ರೈತರಿಗೆ ಶುಭ ಸುದ್ದಿ, ಇನ್ಮುಂದೆ 6 ಸಾವಿರ ಅಲ್ಲ, ಬರೋಬ್ಬರಿ 9000 ಸಾವಿರ ನಿಮ್ಮ ಖಾತೆ ಸೇರುತ್ತೆ
ಮುಂದಿನ ಕೇಂದ್ರ ಬಜೆಟ್ಗಾಗಿ ನಡೆಯುತ್ತಿರುವ ಚರ್ಚೆಯಲ್ಲಿ PM ಕಿಸಾನ್ ಯೋಜನೆಗೆ ಹೆಚ್ಚುವರಿ ನೆರವು ನೀಡುವ ಸಾಧ್ಯತೆ ಹೆಚ್ಚಾಗಿದೆ. ರೈತರಿಗೆ ಈಗಿನ ₹6,000 ಬದಲು ₹9,000 ವರೆಗೆ ಸಹಾಯ ಸಿಗುವ ಸೂಚನೆಗಳು ವ್ಯಕ್ತವಾಗಿವೆ.
PM Kisan Update: ಮುಂದಿನ ಹಣಕಾಸು ವರ್ಷದ ಬಜೆಟ್ ತಯಾರಿ ಕೇಂದ್ರ ಮಟ್ಟದಲ್ಲಿ ಈಗಾಗಲೇ ಆರಂಭವಾಗಿದೆ. ಈ ಬಾರಿ ಬಜೆಟ್ ಸಿದ್ಧತೆ ನೀತಿ ಆಯೋಗ, ರಾಜ್ಯ ಪ್ರತಿನಿಧಿಗಳು ಮತ್ತು ಕೃಷಿ ವಿಭಾಗದ Stakeholders ಗಳೊಂದಿಗೆ ನಡೆಯುತ್ತಿರುವ ಹಲವು ಹಂತದ ಸಭೆಗಳ ಮೂಲಕ ಸಾಗುತ್ತಿದೆ.
Article 112 ಅಡಿ ಸಿದ್ಧವಾಗುವ ಈ ವಾರ್ಷಿಕ ವರದಿ ಸರ್ಕಾರ ಮುಂದಿನ ವರ್ಷ ಜನರ ಹಣವನ್ನು ಯಾವ ಕ್ಷೇತ್ರಗಳಿಗೆ ಹೆಚ್ಚು ವಿನಿಯೋಗಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.
ಈ ಚರ್ಚೆಗಳ ಮಧ್ಯೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಮಹತ್ತರ ಅಂಶ ಹೊರಬರುತ್ತಿದೆ, PM ಕಿಸಾನ್ ಸಮ್ಮಾನ್ ನಿಧಿಯಲ್ಲಿ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಈಗಿನ ₹6,000 ಸಹಾಯಧನವನ್ನು ₹9,000 ಅಥವಾ ಇನ್ನಷ್ಟು ಮಟ್ಟಕ್ಕೆ ಹೆಚ್ಚಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ತಿಳಿದು ಬಂದಿದೆ. ಬಜೆಟ್ ಮಂಡನೆ ಸಮಯದಲ್ಲಿ ಇದಕ್ಕೆ ಅಂತಿಮ ಮುದ್ರೆ ಬೀಳುವ ನಿರೀಕ್ಷೆ ಇದೆ.
ಆದರೆ ರೈತರಿಗೆ ನೀಡುವ ಈ ನೆರವು ಯಾಕೆ ಹೆಚ್ಚಿಸಬೇಕಾಗಿದೆ? ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರಗಳು, ಬೀಜ, ಡೀಸೆಲ್ ಮತ್ತು ಕೃಷಿ ಸಂಬಂಧಿತ ವೆಚ್ಚಗಳು ಏರಿಕೆಯಾಗಿವೆ. ಆದರೆ PM ಕಿಸಾನ್ ಯೋಜನೆಯ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ, ರೈತರ ನಿಜವಾದ ಅಗತ್ಯವನ್ನು ಗುರುತಿಸಿ ಸರ್ಕಾರ ಹೆಚ್ಚುವರಿ ನೆರವಿನ ಬಗ್ಗೆ ಚಿಂತನೆ ಆರಂಭಿಸಿದೆ.
2019ರಲ್ಲಿ ಆರಂಭವಾದ PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟಿ ಸಂಖ್ಯೆಯ ರೈತರು ವರ್ಷಕ್ಕೆ ₹6,000 ವನ್ನು ಮೂರು ಹಂತಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯುತ್ತಿರುವುದು ತಿಳಿದ ವಿಷಯ. ಹೊಸ ಬಜೆಟ್ನಲ್ಲಿ ಮೊತ್ತ ಹೆಚ್ಚಳ ಘೋಷಣೆಯಾದ್ರೆ, ಇದು ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವಾಗಲಿದೆ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story




