ಶಾಲಾ ಆವರಣದಲ್ಲಿ 12 ವರ್ಷದ ಬಾಲಕಿ ಮೇಲೆ 5 ಅಪ್ರಾಪ್ತ ಬಾಲಕರಿಂದ ಅತ್ಯಾಚಾರ
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 12 ವರ್ಷದ ಬಾಲಕಿ ಶಾಲಾ ಆವರಣದಲ್ಲಿ ಐವರು ಅಪ್ರಾಪ್ತ ಬಾಲಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.

- ಉತ್ತರ ಪ್ರದೇಶದ ಮೋರಾದಾಬಾದ್‌ನಲ್ಲಿ ದುಷ್ಕೃತ್ಯ
- 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
- 5 ಅಪ್ರಾಪ್ತ ಬಾಲಕರು ಬಾಲಕಿಗೆ ಮಾದಕ ಪಾನೀಯ ನೀಡಿ ಕೃತ್ಯ
ಮೇ 8ರಂದು ಸಂಜೆ, ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ತನ್ನ ಮನೆಯ ಎದುರು ಆಟವಾಡುತ್ತಿದ್ದಾಗ ಅದೇ ಬೀದಿಯ ಐದು ಬಾಲಕರು ಆಕೆಯನ್ನು (minor girl) ಆಮಿಷ ಹೊಡ್ದಿ ಸಮೀಪದ ಖಾಲಿ ಶಾಲಾ ಆವರಣಕ್ಕೆ ಕರೆದೊಯ್ದು ದುಷ್ಕೃತ್ಯ ಎಸಗಿದ್ದಾರೆ
ಈ ಕ್ರೂರತೆಯ ಹಿನ್ನೆಲೆಗೆ ಇಳಿದಾಗ, ಬಾಲಕರಲ್ಲಿ ಒಬ್ಬನ ತಂದೆ ಆ ಶಾಲೆಯ (school building) ವಾಚ್‌ಮನ್ ಆಗಿದ್ದು, ತಾವು ಬಾಗಿಲು ತೆರೆದು ನೇರವಾಗಿ ಒಳಗೆ ಹೋಗಿ ಬಾಲಕಿಗೆ ಮಾದಕ ದ್ರವ್ಯ ಮಿಶ್ರಿತ ಪಾನೀಯ (cool drink) ನೀಡಿದ್ದಾರೆ. ಬಳಿಕ ಅವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ, “ಇದನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
ವಿಡಿಯೋ ತುಣುಕು ಬಹಿರಂಗವಾದ ನಂತರ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಐದು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ನೆರೆಹೊರೆಯವರು ವಿಡಿಯೋ ನೋಡಿ ಹುಡುಗಿಯ ತಾಯಿಗೆ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ ಮೇ 20 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರು 7 ರಿಂದ 9 ನೇ ತರಗತಿಯಲ್ಲಿ ಓದುತ್ತಿರುವ ಐದು ಅಪ್ರಾಪ್ತ ಬಾಲಕರನ್ನು ಬಂಧಿಸಿ, ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Minor Girl Gang-Raped by Five Boys in Uttar Pradesh School



