ಹಾಡಹಗಲೇ ನಡುರಸ್ತೆಯಲ್ಲೇ ಕೊಚ್ಚಿ ಭೀಕರ ಕೊಲೆ; ಮೈ ನಡುಗಿಸೋ ವಿಡಿಯೋ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ದಾಳಿ ನಡೆದಿದೆ. ಸಾರ್ವಜನಿಕರ ಎದುರೇ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರದಲ್ಲಿ ಗುರುವಾರ ಬೆಳಿಗ್ಗೆ ನಡೆದ ಭೀಕರ ಹತ್ಯೆ ಜನರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ಜನರು ಓಡಾಡುತ್ತಿದ್ದ ಸಮಯದಲ್ಲೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ನಡೆದ ಈ ಕೃತ್ಯ ಆತಂಕಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ದೇವೇಶ್ ಅಲಿಯಾಸ್ ಬಂಟಿ ದೀಕ್ಷಿತ್ (36) ಮೃತಪಟ್ಟಿದ್ದು, ಪವನ್ ಪರಾಶರ್ (22) ಆರೋಪಿ ಎಂದು ಗುರುತಿಸಲಾಗಿದೆ. ಇಬ್ಬರೂ ಹಿಂದೆ ಬೌನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ಇವರ ನಡುವೆ ಬಳಿಕ ಭಿನ್ನಾಭಿಪ್ರಾಯಗಳು ಬೆಳೆದು ವೈಷಮ್ಯಕ್ಕೆ ತಿರುಗಿದ್ದವು ಎನ್ನಲಾಗಿದೆ.
ದೇವೇಶ್ ಬೆಳಿಗ್ಗೆ ಜಿಮ್‌ನಿಂದ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಪವನ್ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾನೆ. ಸಿಡ್ಕೋ (CIDCO) ವ್ಯಾಪ್ತಿಯ ಎನ್-7 ಪ್ರದೇಶದಲ್ಲಿರುವ ಗ್ಯಾಸ್ ಏಜೆನ್ಸಿ ಸಮೀಪ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದೇವೇಶ್ ರಸ್ತೆಗೆ ಬಿದ್ದಿದ್ದು, ಬೈಕ್ ಕೂಡ ದೂರಕ್ಕೆ ಎಸೆಯಲ್ಪಟ್ಟಿದೆ.
ಅಪಘಾತದ ಬಳಿಕವೂ ಆಕ್ರೋಶ ತಣ್ಣಗಾಗದ ಆರೋಪಿ ಕಾರಿನಿಂದ ಇಳಿದು ಗಾಯಗೊಂಡಿದ್ದ ದೇವೇಶ್ ಮೇಲೆ ದಾಳಿ ನಡೆಸಿದ್ದಾನೆ. ತನ್ನೊಂದಿಗೆ ತಂದಿದ್ದ ಕಟ್ಟಿಗೆ ಮತ್ತು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ದೇವೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಣ್ಣೆದುರೇ ನಡೆದ ಈ ಘಟನೆ ಸ್ಥಳದಲ್ಲಿದ್ದವರನ್ನು ಬೆಚ್ಚಿಬೀಳಿಸಿದೆ.
ಘಟನೆ ಬಳಿಕ ಆರೋಪಿ ಅಲ್ಲಿಂದ ಕಾರಿನಲ್ಲೇ ತೆರಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಇಬ್ಬರ ನಡುವಿನ ಹಳೆಯ ವೈಷಮ್ಯವೇ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಆದರೆ, ದಾಳಿಗೆ ನಿಖರ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೈರಲ್ ಆಗಿರುವ ದೃಶ್ಯಗಳನ್ನೂ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಪರಿಶೀಲಿಸುವ ಸಾಧ್ಯತೆಯಿದೆ.
🚨 महाराष्ट्र में दिनदहाड़े खूनी हमला आखिर कानून का डर कहाँ है?
महाराष्ट्र के छत्रपति संभाजीनगर में एक युवक की बेरहमी से हत्या किए जाने की खबर बेहद चिंताजनक है। बताया जा रहा है कि कार से स्कूटर को टक्कर मारने के बाद युवक पर हॉकी स्टिक और लोहे की रॉड से हमला किया गया, जिससे उसकी मौके पर ही मौत हो गई।
आखिर पुरानी रंजिश में कोई इंसान इतना हैवान कैसे बन सकता है? सरेआम ऐसी वारदातें कानून-व्यवस्था पर गंभीर सवाल खड़े करती हैं!
गुनहगारों को सख्त सजा मिले और पीड़ित परिवार को न्याय मिले। सड़कें दुश्मनी निकालने का मैदान नहीं हैं
#Maharashtra #ChhatrapatiSambhajinagar #CrimeNews #JusticeForVictim
— Sahil chabra (@sahii199) October 23, 2026
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



