ತಿಂಗಳ ಮೊದಲ ದಿನವೇ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ, ಗ್ರಾಹಕರಿಗೆ ರಾತ್ರೋ-ರಾತ್ರಿ ಶುಭ ಸುದ್ದಿ!

ನವೆಂಬರ್ 1ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ರೂ.5 ಇಳಿಕೆ ಕಂಡಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಕಂಪನಿಗಳು ತಿಳಿಸಿವೆ.

ಪ್ರತಿ ತಿಂಗಳ ಮೊದಲ ದಿನವೇ ಎಲ್‌ಪಿಜಿ (LPG) ಸಿಲಿಂಡರ್ ದರಗಳಲ್ಲಿ ಬದಲಾವಣೆಗಳನ್ನು ಮಾಡುವುದು ಸಾಮಾನ್ಯ. ಇದೇ ಕ್ರಮವನ್ನು ಮುಂದುವರಿಸಿ, ನವೆಂಬರ್ 1ರಿಂದ ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಕಂಪನಿಗಳು ಇಳಿಸಿವೆ.

ಇಂಡಿಯನ್ ಆಯಿಲ್ (Indian Oil) ಕಂಪನಿ ವೆಬ್‌ಸೈಟ್ ಪ್ರಕಾರ, 19 ಕಿಲೋಗಳ ವಾಣಿಜ್ಯ ಸಿಲಿಂಡರ್ ಬೆಲೆ ಈಗ ಡೆಹಲಿಯಲ್ಲಿ ₹1,590.50 ಆಗಿದ್ದು, ಹಿಂದಿನ ₹1,595.50 ದಿಂದ ₹5 ಇಳಿಕೆ ಕಂಡಿದೆ. ಕೊಲ್ಕತ್ತಾದಲ್ಲಿ ₹1,694, ಮುಂಬೈಯಲ್ಲಿ ₹1,542, ಚೆನ್ನೈಯಲ್ಲಿ ₹1,750 ಹಾಗೂ ಹೈದರಾಬಾದ್‌ನಲ್ಲಿ ₹1,812.50 ಆಗಿದೆ.

ಆದರೆ, ಗೃಹ ಬಳಕೆಯ 14 ಕಿಲೋ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೇಶದಾದ್ಯಂತ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹850ರಿಂದ ₹960ರ ಒಳಗೆ ಮುಂದುವರಿದಿದೆ. ದೆಹಲಿಯಲ್ಲಿ ₹853, ಮುಂಬೈಯಲ್ಲಿ ₹852.50 ಹಾಗೂ ಹೈದರಾಬಾದ್‌ನಲ್ಲಿ ₹905 ಆಗಿದೆ.

ಆದ್ರೆ ಕಳೆದ ತಿಂಗಳ ಅಕ್ಟೋಬರ್ 1ರಂದು 19 ಕಿಲೋ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹16 ಹೆಚ್ಚಿಸಲಾಗಿತ್ತು. ಈಗ ಮತ್ತೆ ಬೆಲೆ ಇಳಿಕೆ ಆಗಿರುವುದರಿಂದ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಸ್ವಲ್ಪ ನೆಮ್ಮದಿ ನೀಡಿದೆ.

ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ದರ ಏರಿಕೆಯಾದರೂ ಡಾಲರ್ ಮೌಲ್ಯ ಕುಸಿತದಿಂದ ಭಾರತದಲ್ಲಿ ಸಣ್ಣ ಮಟ್ಟಿನ ಇಳಿಕೆ ಕಂಡುಬಂದಿದೆ.

LPG Cylinder Price Reduced from November 1

TRENDING ARTICLES1 / 4
Show More

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories