ರೈಲು ಪ್ರಯಾಣಿಕರಿಗೆ ಅಪ್ಡೇಟ್! ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಇನ್ಮುಂದೆ ಹೊಸ ನಿಯಮ
ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಜುಲೈ 1ರಿಂದ ಆಧಾರ್ ದೃಢೀಕರಣ ಕಡ್ಡಾಯ. ಏಜೆಂಟ್‌ಗಳಿಗೆ ನಿರ್ಬಂಧ, ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚು ಲಾಭವಾಗಲಿದೆ ಎಂಬುದೇ ನೂತನ ಉದ್ದೇಶ.

- ಜುಲೈ 1 ರಿಂದ ಆಧಾರ್ ಒಟಿಪಿ ದೃಢೀಕರಣ ಕಡ್ಡಾಯ
- ಏಜೆಂಟ್‌ಗಳಿಗೆ ಮೊದಲ 30 ನಿಮಿಷ ಟಿಕೆಟ್ ಬುಕಿಂಗ್ ನಿಷೇಧ
- ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚು ಟಿಕೆಟ್ ಲಭ್ಯ
ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ನಿಯಮ ಜಾರಿಗೆ ಬರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ತತ್ಕಾಲ್ ಟಿಕೆಟ್‌ಗಾಗಿ (Tatkal Tickets) ಆಧಾರ್ ದೃಢೀಕರಣ (Aadhaar verification) ಕಡ್ಡಾಯವಾಗಿದೆ.
ಈ ನಿಯಮ ಜುಲೈ 1, 2025ರಿಂದ ಜಾರಿಗೊಳ್ಳಲಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚು ಟಿಕೆಟ್ ಲಭ್ಯವಾಗುವುದು ಗುರಿಯಾಗಿದೆ.
ಪ್ರಕಟಣೆಯ ಪ್ರಕಾರ, ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಕೌಂಟರ್‌ಗಳ ಮೂಲಕ ಟಿಕೆಟ್ ಪಡೆಯುವ ವೇಳೆ ಆಧಾರ್ ಆಧಾರಿತ ಒಟಿಪಿ (OTP verification) ಕಡ್ಡಾಯವಾಗಲಿದೆ. ಇದು ಜುಲೈ 15ರಿಂದ ಪ್ರಾಯೋಗಿಕವಾಗಲಿದೆ. ಈ ವ್ಯವಸ್ಥೆಯು ಟಿಕೆಟ್ ಬುಕಿಂಗ್‌ನಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆ ನೀಡಲಿದೆ.
ಇನ್ನು ಮುಂದೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅಧಿಕೃತ ಏಜೆಂಟ್‌ಗಳಿಗೆ ಮೊದಲ 30 ನಿಮಿಷ ಅವಕಾಶವಿಲ್ಲ. ಎಸಿ (AC) ಬೋಗಿಗಳಿಗೆ ಬೆಳಗ್ಗೆ 10:00ರಿಂದ 10:30ರವರೆಗೆ ಹಾಗೂ ನಾನ್ ಎಸಿ (Non-AC) ಬೋಗಿಗಳಿಗೆ ಬೆಳಗ್ಗೆ 11:00ರಿಂದ 11:30ರವರೆಗೆ ಮಾತ್ರ ಆಧಾರ್ ದೃಢೀಕೃತ ಸಾಮಾನ್ಯ ಬಳಕೆದಾರರಿಗೆ ಅವಕಾಶವಿರಲಿದೆ.
ಈ ಕ್ರಮದಿಂದ ದುರ್ಬಳಕೆ ತಡೆಗಟ್ಟಲು ಸಾಧ್ಯವಾಗಲಿದೆ. ಕೆಲ ಏಜೆಂಟ್‌ಗಳು ಸಾಮಾನ್ಯ ಪ್ರಯಾಣಿಕರ ಹೆಸರಿನಲ್ಲಿ ಬೃಹತ್ ಪ್ರಮಾಣದಲ್ಲಿ ಟಿಕೆಟ್ ಬುಕ್ ಮಾಡಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಈಗ ಆ ಪ್ರಕ್ರಿಯೆ ನಿಯಂತ್ರಣಕ್ಕೆ ಬರಲಿದೆ.
ಆನ್‌ಲೈನ್ ಮೂಲಕ ತ್ವರಿತ ಬುಕಿಂಗ್ ಮಾಡುವ ಪ್ರಯತ್ನವನ್ನು ಸರ್ಕಾರ (government) ಬೆಂಬಲಿಸುತ್ತಿದ್ದು, ಈ ಮೂಲಕ ತುರ್ತು ಸಂದರ್ಭಗಳಲ್ಲಿ ಜನರು ಸುಲಭವಾಗಿ ಟಿಕೆಟ್ (ticket) ಪಡೆದುಕೊಳ್ಳಬಹುದು.
ಈ ಹೊಸ ನಿಯಮದಿಂದ ನ್ಯಾಯಯುತ ಟಿಕೆಟ್ ಹಂಚಿಕೆ ಸಾಧ್ಯವಾಗಲಿದ್ದು, ಸಾಮಾನ್ಯ ಜನರಿಗೆ (general public) ಪ್ರಯಾಣದ ಅನುಕೂಲತೆ ಹೆಚ್ಚಾಗಲಿದೆ. ಇದಕ್ಕೆ ಸಬಂದಿಸಿದ ಹೆಚ್ಚಿನ ಮಾಹಿತಿಗಾಗಿ IRCTC (Indian Railway Catering and Tourism Corporation) ಅಥವಾ ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
New Aadhaar Rule for Tatkal Tickets from July 1




