HMVP: ಚೀನಾ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಜನರಿಗೆ ಕೇಂದ್ರದ ಭರವಸೆ

ಚೀನಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ದೇಶದ ಜನರಿಗೆ ಭರವಸೆ ನೀಡಿದೆ.

ನವದೆಹಲಿ: ಹ್ಯೂಮನ್ ಮೆಟಾಪ್ನ್ಯುಮೋನಿಯಾ (ಎಚ್‌ಎಂಪಿವಿ) ಸೇರಿದಂತೆ ಚೀನಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಶನಿವಾರ ದೇಶದ ಜನರಿಗೆ ಭರವಸೆ ನೀಡಿದೆ.

ಚೀನಾದಲ್ಲಿ ಪರಿಸ್ಥಿತಿ ಅಸಾಮಾನ್ಯವಾಗಿಲ್ಲ ಮತ್ತು ಉಸಿರಾಟದ ಸೋಂಕುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸಿದ್ಧವಾಗಿದೆ ಎಂದು ಆರೋಗ್ಯ ಇಲಾಖೆ ಘೋಷಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಜಂಟಿ ಮೇಲ್ವಿಚಾರಣಾ ಗುಂಪಿನೊಂದಿಗೆ ಶನಿವಾರ ಸಭೆ ನಡೆಸಲಾಯಿತು.

ನಂತರ ಹೇಳಿಕೆಯೊಂದನ್ನು ನೀಡಿ, ದೇಶಾದ್ಯಂತ ಉಸಿರಾಟದ ಸೋಂಕುಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದೆ. ಅಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ತಮ್ಮಲ್ಲಿ ಯಾಂತ್ರಿಕ ವ್ಯವಸ್ಥೆ ಇದೆ ಎಂದು ಆರೋಗ್ಯ ಇಲಾಖೆ ಭರವಸೆ ನೀಡಿದೆ.

HMVP: ಚೀನಾ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಜನರಿಗೆ ಕೇಂದ್ರದ ಭರವಸೆ

ಮತ್ತೊಂದೆಡೆ, ಚೀನಾದಲ್ಲಿ ಬೆಕ್ಕುಗಳು ಫೆಲೈನ್ ಇನ್ಫೆಕ್ಶಿಯಸ್ ಪೆರಿಟೋನಿಟಿಸ್ ಎಂಬ ಮಾರಣಾಂತಿಕ ವೈರಸ್‌ನಿಂದ ಪ್ರಭಾವಿತವಾಗಿರುವ ವರದಿಗಳಿವೆ. ಈ ಹಿನ್ನೆಲೆಯಲ್ಲಿ, ಅವುಗಳನ್ನು ಸಾಕುತ್ತಿರುವ ಕೆಲವರು ತಮ್ಮ ಬೆಕ್ಕಿಗೆ ಕೋವಿಡ್‌ಗೆ ಬಳಸಿದ ಔಷಧಿಗಳನ್ನು ನೀಡುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

No Need to Worry About Rising Respiratory Diseases in China, Says Health Ministry

English Summary
Related Stories