶೇಷ ಆಯ್ಕೆಯ ಮೂಲಕ ನಿಮ್ಮ ಆಧಾರ್ ವಿವರಗಳನ್ನು ಕೆಲವು ನಿಮಿಷಗಳಲ್ಲೇ ಮರಳಿ ಪಡೆಯಬಹುದು.
ಆಧಾರ್ ನಂಬರ್ ಮರುಪಡೆಯುವ ಸರಳ ವಿಧಾನ
ಮೊದಲು UIDAI ಅಧಿಕೃತ ವೆಬ್‌ಸೈಟ್ ತೆರೆಯಬೇಕು. ಮುಖ್ಯ ಪುಟದಲ್ಲಿ ಕಾಣುವ Retrieve Lost or Forgotten (EID/UID) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಬೇರೆ ಅಗತ್ಯ ಮಾಹಿತಿಯನ್ನು ನಮೂದಿಸಬೇಕು.
ಆ ನಂತರ Get OTP ಆಯ್ಕೆಯನ್ನು ಒತ್ತಿದರೆ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಆ OTP ಅನ್ನು ನಮೂದಿಸಿದ ಬಳಿಕ ನಿಮ್ಮ ಆಧಾರ್ ನಂಬರ್ SMS ರೂಪದಲ್ಲಿ ನಿಮ್ಮ ಮೊಬೈಲ್‌ಗೆ ಬರುತ್ತದೆ. ಇದರಿಂದ ನೀವು ಮತ್ತೆ ನಿಮ್ಮ ಆಧಾರ್ ವಿವರಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.
e-Aadhaar ಡೌನ್‌ಲೋಡ್ ಮಾಡುವ ವಿಧಾನ
ನಂಬರ್ ಪಡೆದ ನಂತರ ಮತ್ತೆ UIDAI ವೆಬ್‌ಸೈಟ್‌ಗೆ ಹೋಗಿ Download Aadhaar ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಆಧಾರ್ ನಂಬರ್, ಜನ್ಮ ದಿನಾಂಕ ಮತ್ತು ಅಗತ್ಯ ಮಾಹಿತಿಯನ್ನು ನಮೂದಿಸಿದರೆ e-Aadhaar PDF ಫೈಲ್ ಡೌನ್‌ಲೋಡ್ ಆಗುತ್ತದೆ.
ಈ PDF ಫೈಲ್ ತೆರೆಯಲು ನಿಮ್ಮ ಹೆಸರಿನ ಮೊದಲ ನಾಲ್ಕು ದೊಡ್ಡ ಅಕ್ಷರಗಳು ಹಾಗೂ ಜನ್ಮ ವರ್ಷ ಪಾಸ್‌ವರ್ಡ್ ಆಗಿ ಬಳಸಬೇಕು. ನಂತರ ಅದನ್ನು ಪ್ರಿಂಟ್ ತೆಗೆದುಕೊಂಡು ಅಧಿಕೃತ ದಾಖಲೆಗಳಾಗಿ ಬಳಸಬಹುದು.
ಸುರಕ್ಷತೆಗೆ Masked Aadhaar ಬಳಕೆ ಉತ್ತಮ
ಆಧಾರ್ ದುರುಪಯೋಗವನ್ನು ತಪ್ಪಿಸಲು Masked Aadhaar ಡೌನ್‌ಲೋಡ್ ಮಾಡುವುದು ಉತ್ತಮ ಮಾರ್ಗ. ಇದರಲ್ಲಿ ನಿಮ್ಮ ಆಧಾರ್ ನಂಬರ್‌ನ ಕೊನೆಯ ನಾಲ್ಕು ಅಂಕೆಗಳು ಮಾತ್ರ ಕಾಣಿಸುತ್ತವೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
ಅದೇ ವೇಳೆ ನಿಮ್ಮ ಮೊಬೈಲ್ ನಂಬರ್ Aadhaar ಜೊತೆ ಲಿಂಕ್ ಆಗಿರಬೇಕು. ಲಿಂಕ್ ಆಗಿರದಿದ್ದರೆ UIDAI ಪೋರ್ಟಲ್ ಅಥವಾ ಆಧಾರ್ ಸೆಂಟರ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳಬೇಕು.
ಮತ್ತೊಂದು ಪ್ರಮುಖ ಸಲಹೆ
ನಿಮ್ಮ ಆಧಾರ್ ಸಾಫ್ಟ್ ಕಾಪಿಯನ್ನು ಯಾವಾಗಲೂ ಫೋನ್ ಅಥವಾ ಇಮೇಲ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುವುದು ಉತ್ತಮ. ಅಗತ್ಯವಿರುವ ಸಮಯದಲ್ಲಿ ತಕ್ಷಣ ಬಳಸಲು ಇದು ಸಹಾಯ ಮಾಡುತ್ತದೆ. ಜೊತೆಗೆ ಬಯೋಮೆಟ್ರಿಕ್ ಲಾಕ್ ಸೌಲಭ್ಯ ಬಳಸಿದರೆ ನಿಮ್ಮ ಬೆರಳಚ್ಚು ಅಥವಾ ಕಣ್ಣು ಗುರುತುಗಳನ್ನು ಇತರರು ದುರುಪಯೋಗ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ.



