ಪತ್ನಿಯ ಕಳ್ಳಾಟ, ಪರ ಪುರುಷನ ಸಹವಾಸ! ಆ ವ್ಯಕ್ತಿಯನ್ನು ಇರಿದು ಕೊಂದ ಪತಿ

ಉದಯಪುರದಲ್ಲಿ ಗಂಭೀರ ಘಟನೆ! ವಿವಾಹಿತ ಮಹಿಳೆಯೊಂದಿಗಿನ ಸಂಬಂಧ ವ್ಯಕ್ತಿಯ ಪ್ರಾಣವನ್ನೇ ತೆಗೆದುಬಿಟ್ಟಿದೆ. ಆಕೆಯ ಪತಿ ಕತ್ತಿಯಿಂದ ಇರಿದು ಕೊಲೆ ಮಾಡಿದ ಬಳಿಕ ಪತ್ನಿಯೊಂದಿಗೆ ಪರಾರಿಯಾದ ಘಟನೆ

  • ಪತ್ನಿಯ ಪ್ರೇಮ ಸಂಬಂಧದ ಬಗ್ಗೆ ತಿಳಿದು ಕೋಪಗೊಂಡು ಕ್ರೂರ ಕೃತ್ಯ
  • ಘಟನೆ ನಂತರ ಪತ್ನಿಯೂ ಪತಿಯೊಂದಿಗೆ ಪರಾರಿಯಾದ ಘಟನೆ
  • ಪೊಲೀಸರು ಈಗ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ

ಜೈಪುರ: “ಇದು ಏನೋ ಸಿನಿಮಾ ಕಥೆಯಂತೆ ಅನಿಸಬಹುದು, ಆದರೆ ನಿಜ!” ಪತ್ನಿಯ ಕಳ್ಳಾಟದ ಪ್ರೇಮ ಸಂಬಂಧಕ್ಕೆ ಪತಿ, ತನ್ನ ಪತ್ನಿಯ ಜೊತೆ ಸಲುಗೆಯಿಂದ ಇದ್ದ ವ್ಯಕ್ತಿಯನ್ನು ಕೊಂದ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

30 ವರ್ಷದ ಜಿತೇಂದ್ರ ಮೀನಾ ಎಂಬ ವ್ಯಕ್ತಿ, ಪ್ರೈವೇಟ್ ಹಾಸ್ಪಿಟಲ್ ಒಂದರಲ್ಲಿ ಕೌಂಪೌಂಡರ್ (Compounder) ಆಗಿ ಕೆಲಸ ಮಾಡುತ್ತಿದ್ದ. ಇದೇ ಆಸ್ಪತ್ರೆಯಲ್ಲಿ 25 ವರ್ಷದ ಡಿಂಪಲ್ ಎಂಬ ಯುವತಿ ನರ್ಸ್ (Nurse) ಆಗಿ ಕೆಲಸ ಮಾಡುತ್ತಿದ್ದಳು. ಕೆಲಸದಲ್ಲಿ ಪರಿಚಯವಾಗಿ, ಅವರಿಬ್ಬರೂ ಒಟ್ಟಿಗೆ ಬಹಳಾನೇ ಸಲುಗೆಯಿಂದ (Live-in Relationship) ಇದ್ದರು.

ಇದನ್ನು ಸಹಿಸಿಕೊಳ್ಳದ ಡಿಂಪಲ್ ಪತಿ ನರ್ಸಿ, ಭಾನುವಾರ ಮಧ್ಯಾಹ್ನ ಬಂದು ನೇರವಾಗಿ ಜಿತೇಂದ್ರ ಮೇಲೆ ಹಲ್ಲೆ ನಡೆಸಿದ್ದಾನೆ. ಆಕ್ರೋಶದಲ್ಲಿ, ಅವನನ್ನು ಕತ್ತಿಯಿಂದ ಇರಿದು ಕೊಂದಿದ್ದಾನೆ. ಅದಾದ ಬಳಿಕ, ಪತ್ನಿಯನ್ನೂ ಕರೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಆಕೆ ಕೂಡ ಹೆಣ ಬಿದ್ದಿದ್ದೆ ತಡ ಗಂಡ ನಿನ್ನ ಪಾದವೇ ಗಟ್ಟಿ ಅಂತ ಅವನ ಹಿಂದೆ ಕಾಲ್ಕಿತ್ತಿದ್ದಾಳೆ.

ಈ ಘಟನೆ ಪೊಲೀಸರ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು, ಜಿತೇಂದ್ರ ಮೃತದೇಹವನ್ನು ಸರ್ಕಾರಿ ಹಾಸ್ಪಿಟಲ್‌ಗೆ ರವಾನೆ ಮಾಡಿದರು. ಸುತ್ತಮುತ್ತಲಿನ (CCTV Footage) ಪರಿಶೀಲಿಸಿದಾಗ, ಹತ್ಯೆಯ ಬಳಿಕ ಡಿಂಪಲ್ ಹಾಗೂ ಆಕೆಯ ಪತಿ ನರ್ಸಿ ಪರಾರಿಯಾಗುತ್ತಿರುವ ದೃಶ್ಯ ಸಿಕ್ಕಿದೆ.

ಪೊಲೀಸರು ಈಗ ಇಬ್ಬರಿಗೂ ಹುಡುಕಾಟ ನಡೆಸುತ್ತಿದ್ದಾರೆ. “ತನಿಖೆಯಿಂದ, ಈ ಕೊಲೆ ಹಿಂದೆ ನಿಖರ ಕಾರಣ ಏನು ಎಂಬುದು ಅವರ ಬಂಧನದ ಬಳಿಕವೇ ತಿಳಿಯಲಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Man Stabbed to Death Over Affair

English Summary▼

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories