Viral Video: ಜಿಂಕೆ ಮರಿಯನ್ನು ನುಂಗಿದ ಹೆಬ್ಬಾವು, ಆಮೇಲೆ ಆಗಿದ್ದೇನು? ಇಲ್ಲಿದೆ ವೈರಲ್ ವಿಡಿಯೋ

Story Highlights

ಜಿಂಕೆ ಮರಿಯೊಂದನ್ನು ಹೆಬ್ಬಾವು ನುಂಗುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಚಿಂಕೆ ಮರಿಯನ್ನು ಉಳಿಸಲು ಯತ್ನಿಸಿದ್ದಾರೆ.

ಶಿಮ್ಲಾ: ಅರಣ್ಯ ಪ್ರದೇಶದಲ್ಲಿ ಹೆಬ್ಬಾವೊಂದು ಜಿಂಕೆ ಮರಿಯೊಂದನ್ನು ನುಂಗಿದೆ. ಇದನ್ನು ನೋಡಿದ ಕೆಲವರು, ಹೆಬ್ಬಾವು ನುಂಗಿದ್ದ ಜಿಂಕೆ ಮರಿಯನ್ನು ರಕ್ಷಿಸಲು ಯತ್ನಿಸಿದರು. ಆದರೆ ಹೆಬ್ಬಾವಿನ ಹೊಟ್ಟೆಯಿಂದ ಹೊರಬಂದ ಜಿಂಕೆ ಮರಿ ಅದಾಗಲೇ ಸಾವನ್ನಪ್ಪಿತ್ತು.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಂಕೆ ಮರಿಯೊಂದನ್ನು ಹೆಬ್ಬಾವು ನುಂಗುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಚಿಂಕೆ ಮರಿಯನ್ನು ಉಳಿಸಲು ಯತ್ನಿಸಿದ್ದಾರೆ.

ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆಯನ್ನು ಚೆನ್ನಾಗಿ ಒತ್ತಿ, ಅದು ನುಂಗಿದ್ದ ಜಿಂಕೆ ಮರಿ ನಿಧಾನವಾಗಿ ಬಾಯಿಂದ ಹೊರಬಂದಿದೆ. ಆದರೆ ಅದಾಗಲೇ ಜಿಂಕೆ ಮರಿ ಮೃತಪಟ್ಟಿತ್ತು. ಅವರ ಪ್ರಯತ್ನ ವ್ಯರ್ಥವಾಗಿತ್ತು.

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಈ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ವನ್ಯಜೀವಿಗಳಿರುವ ನೈಸರ್ಗಿಕ ಪ್ರದೇಶದಲ್ಲಿ ಕೆಲವರು ಹೀಗೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ, ಇದಕ್ಕೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಕೆಲವರು ಆ ಜನರ ವರ್ತನೆಯನ್ನು ಟೀಕಿಸಿದ್ದಾರೆ.

ಇದು ಪ್ರಕೃತಿ ನಿಯಮ ಅದರ ಆಹಾರ ಅದು ಸೇವಿಸಿದೆ, ಆ ಹಾವಿಗೆ ಹಿಂಸೆ ಕೊಟ್ಟು ಜಿಂಕೆಯನ್ನು ಹೊರತೆಗೆಯುವುದು ಬೇಕಿರಲಿಲ್ಲ ಎಂದು ಕೆಲವರು ಆಕ್ರೋಶಗೊಂಡಿದ್ದಾರೆ. ಪ್ರಾಣಿ ಪಕ್ಷಿಗಳ ಸಹಜ ಜಗತ್ತಿನಲ್ಲಿ ನಾವು ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Nilgai Calf Swallowed By Python Locals Attempt To Rescue Video Goes Viral

Related Stories