ಪಾಕಿಸ್ತಾನ ಬೆಂಬಲಿಸಿದ ಶಾಸಕನ ಬಂಧಿಸಿ ಜೈಲಿಗೆ ದೂಡಿದ ಪೊಲೀಸರು!

Pahalgam Terror Attack: ಪಹಲ್ಗಾಂ ಉಗ್ರದಾಳಿಗೆ ಪಾಕ್ ಬೆಂಬಲಿಸಿರುವಂತೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಅಮಿನುಲ್ ಇಸ್ಲಾಂಗೆ ಪೊಲೀಸರು ದೇಶದ್ರೋಹದ ಕಾಯ್ದೆ ತಂದು ಬಂಧಿಸಿದ್ದಾರೆ. ಸರ್ಕಾರ ಗಂಭೀರ ಕ್ರಮಕ್ಕೆ ಕೈಹಾಕಿದೆ.

  • ಪಾಕ್ ಉಗ್ರದಾಳಿಗೆ ಬೆಂಬಲಿಸಿದ ಶಾಸಕ ಬಂಧನ
  • ದೇಶದ್ರೋಹದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು
  • ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ

Pahalgam Terror Attack: ಅಸ್ಸಾಂನ ವಿವಾದಾತ್ಮಕ ಶಾಸಕ ಅಮಿನುಲ್ ಇಸ್ಲಾಂ ನೀಡಿದ ಹೇಳಿಕೆ ಇಡೀ ದೇಶವನ್ನು ಚರ್ಚೆಯಲ್ಲಿ ತಳ್ಳಿದೆ. ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಭಯಾನಕ ದಾಳಿಗೆ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದರಿಂದ ಅವರ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಅವರ ವಿವಾದಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪೊಲೀಸರು ಕೂಡಲೇ ಕ್ರಮ ಕೈಗೊಂಡು, ನಗಾವ್ ಜಿಲ್ಲೆಯಲ್ಲಿರುವ ನಿವಾಸದಿಂದ ಅವರನ್ನು ಬಂಧಿಸಿದ್ದಾರೆ.

ಅಧಿಕೃತವಾಗಿ ಪ್ರತಿಕ್ರಿಯಿಸಿದ ಎಐಯುಡಿಎಫ್ ಪಕ್ಷದ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಈ ಹೇಳಿಕೆಯನ್ನು ಖಂಡಿಸಿದ್ದು, ಇದು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಸರ್ಕಾರಕ್ಕೆ ಬೆಂಬಲ ನೀಡಬೇಕಾದ ಸಮಯ. ಇಂತಹ ಉಗ್ರರು ಇಸ್ಲಾಂ ಧರ್ಮವನ್ನೂ ಕಳಂಕಿತಗೊಳಿಸುತ್ತಿದ್ದಾರೆ,” ಎಂದು ಅವರು ಹೇಳಿದ್ದಾರೆ.

ಈ ಶಾಸಕರು ಡಿಂಗ್ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದು, ಈಗ ಸಮಾಜದಲ್ಲಿ ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ. ಅವರ ವಿವಾದಾತ್ಮಕ ಹೇಳಿಕೆ, ದೇಶದ ಭದ್ರತೆ ಮತ್ತು ಏಕತೆಗೆ ಧಕ್ಕೆ ನೀಡಿದ ಹಿನ್ನಲೆಯಲ್ಲಿ, ಆ ರಾಜ್ಯದ ಸಿಎಂ ಹಿಮಂತ ಬಿಸ್ವ ಶರ್ಮಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಪಾಕ್ ಬೆಂಬಲಿಸುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಎಚ್ಚರಿಸಿದ್ದಾರೆ.

ಪಹಲ್ಗಾಂನಲ್ಲಿ ಸಂಭವಿಸಿದ ಉಗ್ರದಾಳಿ ದೇಶವನ್ನೇ ನಡುಗಿಸಿದೆ. ಸೇನೆ ವೇಷ ಧರಿಸಿದ್ದ ಉಗ್ರರು ಪ್ರವಾಸಿಗರತ್ತ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ 28 ಮಂದಿ ಜೀವಕಳೆದುಕೊಂಡಿದ್ದಾರೆ. ಇಂತಹ ಭೀಕರ ಸನ್ನಿವೇಶದ ನಂತರವೂ ಕೆಲವು ರಾಜಕಾರಣಿಗಳು ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುವುದು ಜನರಲ್ಲಿ ಆಕ್ರೋಶ ಉಂಟುಮಾಡಿದೆ.

ಪೊಲೀಸರ ಪ್ರಕಾರ, ಆರೋಪಿತ ಶಾಸಕರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಘಟನೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಎಲ್ಲ ರಾಜಕೀಯ ಪಕ್ಷಗಳು ಉಗ್ರದಾಳಿಗೆ ಬೆಂಬಲಿಸುವ ಯಾವುದೆ ವ್ಯಕ್ತಿಯನ್ನೂ ಒಪ್ಪಿಕೊಳ್ಳಲ್ಲ ಎಂಬ ನಿಲುವು ತಾಳಿವೆ.

MLA Arrested for Supporting Terror Attack

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories