ಟೆಸ್ಟ್ ರೈಡ್ ಗೆಂದು ಬೈಕ್ ಕೀ ತಗೊಂಡ ಯುವಕ, ರೇಸಿಂಗ್ ಬೈಕ್ ಸಮೇತ ಪರಾರಿ

Story Highlights

ಒಂದು ಲಕ್ಷಕ್ಕೆ ಸೆಕೆಂಡ್ ಹ್ಯಾಂಡ್ ರೇಸಿಂಗ್ ಬೈಕ್ (Secondhand Racing Bike) ಖರೀದಿಸಲು ಮಾತುಕತೆ ಮಾಡಿಕೊಂಡಿದ್ದ. ತಂದೆಯೊಂದಿಗೆ ಬಂದು ಹಣ ನೀಡಿ ಬೈಕ್ ಖರೀದಿಸುವುದಾಗಿ ತಿಳಿಸಿದ್ದ.

ರೇಸಿಂಗ್ ಬೈಕ್ (Racing Bike) ಖರೀದಿಸಲು ಶೋರೂಮ್‌ಗೆ ಹೋದ ವ್ಯಕ್ತಿ, ಟೆಸ್ಟ್ ರೈಡ್ ಗೆಂದು ಕೀ ತೆಗೆದುಕೊಂಡು ಬೈಕ್ ಸಮೇತ ಓಡಿ ಹೋಗಿದ್ದಾನೆ. ಶೋರೂಂ ಮಾಲೀಕರಿಗೆ ಆ ನಂತರ ಇದರ ಅರಿವಾಗಿದೆ.

ಪೊಲೀಸರಿಗೆ ದೂರು ನೀಡಿದ ನಂತರ, ಸದ್ಯ ವ್ಯಕ್ತಿಯನ್ನು ಬಂಧಿಸಲಾಯಿತು. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ. ಸಾಹಿಲ್‌ಗೆ ರೇಸಿಂಗ್ ಬೈಕ್‌ ಎಂದರೆ ತುಂಬಾ ಇಷ್ಟ, ಆದರೆ ಅದನ್ನು ಖರೀದಿಸಲು ಸಾಧ್ಯವಾಗದ ಕಾರಣ, ಹೇಗಾದರೂ ಮಾಡಿ ಆ ಬೈಕ್ ಪಡೆಯಬೇಕೆಂದು ನಿರ್ಧರಿಸಿದ್ದನು.

ನವೆಂಬರ್ 3 ರಂದು ಶೋರೂಮ್‌ಗೆ ಹೋಗಿ, ಒಂದು ಲಕ್ಷಕ್ಕೆ ಸೆಕೆಂಡ್ ಹ್ಯಾಂಡ್ ರೇಸಿಂಗ್ ಬೈಕ್ (Secondhand Racing Bike) ಖರೀದಿಸಲು ಮಾತುಕತೆ ಮಾಡಿಕೊಂಡಿದ್ದ. ತಂದೆಯೊಂದಿಗೆ ಬಂದು ಹಣ ನೀಡಿ ಬೈಕ್ ಖರೀದಿಸುವುದಾಗಿ ತಿಳಿಸಿದ್ದ.

ಏತನ್ಮಧ್ಯೆ, ಸ್ವಲ್ಪ ಸಮಯದ ನಂತರ ಸಾಹಿಲ್ ಒಬ್ಬ ಮುದುಕನೊಂದಿಗೆ ಆ ಶೋರೂಮ್‌ಗೆ ಹೋಗಿದ್ದಾನೆ , ಆತ ಆ ವ್ಯಕ್ತಿಯನ್ನು ತನ್ನ ತಂದೆ ಎಂದು ಪರಿಚಯಿಸಿ, ಟೆಸ್ಟ್ ರೈಡ್ ಹೆಸರಲ್ಲಿ ಬೈಕ್ ಕೀ ತೆಗೆದುಕೊಂಡಿದ್ದಾನೆ. ಅದನ್ನು ಓಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಮತ್ತೊಂದೆಡೆ ಸಾಹಿಲ್ ಹಿಂತಿರುಗದ ಕಾರಣ ಶೋರೂಂ ಮಾಲೀಕರು ಆನಂತರ ಎಚ್ಚೆತ್ತುಕೊಂಡಿದ್ದಾರೆ. ವೃದ್ಧನನ್ನು ವಿಚಾರಿಸಿದಾಗ ಸಾಹಿಲ್ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಪ್ರತಿದಿನ ತಮ್ಮ ಟೀ ಸ್ಟಾಲ್‌ಗೆ ಟೀ ಕುಡಿಯಲು ಬರುತ್ತಾನೆ ಅಂತ ಆ ವೃದ್ಧ ಹೇಳಿದ್ದಾನೆ.

ಬೈಕ್ ಸಮೇತ ಓಡಿಹೋದ ಸಾಹಿಲ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ.5ರಂದು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ. ಆದರೆ ತನಗೆ ರೇಸಿಂಗ್ ಬೈಕ್ ಎಂದರೆ ಇಷ್ಟವಾಗಿದ್ದು ಖರೀದಿಸಲು ಹಣವಿಲ್ಲಅದಕ್ಕೆ ಈ ರೀತಿ ಕಳ್ಳತನ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

Man took the keys for a test ride and ran away with the Racing bike

Related Stories