LPG Gas Subsidy: ಇಂತವರಿಗೆ ಸಬ್ಸಿಡಿ ಹಣ ಸಿಗಲ್ಲ! ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ಅಲರ್ಟ್
LPG Gas Subsidy: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರು ಕಡ್ಡಾಯವಾಗಿ KYC ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಮುಗಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ನಿಲ್ಲುವ ಸಾಧ್ಯತೆ ಇದೆ ಎಂದು ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ.

- ಗ್ಯಾಸ್ ಸಿಲಿಂಡರ್ ಕೆವೈಸಿ ಮಾಡದಿದ್ದರೆ ಸಬ್ಸಿಡಿ ಸಿಗಲ್ಲ
- ಎಲ್ಪಿಜಿ ಸಬ್ಸಿಡಿ ಮುಂದುವರಿಯಲು ದಾಖಲೆ ಕಡ್ಡಾಯ
- ಗ್ಯಾಸ್ ಏಜೆನ್ಸಿ ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ಲಾಭ
LPG Gas Subsidy: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆ ನೀಡಿದೆ. ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ KYC ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಈ ಕ್ರಮವನ್ನು ನಿರ್ಲಕ್ಷ್ಯ ಮಾಡಿದರೆ ಸರ್ಕಾರದಿಂದ ಲಭ್ಯವಾಗುವ ಗ್ಯಾಸ್ ಸಬ್ಸಿಡಿ ಹಣ ತಾತ್ಕಾಲಿಕವಾಗಿ ನಿಲ್ಲುವ ಸಾಧ್ಯತೆ ಇದೆ.
ಏಕೆ KYC ಕಡ್ಡಾಯ?
ಒಂದೇ ಹೆಸರಿನಲ್ಲಿ ಅಥವಾ ಒಂದೇ ಕುಟುಂಬದಲ್ಲಿ ಅನೇಕ ಸಬ್ಸಿಡಿ ಸಂಪರ್ಕಗಳು ಇರುವ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಅಕ್ರಮ ಮತ್ತು ನಕಲಿ ಸಬ್ಸಿಡಿಗಳನ್ನು ತಡೆಗಟ್ಟಲು ಈ ಕ್ರಮ ಜಾರಿಗೊಳಿಸಲಾಗಿದೆ. ಅರ್ಹರಿಗೆ ಮಾತ್ರ ಲಾಭ ತಲುಪಿಸುವ ಉದ್ದೇಶದಿಂದ ದೇಶವ್ಯಾಪಿಯಾಗಿ KYC ನಿಯಮವನ್ನು ಪೆಟ್ರೋಲಿಯಂ ಇಲಾಖೆ ಕಡ್ಡಾಯಗೊಳಿಸಿದೆ.
KYC ಪೂರ್ಣಗೊಳಿಸಿದ ಗ್ರಾಹಕರ ಖಾತೆಗಳಿಗೆ (Bank Account) ಮಾತ್ರ ಸಬ್ಸಿಡಿ ಹಣ ಜಮೆಯಾಗಲಿದೆ. ಪ್ರಕ್ರಿಯೆ ಮುಗಿಸದವರ ಖಾತೆಗಳಿಗೆ ಸಬ್ಸಿಡಿ ನಿಲ್ಲುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಬ್ಸಿಡಿ ಪಡೆಯುವವರಿಗೆ ಮಾತ್ರವಲ್ಲ, ಸಾಮಾನ್ಯ ಎಲ್ಪಿಜಿ ಗ್ರಾಹಕರಿಗೂ ಅನ್ವಯವಾಗುತ್ತದೆ.
ಉಜ್ವಲ ಯೋಜನೆ ಫಲಾನುಭವಿಗಳಿಗೆ ವಿಶೇಷ ಸೂಚನೆ
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (Ujjwala Scheme) ಉಚಿತ ಗ್ಯಾಸ್ ಸಂಪರ್ಕ ಪಡೆದ ಬಿಪಿಎಲ್ ಕುಟುಂಬಗಳಿಗೂ KYC ಕಡ್ಡಾಯವಾಗಿದೆ. ಸಬ್ಸಿಡಿ ದರದಲ್ಲಿ ಸಿಲಿಂಡರ್ ಪಡೆಯಲು ಈ ಪ್ರಕ್ರಿಯೆ ಅಗತ್ಯ. KYC ಮಾಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ರಿಯಾಯಿತಿ ದರದ ಸಿಲಿಂಡರ್ ಸಿಗದೇ ಹೋಗುವ ಅಪಾಯವಿದೆ.
KYC ಹೇಗೆ ಮಾಡಿಸಬಹುದು?
ಗ್ರಾಹಕರು ಗ್ಯಾಸ್ ಸಿಲಿಂಡರ್ ವಿತರಿಸುವಾಗ ಡೆಲಿವರಿ ಸಿಬ್ಬಂದಿಯ ಮೂಲಕವೇ KYC ಪೂರ್ಣಗೊಳಿಸಬಹುದು. ಅವರ ಬಳಿ ಇರುವ ಬಯೋಮೆಟ್ರಿಕ್ ಸಾಧನದಲ್ಲಿ ಬೆರಳಚ್ಚು ನೀಡಿ ಪ್ರಕ್ರಿಯೆ ಮುಗಿಸಬಹುದು.
ಇನ್ನೊಂದು ಆಯ್ಕೆಯಾಗಿ, ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಆಧಾರ್ ಕಾರ್ಡ್, ಗ್ಯಾಸ್ ಪಾಸ್ಬುಕ್ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ KYC ಮಾಡಿಸಬಹುದು.
ಆನ್ಲೈನ್ ವಿಧಾನವನ್ನೂ ಬಳಸಬಹುದಾಗಿದೆ. ಸಂಬಂಧಿತ ಗ್ಯಾಸ್ ಕಂಪನಿಯ ವೆಬ್ಸೈಟ್ ಅಥವಾ ಆಪ್ ಮೂಲಕ ಆಧಾರ್ ಸಂಖ್ಯೆ ಮತ್ತು OTP ಸಹಾಯದಿಂದ KYC ಪೂರ್ಣಗೊಳಿಸುವ ಅವಕಾಶವೂ ಇದೆ.







