ಮೈಸೂರ್ ಪಾಕ್ ಹೆಸರಿನ ‘ಪಾಕ್’ ಪದ ‘ಶ್ರೀ’ ಗೆ ಬದಲಾವಣೆ! ಇಲ್ಲಿದೆ ಕಾರಣ

Mysore Pak : ಭಾರತದ ಜನರು ಈಗ ಪಾಕಿಸ್ತಾನದ ಹೆಸರನ್ನೇ ಸಹಿಸುತ್ತಿಲ್ಲ.  ಜೈಪುರದ ಪ್ರಸಿದ್ಧ ಸಿಹಿ ಅಂಗಡಿಯೊಂದು ‘ಮೈಸೂರ್ ಪಾಕ್’ ಪದದಲ್ಲಿರುವ ‘ಪಾಕ್’ ಎಂಬ ಪದವನ್ನು ತೆಗೆದುಹಾಕಿದೆ

Mysore Pak : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ, 26 ಪ್ರವಾಸಿಗರು, ಅದರಲ್ಲೂ ಹೆಚ್ಚಾಗಿ ಹಿಂದೂಗಳನ್ನು, ಧರ್ಮದ ಆಧಾರದ ಮೇಲೆ ಭಯೋತ್ಪಾದಕರು ಕೊಂದರು.

ಈ ದಾಳಿಯ ನಂತರ ದೇಶದಲ್ಲಿ ಆಕ್ರೋಶ ಹೆಚ್ಚಾಯಿತು. ದೇಶದ ಜನರು ಪಾಕಿಸ್ತಾನದ (Pakistan) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಅನುಗುಣವಾಗಿ, “ಆಪರೇಷನ್ ಸಿಂಧೂರ್” ಮೂಲಕ, ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹಾಗೂ ಪಿಒಕೆಯಲ್ಲಿನ ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಕಚೇರಿಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ಭಾರತ ದಾಳಿ ನಡೆಸಿತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು.

ಇದನ್ನೂ ಓದಿ: ಈ ಕಾರ್ಡ್ ಇದ್ರೆ ಪ್ರತಿ ತಿಂಗಳು ಸಿಗುತ್ತೆ ₹1,000 ರೂಪಾಯಿ! ನಿಮ್ಮತ್ರ ಇದಿಯಾ

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಪಾಕಿಸ್ತಾನದ ಹೆಸರಿನ ತಿರಸ್ಕಾರವು ಖಾದ್ಯವಸ್ತುಗಳ ಹೆಸರಿನಲ್ಲೂ ಪ್ರತಿಬಿಂಬಿಸುತ್ತಿದೆ. ಭಾರತದ ಜನರು ಈಗ ಪಾಕಿಸ್ತಾನದ ಹೆಸರನ್ನೇ ಸಹಿಸುತ್ತಿಲ್ಲ.  ಜೈಪುರದ ಪ್ರಸಿದ್ಧ ಸಿಹಿ ಅಂಗಡಿಯೊಂದು (Sweet Shop) ‘ಮೈಸೂರ್ ಪಾಕ್’ ಪದದಲ್ಲಿರುವ ‘ಪಾಕ್’ ಎಂಬ ಪದವನ್ನು ತೆಗೆದುಹಾಕಿ ‘ಮೈಸೂರ್ ಶ್ರೀ’ ಎಂದು ಹೆಸರನ್ನು ಬದಲಾಯಿಸಿದೆ.

Mysore Pak Renamed

ಇದಲ್ಲದೇ, ‘ಮೋತಿ ಪಾಕ್’ ಅನ್ನು ‘ಮೋತಿ ಶ್ರೀ’ ಮತ್ತು ‘ಗೋಂಡ್ ಪಾಕ್’ ಅನ್ನು ‘ಗೋಂಡ್ ಶ್ರೀ’ ಎಂದು ಮರುನಾಮಕರಣ ಮಾಡಲಾಗಿದೆ.

ಅಂಗಡಿಯ ಮಾಲೀಕರು “ಪಾಕ್ ಎಂಬ ಪದದಿಂದ ಜನರಿಗೆ ತೊಂದರೆ ಆಗುತ್ತಿರುವ ಕಾರಣ, ನಾವು ಅದನ್ನು ಬದಲಾಯಿಸಿದ್ದೇವೆ” ಎಂದು ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ‘ಪಾಕ್’ ಎನ್ನುವುದು ಪಾಕಿಸ್ತಾನವನ್ನು ಸೂಚಿಸುವುದಲ್ಲ, ಅದು ಕನ್ನಡದಲ್ಲಿ  ‘ಸಿಹಿ’ ಎಂಬ ಅರ್ಥ ನೀಡುತ್ತದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ, ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗೆ ₹2000 ಜಮಾ

ಈ ಹೆಸರಿನ ಬದಲಾವಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ಭಾವನಾತ್ಮಕ ಪ್ರತಿಕ್ರಿಯೆ ಎಂದು ಬೆಂಬಲಿಸುತ್ತಿದ್ದರೆ, ಇನ್ನು ಕೆಲವರು ಪರಂಪರೆ ಮತ್ತು ಭಾಷಾ ಅರಿವಿಲ್ಲದೆ ತೆಗೆದುಕೊಳ್ಳಲಾಗುತ್ತಿರುವ ತೀರ್ಮಾನ ಎಂದು ಟೀಕಿಸಿದ್ದಾರೆ.

Mysore Pak Renamed Amid Anti-Pakistan Sentiment

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories