ವಾಹನ ಸವಾರರಿಗೆ ಬಂಪರ್ ಸುದ್ದಿ! ಪೆಂಡಿಂಗ್ ದಂಡಗಳಿಗೆ 75% ರಿಯಾಯಿತಿ - Traffic Challan
ಮಹಾರಾಷ್ಟ್ರ ಸರ್ಕಾರ ಪೆಂಡಿಂಗ್ ಟ್ರಾಫಿಕ್ ಚಾಲನ್‌ಗಳಿಗೆ ಒನ್-ಟೈಮ್ ಸೆಟಿಲ್ಮೆಂಟ್ ಯೋಜನೆ ಜಾರಿಗೆ ತರುವ ಸನ್ನಾಹ ಮಾಡಿದೆ. ಸಣ್ಣ ವಾಹನಗಳಿಗೆ 75% ರಿಯಾಯಿತಿ ಸಿಗಲಿದ್ದು, ಜನರಿಗೆ ದೊಡ್ಡ ಮಟ್ಟದ ಉಪಶಮ ನೀಡಲಿದೆ.

- ಟ್ರಾಫಿಕ್ ಚಾಲನ್ ಮನ್ನಾ: ಪೆಂಡಿಂಗ್ ದಂಡಗಳಿಗೆ ಒನ್-ಟೈಮ್ ಸೆಟಲ್ಮೆಂಟ್ ಯೋಜನೆ
- ಸಣ್ಣ ವಾಹನಗಳಿಗೆ 75% ರಿಯಾಯಿತಿ, ಕೇವಲ 25% ಪಾವತಿಸಿದರೆ ಸಾಕು
- ಲಕ್ಸುರಿ ಕಾರುಗಳಿಗೆ ರಿಯಾಯಿತಿ ಇಲ್ಲ
ಮಹಾರಾಷ್ಟ್ರದಲ್ಲಿ (Maharashtra) ಬಾಕಿ ಉಳಿದಿರುವ ಟ್ರಾಫಿಕ್ ಚಾಲನ್‌ಗಳನ್ನು (Traffic Challans) ತೆರವುಗೊಳಿಸಲು ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ಪೆಂಡಿಂಗ್ ಚಾಲನ್‌ಗಳ ಒಟ್ಟು ಮೊತ್ತವು ರಾಜ್ಯದಾದ್ಯಂತ 2,500 ಕೋಟಿ ರೂಪಾಯಿಗೂ ಅಧಿಕವಾಗಿದ್ದು, ಅದರಲ್ಲಿ ಕೇವಲ 817 ಕೋಟಿ ರೂಪಾಯಿಗಳನ್ನು ಮಾತ್ರ ವಸೂಲಿ ಮಾಡಲು ಸಾಧ್ಯವಾಗಿದೆ. ಮಿಕ್ಕಿದ್ದು 1,000 ಕೋಟಿ ರೂಪಾಯಿಗೂ ಹೆಚ್ಚು ಬಾಕಿಯಾಗಿದೆ.
ಇದನ್ನು ಪರಿಹರಿಸಲು ಸರ್ಕಾರ ಹೊಸ ಒನ್-ಟೈಮ್ ಸೆಟಲ್ಮೆಂಟ್ ಯೋಜನೆ ತರಲು ತೀರ್ಮಾನಿಸಿದೆ. ಇದರಡಿ ಸಣ್ಣ ವಾಹನ ಮಾಲೀಕರು, ವಿಶೇಷವಾಗಿ ಬೈಕ್ ಹಾಗೂ ಆಟೋ ರಿಕ್ಷಾ (Bike and Autorickshaw) ಮಾಲೀಕರು, ಕೇವಲ 25% ದಂಡ ಪಾವತಿಸಿದರೆ ಉಳಿದ 75% ಮನ್ನಾ ಪಡೆಯಬಹುದು. ಇದರಿಂದ ಸಾಮಾನ್ಯ ಜನತೆಗೆ ದೊಡ್ಡ ಮಟ್ಟದ ಉಳಿತಾಯ ಸಾಧ್ಯ.
ಆದರೆ ಈ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ. ದುಬಾರಿ ಹಾಗೂ ಲಕ್ಸುರಿ ಕಾರು (Luxury Cars) ಮಾಲೀಕರಿಗೆ ಇಂತಹ ರಿಯಾಯಿತಿ ಲಭ್ಯವಿಲ್ಲ. ಸರ್ಕಾರ ವಾಹನದ ಮೌಲ್ಯ ಹಾಗೂ ಮಾದರಿಯನ್ನು ಆಧರಿಸಿ ಡಿಸ್ಕೌಂಟ್ ಪ್ರಮಾಣವನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಇದರಿಂದ ನ್ಯಾಯಸಮ್ಮತವಾದ ವಸೂಲಿ ಸಾಧ್ಯವಾಗುತ್ತದೆ ಹಾಗೂ ಸರ್ಕಾರಕ್ಕೂ ಹೆಚ್ಚುವರಿ ಆದಾಯ ಒದಗುತ್ತದೆ.
ಸರ್ಕಾರದ ಲೆಕ್ಕಾಚಾರ ಪ್ರಕಾರ, ಈ ಯೋಜನೆ ಜಾರಿಯಾದರೆ ಜನರು ಸಮಯಕ್ಕೆ ಸರಿಯಾಗಿ ಚಾಲನ್ ಪಾವತಿಸುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.
ಈಗಾಗಲೇ ಲೋಕ್ ಅದಾಲತ್ ಮೂಲಕ 50% ರಿಯಾಯಿತಿ ನೀಡುವ ಪ್ರಯತ್ನ ನಡೆದಿದ್ದರೂ ಅದರಲ್ಲಿ ಜನರ ಪಾಲ್ಗೊಳ್ಳುವಿಕೆ ಅತಿ ಕಡಿಮೆ ಇತ್ತು. ಈ ಬಾರಿ ಹೆಚ್ಚಿನ ಜನರನ್ನು ಸೆಳೆಯುವ ನಿರೀಕ್ಷೆಯಿದೆ.
ಆದರೆ ಯೋಜನೆ ಜಾರಿಯಾಗುವ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಸರ್ಕಾರ ತೀರ್ಮಾನ ಕೈಗೊಂಡ ತಕ್ಷಣ ಜನರಿಗೆ ಮಾಹಿತಿ ನೀಡಲಾಗುವುದು. ಹೀಗಾಗಿ ಚಾಲನ್ ಬಾಕಿಯಿರುವವರು ಈಗಲೇ ತಯಾರಿ ಪ್ರಾರಂಭಿಸಬಹುದು.
Maharashtra to Waive 75 Percent of Pending Traffic Challans







