ಗಡ್ಡ ಇರೋ ಹುಡುಗರು ಬೇಡ, ಪ್ರತಿಭಟನೆಗಿಳಿದ ಇಂದೋರ್ ಯುವತಿಯರು । ವೈರಲ್ ವಿಡಿಯೋ
ಇಂದೋರ್ (Indore): ಗಡ್ಡ ಬಿಟ್ಟ ಹುಡುಗರು ಬೇಡ, ಕ್ಲೀನ್ ಶೇವ್ ಮಾಡಿರೋ ಹುಡುಗರೇ ಬೇಕೆಂದು ರ್ಯಾಲಿ ನಡೆಸಿರೋ ಯುವತಿಯರ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್ ನ ಹುಡುಗಿಯರು ಗಡ್ಡ ಬಿಟ್ಟ ಹುಡುಗರು ಬೇಡ ಅಂತ ದೊಡ್ಡ ಮಟ್ಟದ ಆಂದೋಲನವನ್ನೇ ಆರಂಭ ಮಾಡಿದ್ದಾರೆ…
ಕೃತಕ ಗಡ್ಡ ಧರಿಸಿದ ಕೆಲ ಯುವತಿಯರು ಫಲಕಗಳನ್ನು ಹಿಡಿದು ರಸ್ತೆಗಿಳಿದಿದ್ದಾರೆ. ಗಡ್ಡ ಬೋಳಿಸಿರೋ ಹುಡುಗರೇ ಬೇಕು ಅಂತ ಪ್ರತಿಭಟನೆ ನಡೆಸಿದ್ದಾರೆ. ನೋ ಕ್ಲೀನ್ ಶೇವ್ ನೋ ಲವ್, ಗಡ್ಡ ಹಟಾವೋ ಪ್ಯಾರ್ ಬಚಾವೋ ಎಂಬ ಘೋಷಣೆಗಳೊಂದಿಗೆ ಹುಡುಗಿಯರು ಇಂದೋರ್‌ನ ಬೀದಿಗಳಲ್ಲಿ ರ್ಯಾಲಿ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
No Beard No Love Indore Girls Rally Video Goes Viral