2024ರ ಹೊಸ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಿ

ಇದು ವೋಟರ್ ಸರ್ವಿಸ್ ವೆಬ್ (voter service web portal) ಪೋರ್ಟಲ್ ಆಗಿದ್ದು ಇದರಲ್ಲಿ ನೀವು ನಿಮ್ಮ ಹೊಸ ಮತದಾರ ಚೀಟಿ ಡೌನ್ಲೋಡ್ ಮಾಡಿಕೊಳ್ಳ ಬಹುದು

ನಮ್ಮ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಬೇರೆ ಬೇರೆ ರೀತಿಯ ಗುರುತಿನ ಚೀಟಿ (identity card) ನೀಡಲಾಗಿದೆ, ಉದಾಹರಣೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಮೊದಲಾದವುಗಳನ್ನು ಗುರುತಿನ ಚೀಟಿ ಆಗಿ ಬಳಸಿಕೊಳ್ಳಬಹುದು.

ಇದರ ಜೊತೆಗೆ ಭಾರತೀಯ ಪ್ರತಿಯೊಬ್ಬ (Indian citizen) ನಾಗರಿಕನಿಗೆ ಮತದಾರರ ಚೀಟಿ ಅಥವಾ ವೋಟರ್ ಐಡಿ (voter ID) ನೀಡಲಾಗುತ್ತದೆ. ಇದು ಪ್ರತಿಯೊಬ್ಬ ನಾಗರೀಕನ ಹಕ್ಕನ್ನು ಸೂಚಿಸುವ ಐಡಿ ಆಗಿದೆ.

ಹೌದು, ನಮ್ಮ ದೇಶದಲ್ಲಿ 18 ವರ್ಷ ಮೀರಿದ ಯಾವುದೇ ವ್ಯಕ್ತಿ ಮತದಾರರ ಚೀಟಿ ಹೊಂದಿರಬೇಕು. ಇದರಿಂದ ಪ್ರತಿ ಚುನಾವಣೆ (election) ಯಲ್ಲಿಯೂ ಕೂಡ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬಹುದು.

2024ರ ಹೊಸ ಮತದಾರರ ಪಟ್ಟಿ ಬಿಡುಗಡೆ, ನಿಮ್ಮ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಿ - Kannada News

ಮೊಬೈಲ್‌ನಲ್ಲೆ ಪಡೆಯಿರಿ ಆಯುಷ್ಮಾನ್ ಭಾರತ್ ಕಾರ್ಡ್! ಏನೆಲ್ಲಾ ಬೆನಿಫಿಟ್ ಗೊತ್ತಾ?

ಸದ್ಯದಲ್ಲಿಯೇ 2024ರ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ಚೀಟಿ ವಿತರಣೆ ಹೆಸರು ಸೇರ್ಪಡೆ ಮೊದಲಾದ ಚಟುವಟಿಕೆಗಳನ್ನು ಬಹಳ ಬಿರುಸಿನಿಂದ ನಡೆಸಲಾಗುತ್ತಿದೆ.

2024ರ ಹೊಸ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ನಿಮ್ಮ ಹೆಸರು ಸೇರ್ಪಡೆಗೊಂಡಿದ್ದರೆ , ತಕ್ಷಣಕ್ಕೆ ನೀವು ವೋಟರ್ ಐಡಿಯನ್ನು ಆನ್ಲೈನ್ (online) ಮೂಲಕವೇ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

ಆನ್ಲೈನ್ ನಲ್ಲಿ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

Voter list for 2024ಇದಕ್ಕಾಗಿ ಮೊದಲು, ಚುನಾವಣಾ ಆಯೋಗ ನೀಡಿರುವ https://voters.esi.gov.in/ ವೆಬ್ಸೈಟ್ಗೆ ಭೇಟಿ ನೀಡಿ.

ಇದು ವೋಟರ್ ಸರ್ವಿಸ್ ವೆಬ್ (voter service web portal) ಪೋರ್ಟಲ್ ಆಗಿದ್ದು ಇದರಲ್ಲಿ ನೀವು ನಿಮ್ಮ ಹೊಸ ಮತದಾರ ಚೀಟಿ ಡೌನ್ಲೋಡ್ ಮಾಡಿಕೊಳ್ಳ ಬಹುದು. ನಿಮ್ಮ ಹೆಸರು ಪರಿಶೀಲನೆ ಮಾಡಬಹುದು. ವೋಟರ್ ಐಡಿಯಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬಹುದು. ವೋಟರ್ ಐಡಿ ಸ್ಟೇಟಸ್ ಚೆಕ್ ಮಾಡಬಹುದು.

Search in Electoral Roll ಎನ್ನುವ ಆಯ್ಕೆಯನ್ನು ವೆಬ್ಸೈಟ್ ಮುಖಪುಟದಲ್ಲಿ ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ವೋಟರ್ ಐಡಿ ಸರ್ಚ್ ಮಾಡುವುದಕ್ಕೆ ಬೇರೆ ಬೇರೆ ವಿಧಾನಗಳನ್ನು ನೀಡಲಾಗಿದೆ. ನೀವು ನಿಮ್ಮ ವೋಟರ್ ಐಡಿ ಮಾಹಿತಿ ನೀಡಿ, ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಅಥವಾ ನಿಮ್ಮ ಬಳಿ ಇರುವ ವೋಟರ್ ಐಡಿ ಜೆರಾಕ್ಸ್ ಕಾಪಿ ಕೂಡ ಕಳೆದು ಹೋಗಿದ್ದರೆ ರಿಜಿಸ್ಟರ್ಡ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಹಾಕಿ ನಿಮ್ಮ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಬಳಿ ವೋಟರ್ ಐಡಿ ಇದ್ದರೆ ಅದರ ನಂಬರ್ ನಮೂದಿಸುವುದರ ಮೂಲಕ ಹೊಸ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಹೊಸ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಚೆಕ್ ಮಾಡಿ?

https://voters.eci.gov.in/ ಈ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ. ವೋಟರ್ ಸರ್ವಿಸ್ ಪೋರ್ಟಲ್ ತೆರೆದುಕೊಳ್ಳುತ್ತದೆ.

ಇಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ವಿಧಾನಸಭಾ ಕ್ಷೇತ್ರ ಮೊದಲಾದ ಮಾಹಿತಿ ನೀಡಬೇಕು.

ಬಳಿಕ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ಕೆಳಗೆ ತೋರಿಸಲಾಗಿರುವ ಕ್ಯಾಪ್ಚ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.

ಈಗ ನಿಮಗೆ ವೋಟರ್ ಐಡಿ ಸರ್ಚ್ ಟೂಲ್ ಕಾಣಿಸುತ್ತದೆ. ಅದರಲ್ಲಿ ನೀವು ನಿಮ್ಮ ಗ್ರಾಮ ಹಾಗೂ ವಾರ್ಡ್ ಆಯ್ಕೆ ಮಾಡಬೇಕು. ಈಗ ನೀವು ಕಾಣಿಸುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಬಹುದು.

ನೀವು ಯಾವ ಶಾಲೆಯಲ್ಲಿ ಮತದಾನ ಮಾಡುತ್ತೀರಿ ಎನ್ನುವ ಬಗ್ಗೆಯೂ ಮಾಹಿತಿ ಇರುತ್ತದೆ. ಹಾಗೂ ಆ ಸ್ಥಳದ ಫೋಟೋಗಳನ್ನು ಕೂಡ ಕಾಣಬಹುದು.

New Voter List of 2024 Released, Download Your Voter ID

Follow us On

FaceBook Google News

New Voter List of 2024 Released, Download Your Voter ID