Video: ಹೋಟೆಲ್‌ನಲ್ಲಿ ಏಕಾಏಕಿ ಕುಸಿದು ಬಿದ್ದು ನವವಧು ಸಾವು; ಸಿಸಿಟಿವಿ ದೃಶ್ಯ ವೈರಲ್

Virla Video: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪತಿಯೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದ 28 ವರ್ಷದ ನವವಧು ಮುಸ್ಕಾನ್ ದಿಢೀರ್ ಕುಸಿದು ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಪತಿಯ ವಿರುದ್ಧ ಕುಟುಂಬ ಕೊಲೆ ಆರೋಪ ಮಾಡಿದೆ.

Virla Video: ಉತ್ತರ ಪ್ರದೇಶದ ಝಾನ್ಸಿಯಲ್ಲಿ (Jhansi) ನವವಧು ಹೋಟೆಲ್ ಕೋಣೆಯ ಬಾಗಿಲ ಬಳಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ. 28 ವರ್ಷದ ಮುಸ್ಕಾನ್ ತನ್ನ ಪತಿ ನೀಲೇಶ್ ಜೊತೆ ಹೋಟೆಲ್‌ನಲ್ಲಿ ತಂಗಿದ್ದಾಗ ಈ ಘಟನೆ ನಡೆದಿದೆ. ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.

ಅಕ್ಟೋಬರ್ 25ರ ಬೆಳಗ್ಗೆ ನಡೆದ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ದೃಶ್ಯದಲ್ಲಿ ಮೂವರು ಹೋಟೆಲ್ ಕಾರಿಡಾರ್‌ನಲ್ಲಿ ಕೋಣೆಯತ್ತ ತೆರಳುತ್ತಿರುವುದು ಕಾಣಿಸುತ್ತದೆ. ಇಬ್ಬರು ಒಳಗೆ ಹೋದ ಬಳಿಕ ಹಿಂದಿನಿಂದ ಬಂದ ಮುಸ್ಕಾನ್ ಬಾಗಿಲ ಬಳಿ ದಿಢೀರನೆ ಕುಸಿದು ಬೀಳುತ್ತಾರೆ. ತಕ್ಷಣ ಹೊರಬಂದ ಪತಿ ಅವರನ್ನು ಎತ್ತಿಕೊಂಡು ಕೋಣೆಯೊಳಗೆ ಕರೆದೊಯ್ಯುತ್ತಾನೆ.

ಇದನ್ನೂ ಓದಿ: ಭೀಕರ ಅಪಘಾತ: ಕೆಟ್ಟು ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ; ಮೂವರು ಸಾವು, ಹಲವರಿಗೆ ಗಂಭೀರ ಗಾಯ

ಪತಿಯ ವಿರುದ್ಧ ಕುಟುಂಬದ ಕೊಲೆ ಆರೋಪ

ಮುಸ್ಕಾನ್ ಅವರ ತಂದೆ ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪತಿ ನೀಲೇಶ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನೀಲೇಶ್‌ಗೆ ಈ ಹಿಂದೆಯೇ ಮದುವೆಯಾಗಿತ್ತು ಎಂಬ ವಿಚಾರವನ್ನು ಮಗಳ ಬಳಿ ತಿಳಿದುಕೊಂಡಿದ್ದೆವು ಎಂದು ಕುಟುಂಬ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ. ಈ ಆರೋಪಗಳು ಇನ್ನೂ ತನಿಖೆಯಲ್ಲಿವೆ.

ಮುಸ್ಕಾನ್‌ಗೆ ಈ ವರ್ಷದ ಜೂನ್ 29ರಂದು ನೀಲೇಶ್ ಜೊತೆ ವಿವಾಹವಾಗಿತ್ತು. ಅಕ್ಟೋಬರ್ 23ರಂದು ಝಾನ್ಸಿಗೆ ಬಂದಿದ್ದ ನೀಲೇಶ್, ಮರುದಿನ ಪತ್ನಿಯನ್ನು ಸಂಬಂಧಿಕರ ಮನೆಗೆ ಕರೆದೊಯ್ಯುವುದಾಗಿ ಅತ್ತೆ-ಮಾವನಿಗೆ ತಿಳಿಸಿದ್ದ ಎನ್ನಲಾಗಿದೆ. ಆದರೆ, ದಂಪತಿ ಝಾನ್ಸಿಯ ಹೋಟೆಲ್‌ನಲ್ಲಿ ತಂಗಿದ್ದರು ಎಂಬುದು ಕುಟುಂಬಕ್ಕೆ ನಂತರ ತಿಳಿದುಬಂದಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ, ಅವಶೇಷಗಳಡಿ ಸಿಲುಕಿ ತಂದೆ-ಮಗ ಸಾವು

ಪತಿ ವಶಕ್ಕೆ, ತನಿಖೆ ಮುಂದುವರಿಕೆ

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮುಸ್ಕಾನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಟುಂಬದ ಆರೋಪಗಳ ಹಿನ್ನೆಲೆಯಲ್ಲಿ ನೀಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಕುಟುಂಬದ ದೂರಿನಲ್ಲಿರುವ ಆರೋಪಗಳು ಹಾಗೂ ಹೋಟೆಲ್‌ನ ಸಿಸಿಟಿವಿ ದೃಶ್ಯ ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories